ETV Bharat / state

ಹೆಚ್ಚುತ್ತಿದೆ ಬಿಸಿಲ ಝಳ: ಬಡವರ ಫ್ರಿಡ್ಜ್​ಗೆ ಬಂತು ಬೇಡಿಕೆ - news kannada

ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ದುಬಾರಿ ಬೆಲೆ ತೆತ್ತು ದಾಹ ತೀರಿಸಿಕೊಳ್ಳುತ್ತಿದ್ದ ಕೋಲಾರದ ನಿವಾಸಿಗರು ಆರೋಗ್ಯದ ಹಿತದೃಷ್ಟಿಯಿಂದ ಇದೀಗ ಮಣ್ಣಿನ ಮಡಿಕೆಗಳತ್ತ ಮುಖ ಮಾಡಿದ್ದಾರೆ.

ಮಣ್ಣಿನ ಮಡಿಕೆಗಳ ಮಾರಾಟ
author img

By

Published : Mar 13, 2019, 6:25 PM IST

Updated : Mar 13, 2019, 6:54 PM IST

ಕೋಲಾರ: ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ದಾಹ ತೀರಿಸಿಕೊಳ್ಳಲು ನಗರದ ನಿವಾಸಿಗರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ದುಬಾರಿ ಬೆಲೆ ತೆತ್ತು ದಾಹ ತೀರಿಸಿಕೊಳ್ಳಬೇಕಾದ ಜನ ಇದೀಗ ಈ ಧಗೆಯಲ್ಲಿ ನೀರನ್ನು ತಂಪಾಗಿಡುವ ಮಣ್ಣಿನ ಮಡಿಕೆಗಳತ್ತ ಮುಖ ಮಾಡಿದ್ದಾರೆ.

ಮಣ್ಣಿನ ಮಡಿಕೆಗಳ ಮಾರಾಟ

ಬಡವರ ಫ್ರಿಡ್ಜ್​ ಎಂದು ಕರೆಯಲಾಗುವ ಮಣ್ಣಿನ ಮಡಿಕೆಗಳು ನಗರದಲ್ಲಿ ಇದೀಗ ಹೆಚ್ಚಾಗಿ ಕಾಣುತ್ತಿದ್ದು, ಜನರು ಈ ಮಣ್ಣಿನ ಮಡಿಕೆಗಳನ್ನೇ ಕೊಂಡುಕೊಳ್ಳುತ್ತಿದ್ದಾರೆ. ಹಾಗಾಗಿ ಮಣ್ಣಿನ ಮಡಿಕೆಗಳಿಗೆ ಇದೀಗ ಭಾರೀ ಡಿಮ್ಯಾಂಡ್​ ಬಂದಿದೆ.

ಇದರಲ್ಲಿನ ನೀರು ಕುಡಿದರೆ ಯಾವುದೇ ರೋಗ ಬರುವುದಿಲ್ಲ. ಅಲ್ಲದೆ ಇಂತಹ ಮಡಿಕೆಗಳನ್ನು ಬಳಸುವುದರಿಂದ ಹಣವನ್ನು ಸಹ ಉಳಿಸಬಹುದು. ಇನ್ನು ಈ ವೃತ್ತಿಯಲ್ಲಿರುವ ಕಾರ್ಮಿಕರಿಗೂ ಇದರಿಂದ ಸ್ವಲ್ಪ ಸಹಕಾರಿಯಾಗುತ್ತದೆ ಎನ್ನುತ್ತಾರೆ ಸ್ಥಳೀಯ ಪ್ರಜ್ಞಾವಂತರು.

ಮಡಿಕೆಗಳ ವ್ಯಾಪಾರಸ್ಥ

ಸಾಮಾನ್ಯವಾಗಿ ಮಣ್ಣಿನ ಮಡಿಕೆಗಳನ್ನು ಬಳಸುವುದು ಬಡವರು ಮಾತ್ರ. ಇನ್ನು ಈ ಹಿಂದೆ ಮಣ್ಣಿನ ಮಡಿಕೆಗಳ ಬಳಕೆ ಹೆಚ್ಚಗಿಯೇ ಇತ್ತು. ಕಾಲ ಸರಿದಂತೆ ಅಲ್ಯೂಮಿನಿಯಂ ಸೇರಿದಂತೆ ಇನ್ನಿತರ ಪಾತ್ರೆಗಳು ಲಗ್ಗೆ ಇಟ್ಟಿದ್ದರಿಂದ ಮಡಿಕೆಗಳ ಬಳಕೆ ಕಡಿಮೆಯಾಗಿದೆ. ಅದಾಗ್ಯೂ ಆರೋಗ್ಯದ ಹಿತದೃಷ್ಟಿಯಿಂದ ಕೆಲವರು ಈ ಮಡಿಕೆಗಳನ್ನೇ ಅರೆಸಿ ಬರುತ್ತಿರುವುದರಿಂದ ನಮ್ಮಂತವರ ಜೀವನ ನಡೆದಿದೆ ಎನ್ನುತ್ತಾರೆ ಮಡಿಕೆ ತಯಾರಿಕ ಕೇಶವ.

Intro:Body:

ಕೋಲಾರ

ದಿನಾಂಕ - 11-03-19

ಸ್ಲಗ್ - ಬಡವರ ಫ್ರಿಡ್ಜ್

ಫಾರ್ಮಾಟ್ - ಪ್ಯಾಕೇಜ್

ಆಂಕರ್ : ಅದು ಬಿಸಿಲಿನ ಬಾಯಾರಿಕೆಗೆ ಬಡವರ ಪಾಲಿನ ಫ್ರಿಡ್ಜ್. ಅದ್ರಲ್ಲಿನ ನೀರು ಬಲು ಹಿತ. ದಣಿವಾರಿಸಿಕೊಳ್ಳಲು ಎಲ್ಲಾ ಪಾನಿಯಗಳಿಗಿಂತ ಇದ್ರಲ್ಲಿನ ತಣ್ಣನೆಯ ನೀರು ಬಲು ರುಚಿ. ಹೀಗಾಗಿ ಎಲ್ಲೆಡೆ ಬಿಸಿಲಿನ ಛಳದಿಂದ ಕ್ಷಣ ಕ್ಷಣಕ್ಕೂ ದಾಹ ತೀರಿಸಿಕೊಳ್ಳೊ ಸಲುವಾಗಿ ಇವುಗಳ ಅವಲಂಬನೆಗೆ ಜನ್ರು ಒಳಗಾಗಿದ್ದಾರೆ. ಇಷ್ಟಕ್ಕೂ ಯಾವುದಾ ಬಡವರ ಪಾಲಿನ ಫ್ರಿಡ್ಜ್, ಈ ವರದಿಯಲ್ಲಿದೆ. 

ವಾಯ್ಸ್ ಓವರ್ 1: ಹೀಗೆ ಮಣ್ಣಿನಲ್ಲಿ ಸಾರೆ ಯಂತ್ರದ ಮೂಲಕ ಆಕೃತಿಗಳನ್ನ ನೀಡುತ್ತಿರೋ ಕಾರ್ಮಿಕರು. ಇನ್ನೊಂದೆಡೆ ಮಣ್ಣಿನಿಂದ ತಯಾರಾಗಿರುವ ಮಡಕೆಗಳ ವ್ಯಾಪಾರದಲ್ಲಿ ತೊಡಗಿರೋ ಜನ್ರು, ಈ ಮಡಕೆಗಳೆ ಇಂದಿನ ಬಡವರ ಪಾಲಿನ ಫ್ರಿಡ್ಜ್‍ಗಳು. ಹೌದು ಬೇಸಿಗೆ ಕಾವಿನ ಧಗೆಯನ್ನು ತಂಪು ಮಾಡಿಕೊಳ್ಳಲು ಉಳ್ಳವರು ಎಸಿ, ಫ್ರಿಡ್ಜ್ ನಂತಹ ದುಬಾರಿ ವಸ್ತುಗಳ ಮೊರೆ ಹೋಗಿ ತಂಪಾದ್ರೆ. ಇನ್ನೂ ಇಲ್ಲದವರು ಮಣ್ಣಿನ ಮಡಿಕೆ ಮೊರೆ ಹೋಗಿ ತಂಪು ನೀರಿನಿಂದ ತಮ್ಮ ಧಣಿವಾರಿಸಿಕೊಳ್ತಾರೆ. ಈಗಿನ ಬೇಸಿಗೆಗೆ ಬಡವರ ಫ್ರಿಡ್ಜ್‍ಗೆ ಬಾರಿ ಡಿಮ್ಯಾಂಡ್. ಅಯ್ಯೋ ತಂಪು ಪಾನೀಯಗಳನ್ನು ಕುಡಿದ್ರೆ, ಇಲ್ಲ ಸಲ್ಲದ ರೋಗಗಳು ಬರ್ತವೆ ಅನ್ನೋ ಆತಂಕವೂ ಇರುತ್ತೆ. ಹೀಗಾಗಿ ಮಡಕೆ ನೀರಿನಿಂದ ಆರೋಗ್ಯಕ್ಕೆ ಉತ್ತಮವಾಗಿರುತ್ತೆ, ಬದಲಾಗಿ ತಂಪು ಪಾನಿಯಕ್ಕಿಂತ ಹಿತ ನೀಡಬಲ್ಲದು. ಹೀಗೆ ಗ್ರಾಮೀಣ ಸೊಗಡನ್ನೊಳಗೊಂಡಿರುವ ಮಣ್ಣಿನ ಮಡಿಕೆಗೆ ತನ್ನದೆ ಆದ ಹಿನ್ನಲೆಯನ್ನೊಳಗೊಂಡಿದೆ. 

ಬೈಟ್ 1: ಕೇಶವ (ಮಡಿಕೆ ತಯಾರಿಕ)

ವಾಯ್ಸ್ ಓವರ್ 2: ಸಾಮಾನ್ಯವಾಗಿ ಮಣ್ಣಿನ ಮಡಿಕೆ ಬಳಸುವುದು ಬಡ ಜನ್ರು, ಕೂಲಿ ನಾಲಿ ಮಾಡಿ ಜೀವನ ಸಾಗಿಸುವವರು. ಇನ್ನು ಈ ಹಿಂದೆ ಮಣ್ಣಿನ ಮಡಕೆಗಳ ಬಳಕೆ ಹೆಚ್ಚಗಿಯೇ ಇತ್ತು . ಕಾಲ ಸರಿದಂತೆ ಅಲ್ಯೂಮಿನಿಯಂ ಸೇರಿದಂತೆ ಇನ್ನಿತರ ಪಾತ್ರೆಗಳು ಲಗ್ಗೆ ಇಟ್ಟ ನಂತ್ರ ಮಡಕೆ ಬಳಕೆ ಹಿಂದಿಗೆ ಸರಿದಿದೆ. ಇನ್ನು ಬಿಸಿಲ ಬೇಗೆಯಲ್ಲಿ ಮಣ್ಣಿನ ಮಡಕೆಯ ನೀರು ಹೆಚ್ಚು ಮದ ನೀಡುತ್ತದೆಯಾದ್ರು ಬಡವರ ಫ್ರಿಡ್ಜ್ ಎಂದೆ ಕರೆಯುವ ಮಡಕೆಗಳ ಬೆಲೆಯೂ ಕೂಡ ಹೆಚ್ಚಿದೆ. ಇನ್ನು ಮಡಕೆ ತಯಾರಿಸುವವರು ಬಡವರೇ ಆಗಿದ್ದು, ಸಿಗುವ 10 ರಿಂದ 20 ರೂಗಳಿಗೆ ತಮ್ಮ ಜೀವನವಿಡೀ ಮಣ್ಣಲ್ಲೇ ಕಳೆದು ಮಣ್ಣಿನ ವಿವಿಧ ಆಕಾರಗಳನ್ನು ತಯಾರಿಸಿ ಜೀವನ ಸಾಗಿಸ್ತಾರೆ. ತಮ್ಮ ಪೂರ್ವಜರು ಹಾಕಿಕೊಟ್ಟ ದಾರಿಯಲ್ಲೇ ಇಂದಿಗೂ ಜೀವನ ಸಾಗಿಸುತ್ತಿರುವ ಇವ್ರಿಗೆ ಮಣ್ಣೆ ಎಲ್ಲಾ. ಹಾಗಾಗಿ ಆರೋಗ್ಯದ ಹಿತದೃಷ್ಟಿಯಿಂದ ಮಣ್ಣಿನ ಮಡಕೆಗಳು ಬಳಸುವುದು ಒಳ್ಳೆಯದು ಸಹ. ಆದ್ರಿಂದ ಮಡಿಕೆಯ ಬಳಕೆಯಿಂದ ಕುಂಬಾರ ವೃತ್ತಿಯೂ ಉಳಿಯುತ್ತದೆ ಅನ್ನೋದು ಮಡಿಕೆ ಮಾಡುವವರ ಮಾತು.

ಬೈಟ್ 2: ಶಶಿಕಲಾ (ಗ್ರಾಹಕರು)

ವಾಯ್ಸ್ ಓವರ್ 3: ಒಟ್ನಲ್ಲಿ ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಅನ್ನುವಂತೆ. ತನ್ನದೆ ಆದ ಇತಿಹಾಸ ಹೊಂದಿರುವ ತಂಪಾದ ಮಡಿಕೆಗೆ ಇಂದಿಗೂ ದುಬಾರಿಯೇ ಸರಿ. ತಂಪಾದ ಪಾನೀಯ ಹಾಗೂ ಫ್ರಿಡ್ಜ್‍ಗಳ ಹಾವಳಿಯಿಂದ ನಗರ ಪ್ರದೇಶಗಳಲ್ಲಿ ಅವನತಿ ಕಾಣುತ್ತಿದ್ದ ಮಡಿಕೆಗೆ, ಈಗ ಗ್ರಾಮೀಣ ಪ್ರದೇಶ ಸೇರಿದಂತೆ ನಗರ ಪ್ರದೇಶದಲ್ಲಿ ಕೂಡ ಬೇಡಿಕೆ ಇದೆ.

ಮಹೇಶ್ ಟಿವಿ ಭಾರತ ಕೋಲಾರ.

Conclusion:
Last Updated : Mar 13, 2019, 6:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.