ETV Bharat / state

ಮಾನವ ಹಕ್ಕುಗಳ ರಕ್ಷಣಾ ವೇದಿಕೆ ಮುಖಂಡನ ವಿರುದ್ಧ ಪ್ರಾಣ ಬೆದರಿಕೆ ದೂರು : ಬೆಮೆಲ್ ಪೊಲೀಸ್ ಠಾಣೆ ಎದುರು ಹೈಡ್ರಾಮಾ - Kolar

ಪ್ರಕರಣದಲ್ಲಿ ಕೆಲ ಪೊಲೀಸರು ಭಾಗಿಯಾಗಿ ಸುಖಾ ಸುಮ್ಮನೆ ದೂರು ದಾಖಲಿಸಿದ್ದಾರೆ ಎಂಬುದು ಬಾಬು ಕುಟುಂಬಸ್ಥರ ಆರೋಪ. ಹಾಗಾಗಿ, ಮಧ್ಯರಾತ್ರಿ ಠಾಣೆಗೆ ಮುತ್ತಿಗೆ ಹಾಕಿರುವ ಬಾಬು ಹಾಗೂ ಕುಟುಂಬಸ್ಥರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ..

Kolar
ಬೆಮೆಲ್ ಪೊಲೀಸ್ ಠಾಣೆ ಎದುರು ಹೈಡ್ರಾಮಾ
author img

By

Published : Jul 9, 2021, 7:49 AM IST

ಕೋಲಾರ : ಸುಖಾ ಸುಮ್ಮನೆ ಮಾನವ ಹಕ್ಕುಗಳ ರಕ್ಷಣಾ ವೇದಿಕೆ ಮುಖಂಡ ಬಾಬು ಎಂಬುವರ ವಿರುದ್ದ ದೂರು ದಾಖಲಾದ ಹಿನ್ನೆಲೆ ಪೊಲೀಸ್ ಠಾಣೆ ಎದುರು ಬಾಬು ಕುಟುಂಬದ ಸದಸ್ಯರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬೆಮೆಲ್ ಪೊಲೀಸ್ ಠಾಣೆ ಎದುರು ಈ ಹೈಡ್ರಾಮಾ ನಡೆದಿದೆ. ಕೆಜಿಎಫ್​​ಎಆರ್​​ಟಿಒ ಕಚೇರಿ ಬಳಿ ಪ್ರಾಣ ಬೆದರಿಕೆ ಹಾಕಿರುವ ಪ್ರಕರಣವನ್ನ ಬೆಮೆಲ್ ನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೆಜಿಎಫ್ ತಾಲೂಕಿನ ಚಿಕ್ಕ ಕಲ್ಲಹಳ್ಳಿಯ ಕೃಷ್ಣಾರೆಡ್ಡಿ ಎಂಬಾತ ಮಾನವ ಹಕ್ಕುಗಳ ಸಂಘಟನೆ ಮುಖಂಡ ಬಾಬು ವಿರುದ್ದ ಬೆಮೆಲ್ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆ ದೂರು ನೀಡಿದ್ದಾನೆ.

ಬೆಮೆಲ್ ಪೊಲೀಸ್ ಠಾಣೆ ಎದುರು ಹೈಡ್ರಾಮಾ..

ಜುಲೈ 4ರಂದು ಪ್ರಾಣ ಬೆದೆರಿಕೆ ಪ್ರಕರಣ ದಾಖಲು ಮಾಡಲಾಗಿದೆ. ನಾನು ಆ ವೇಳೆ ಊರಲ್ಲಿ ಇರಲಿಲ್ಲ, ದೆಹಲಿಯಲ್ಲಿದ್ದೆ. ಪೊಲೀಸರು ಹಾಗೂ ಅರೋಪಿಗಳು ಸೇರಿಕೊಂಡು ಪಿಎಸ್​​ಐ ಹಣ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ ಎಂದು ಬಾಬು ಆರೋಪಿಸಿದ್ದಾರೆ. ಹಾಗಾಗಿ, ಬಾಬು ಹಾಗೂ ಕುಟುಂಬ ಸದಸ್ಯರು ಬೆಮೆಲ್ ನಗರ ಪೊಲೀಸ್ ಠಾಣೆ ಎದುರು ಮಹಿಳೆ ಕೈ ಕೊಯ್ದುಕೊಳ್ಳುವ ಬೆದರಿಕೆ ಹಾಕುವ ಮೂಲಕ ದೊಡ್ಡ ಹೈಡ್ರಾಮಾ ನಡೆಯಿತು.

ಪ್ರಕರಣದಲ್ಲಿ ಕೆಲ ಪೊಲೀಸರು ಭಾಗಿಯಾಗಿ ಸುಖಾ ಸುಮ್ಮನೆ ದೂರು ದಾಖಲಿಸಿದ್ದಾರೆ ಎಂಬುದು ಬಾಬು ಕುಟುಂಬಸ್ಥರ ಆರೋಪ. ಹಾಗಾಗಿ, ಮಧ್ಯರಾತ್ರಿ ಠಾಣೆಗೆ ಮುತ್ತಿಗೆ ಹಾಕಿರುವ ಬಾಬು ಹಾಗೂ ಕುಟುಂಬಸ್ಥರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಪೊಲೀಸ್ ಠಾಣೆ ಎದುರು ನಡೆದ ಹೈಡ್ರಾಮಾದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.