ಕೋಲಾರ: ಜಿಲ್ಲೆಯಾದ್ಯಂತ ವರ್ಷಧಾರೆಯ ಅಬ್ಬರಕ್ಕೆ ಕೆರೆಗಳು ಕೋಡಿಬಿದ್ದಿವೆ. ದೊಡ್ಡ ಕೆರೆಯಾದ ಕೋಲಾರಮ್ಮನ ಕೆರೆ ತುಂಬಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನಕ್ಕೂ ತೊಂದರೆಯಾಗಿದೆ.
ಕಳೆದ ರಾತ್ರಿಯ ಮಳೆಗೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿತು. ಕೆಲ ಬಡಾವಣೆಗಳು ಜಲಾವೃತವಾದವು.ಶಾಂತಿನಗರ ಮತ್ತು ರೆಹಮತ್ ನಗರ, ಚೌಡೇಶ್ವರಿ ನಗರಗಳಲ್ಲಿ ಮನೆಯೊಳಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ನಿಂತಿರುವ ನೀರು ನಿಂತಿದ್ದು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆ ತಲೆದೋರಿದೆ. ರಾಜಕಾಲುವೆ ಒತ್ತುವರಿಯಿಂದಾಗಿ ಈ ಅವಾಂತರಗಳಾಗಿವೆ ಎಂದು ಸಾರ್ವಜನಿಕರು ದೂರಿದರು.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಮುಂಗಾರು ಮಳೆ ಲೀಲೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ