ಕೋಲಾರ: ದೇಶದಲ್ಲಿ ಪ್ರಧಾನಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಹಾಗಾದರೆ, ಪ್ರಧಾನಿ ಮೋದಿ ಸೇರಿ ಉಳಿದ ಎಲ್ಲರೂ ಭ್ರಷ್ಟರಾ? ಎಂದು ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಸಿದ್ದರಾಮಯ್ಯರ ಕ್ಷೇತ್ರದ ವಿಚಾರವಾಗಿ ಪ್ರತಿಕ್ರಿಯಿಸಿ, 5 ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಒಂದು ಕ್ಷೇತ್ರದ ಆಯ್ಕೆ ಬಗ್ಗೆ ಸ್ಪಷ್ಟನೆ ಇಲ್ಲವಾದರೆ ಇವರು ಎಲ್ಲಿ ಉತ್ತಮ ನಾಯಕತ್ವ, ಆಡಳಿತ ಕೊಡುತ್ತಾರೆ ಎನ್ನುವುದೇ ಪ್ರಶ್ನೆ. ಅವರಿಗೆ ಬಹಳ ಕಡೆ ಆಹ್ವಾನ ಇರಬಹುದು, ಆದ್ರೆ ಒಂದು ಕ್ಷೇತ್ರ ಆಯ್ಕೆ ಮಾಡುವ ಬಗ್ಗೆ ಸ್ಪಷ್ಟನೆ ಇಲ್ಲವಲ್ಲ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿಂದ ಆಡಳಿತಕ್ಕೆ ಬರುತ್ತದೆ. 150 ಸೀಟ್ ಎಲ್ಲಿ ಗೆಲ್ಲುತ್ತಾರೆ ಅನ್ನೋದನ್ನು ಜನ ತೀರ್ಮಾನಿಸಬೇಕು, ಮತ ನೀಡುವವರು ಜನತೆ ಎಂದು ತಿಳಿಸಿದರು.
ಇದನ್ನೂ ಓದಿ: ಕೊರೊನಾ ನಾಲ್ಕನೇ ಅಲೆಗೆ ಹೆದರಬೇಡಿ, ಜಾಗ್ರತೆ ವಹಿಸಿ: ಸಿಎಂ ಬೊಮ್ಮಾಯಿ
ಜೆಡಿಎಸ್ ನಾಯಕಿ ಭವಾನಿ ರೇವಣ್ಣಗೆ ಟಿಕೆಟ್ ಕೊಡುವ ಬಗ್ಗೆ ಇನ್ನೂ ನಿಶ್ಚಯವಾಗಿಲ್ಲ. ಹಾಸನ ಅಭ್ಯರ್ಥಿಯಾಗಿದ್ದ ಪ್ರಕಾಶ್ ಅವರ ಕುಟುಂಬಕ್ಕೆ ಸ್ಥಾನ ನೀಡಬೇಕಿದೆ, ಭವಾನಿ ರೇವಣ್ಣ ಅವರು ಕೂಡ ಈಗಾಗಲೇ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಭವಾನಿ ರೇವಣ್ಣ ಒಂದಲ್ಲೊಂದು ದಿನ ಎಂಎಲ್‍ಎ ಆಗೇ ಆಗುತ್ತಾರೆ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.