ETV Bharat / state

70 ಲಕ್ಷ ಮೌಲ್ಯದ ಸರ್ಕಾರಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ.. ಕುಡುಕರ ಪಾಲಿಗೆ ಇದುವೇ ಸೌಭಾಗ್ಯ.. - Kannada news

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಗ್ರಾಮದ ಹಿರಿಯರು ದಾನವಾಗಿ ನೀಡಿರುವ ಅರ್ಧ ಎಕರೆ ಭೂಮಿಯಲ್ಲಿ ಜನವರಿ 6, 2011 ರಂದು ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಆದರೆ, ಈವರೆಗೂ ಶಾಲೆಗೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

70 ಲಕ್ಷ ಮೌಲ್ಯದ ಸರ್ಕಾರಿ ಶಾಲೆಗಿಲ್ಲ ಅಭಿವೃದ್ಧಿಯ ಭಾಗ್ಯ
author img

By

Published : Jul 13, 2019, 9:44 PM IST

ಕೋಲಾರ : ಅದು ಜ್ಞಾನ ದೇಗುಲ. ಸರ್ಕಾರ ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರಿ ಪ್ರೌಢ ಶಾಲೆ. ಉದ್ಘಾಟನೆಗೂ ಮುನ್ನವೇ ಶಿತಿಲಾವಸ್ಥೆ ತಲುಪಿದ್ದು, ಶಾಲಾ ಕಟ್ಟಡ ನಿರ್ಮಾಣ ಆರಂಭವಾಗಿ 6 ವರ್ಷ ಕಳೆದ್ರೂ ಇನ್ನೂ ಮುಗಿದಿಲ್ಲ. ಬದಲಾಗಿ ಕುಡುಕರ, ಹಂದಿ, ನಾಯಿಗಳ ಆಶ್ರಯ ತಾಣವಾಗಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಗಾಜಗ ಗ್ರಾಮದ ಸರ್ಕಾರಿ ಫ್ರೌಢ ಶಾಲೆಯ ಕಟ್ಟಡ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಗ್ರಾಮದ ಹಿರಿಯರು ದಾನವಾಗಿ ನೀಡಿರುವ ಅರ್ಧ ಎಕರೆ ಭೂಮಿಯಲ್ಲಿ 2011ರ ಜನವರಿ 6 ರಂದು ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಆದರೆ, ಈವರೆಗೂ ಶಾಲೆಗೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನ ಯೋಜನೆಯಡಿ ಸುಮಾರು 70 ಲಕ್ಷ ಮೌಲ್ಯದ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮುಂದಾಗಿ, ಆಂಧ್ರ ಮೂಲದ ಜಂಪನ ಕನ್ಟ್ರಕ್ಷನ್​ ಕಂಪನಿಗೆ ಗುತ್ತಿಗೆ ನೀಡಿತ್ತು. 2013ರಲ್ಲಿ ಕಾಮಗಾರಿ ಆರಂಭ ಮಾಡಿದ ಕಂಪನಿ, ಟೆಂಡರ್ ಪ್ರಕಾರ 2 ವರ್ಷದೊಳಗಾಗಿ ಶಾಲಾ ಕಟ್ಟಡವನ್ನ ನಿರ್ಮಿಸಿಕೊಡಬೇಕಾಗಿತ್ತು. ಆದರೆ, ಅನುದಾನ ಬಿಡುಗಡೆಯಾಗಿಲ್ಲವೆಂದು ಸಬೂಬು ಹೇಳಿ ಗುತ್ತಿಗೆದಾರ ಕಾಣಿಯಾಗಿದ್ದು, 6 ವರ್ಷದಿಂದ ಕಾಮಗಾರಿ ಸ್ಥಗಿತಗೊಂಡು ಮಕ್ಕಳು ಪರದಾಡುವಂತಾಗಿದೆ.

70 ಲಕ್ಷ ಮೌಲ್ಯದ ಸರ್ಕಾರಿ ಶಾಲೆಗಿಲ್ಲ ಅಭಿವೃದ್ಧಿಯ ಭಾಗ್ಯ..

ಬೃಹತ್ ಶಾಲಾ ಕಟ್ಟಡ ಅಪೂರ್ಣಗೊಂಡಿರುವ ಹಿನ್ನೆಲೆ ಅಕ್ರಮ ಚಟುವಟಿಕೆ ಕೇಂದ್ರವಾಗಿದೆ. ಜಾನುವಾರುಗಳು, ನಾಯಿಗಳ ಹಾಗೂ ಕುಡುಕರಿಗೆ ಆಶ್ರಯ ನೀಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆದಾರರು ಬೇರೊಂದು ತಂಡಕ್ಕೆ ಗುತ್ತಿಗೆ ನೀಡಿದ್ದು, ಗೋಡೆಗಳು ನಿರ್ಮಾಣವಾಗಿದೆ. ಆದರೆ, ಸಿಮೆಂಟ್ ಪ್ಲಾಸ್ಟಿಂಗ್ ಬಾಕಿ ಉಳಿದಿದೆ. ಮಾಡಿರುವ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ.

ಅಂದಿನ ಕೋಲಾರ ಡಿಸಿ ತ್ರಿಲೋಕಚಂದ್ರ ಕೂಡ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ರು. ಕಳೆದ 8 ವರ್ಷಗಳಿಂದ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆ ಕಟ್ಟಡದಲ್ಲೇ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠ, ಮತ್ತೊಂದು ಭಾಗದಲ್ಲಿ ಹೈಸ್ಕೂಲ್​ ಮಕ್ಕಳಿಗೆ ಪಾಠ, ಹೀಗೆ ಎಲ್ಲಾ ಅಡ್ಜೆಸ್ಟ್​ ಮಾಡಿಕೊಂಡು ಹೋಗುವ ಪರಿಸ್ಥಿತಿ ಇದ್ದು, ಮಕ್ಕಳ ಕಲಿಕೆಗೆ ಕಿರಿಕಿರಿಯಾಗಿದೆ.

Intro:ಸ್ಲಗ್​: ಹೈಸ್ಕೂಲೋ ಪ್ರೈಮರಿನೋ..?

ಆಂಕರ್:ಅದು ಜ್ಞಾನ ದೇಗುಲ,ಸರ್ಕಾರ ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರಿ ಪ್ರೌಢ ಶಾಲೆ. ಉದ್ಘಾಟನೆಗೂ ಮುನ್ನವೆ ಶಿತಲಾವಸ್ಥೆ ತಲುಪಿದ್ದು, ಶಾಲಾ ಕಟ್ಟಡ ನಿರ್ಮಾಣ ಆರಂಭವಾಗಿ 6 ವರ್ಷ ಕಳೆದ್ರು ಶಾಲೆ ಮಾತ್ರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಿಕ್ಕಿಲ್ಲ, ಬದಲಾಗಿ ಕುಡುಕರ ನಾಯಿ ನರಿಗಳ ಆಶ್ರಯ ತಾಣವಾಗಿದೆ.
Body:ವಾ/ಓ:1 ನಿರ್ಮಾಣ ಹಂತದಲ್ಲಿರುವ ಬೃಹತ್​ ಕಟ್ಟಡ,ನಿರ್ಮಾಣಕ್ಕೂ ಮೊದಲೇ ಪಾಳುಬಿದ್ದು ಆಗಲೋಈಗಲೋ ಮುರಿದು ಬೀಳುವಂತಿರುವ ಬಿಡ್ಡಿಂಗ್​,ಇದು ಸರ್ಕಾರಿ ಪ್ರೌಢ ಶಾಲೆಯ ನೂತನ ಕಟ್ಟಡ. ಇಂಥಾದೊಂದು ದುಸ್ಥಿತಿ ತಲುಪಿರುವ ಕಟ್ಟಡ ಇರೋದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಗಾಜಗ ಗ್ರಾಮದ ಸರ್ಕಾರಿ ಫ್ರೌಢ ಶಾಲೆಯ ಕಟ್ಟಡ. ಹೌದು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಗ್ರಾಮದ ಹಿರಿಯರು ದಾನವಾಗಿ ನೀಡಿರುವ ಅರ್ದ ಎಕರೆ ಭೂಮಿಯಲ್ಲಿ ಜನವರಿ 6 ರ 2011 ರಂದು ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಆದ್ರೆ ಈವರೆಗೂ ಶಾಲೆಗೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹೈಸ್ಕೂಲ್​ ಮಕ್ಕಳು ಕೂಡಾ ಪ್ರಾಥಮಿಕ ಶಾಲೆಯಲ್ಲಿ ಕಲಿಯಬೇಕಾಗಿದ ಪರಿಸ್ಥಿತಿ ಎದುರಾಗಿದೆ. ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನ ಯೋಜನೆ ಮೂಲಕ ಸುಮಾರು 70 ಲಕ್ಷ ಮೌಲ್ಯದ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಆಂದ್ರ ಮೂಲದ ಜಂಪನ ಕನ್ಟ್ರಕ್ಷನ್​ ಕಂಪನಿಗೆ ಗುತ್ತಿಗೆ ನೀಡಿದ್ದು, 2013 ರಲ್ಲಿ ಕಾಮಗಾರಿ ಆರಂಭ ಮಾಡಿದೆ, ಟೆಂಡರ್ ಪ್ರಕಾರ 2 ವರ್ಷದೊಳಗಾಗಿ ಶಾಲಾ ಕಟ್ಟಡವನ್ನ ನಿರ್ಮಿಸಿಕೊಡಬೇಕಾಗಿತ್ತು. ಆದ್ರೆ ಅನುದಾನ ಬಿಡುಗಡೆಯಾಗಿಲ್ಲವೆಂದು ಸಬೂಬು ಹೇಳಿ ಗುತ್ತಿಗೆದಾರ ಕಾಣಿಯಾಗಿದ್ದಾನೆ. ಪರಿಣಾಮ 6 ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದ್ದು ಮಕ್ಕಳ ಪರದಾಟ ಮಾತ್ರ ನಿಂತಿಲ್ಲ.
ಬೈಟ್1: ರವಿಕುಮಾರ್​ (ಮುಖ್ಯೋಪಾಧ್ಯಾಯರು)
         ವಾ/ಓ:2 ಇನ್ನೂ ಬೃಹತ್ ಶಾಲಾ ಕಟ್ಟಡ ಅಪೂರ್ಣಗೊಂಡಿರುವ ಹಿನ್ನೆಲೆ ಅಕ್ರಮ ಚಟುವಟಿಕೆ ಕೇಂದ್ರವಾಗಿದೆ, ಜಾನುವಾರುಗಳು, ನಾಯಿಗಳ ಹಾಗೂ ಕುಡುಕರಿಗೆ ಆಶ್ರಯ ನೀಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆದಾರರು ಬೇರೊಂದು ತುಂಡು ಗುತ್ತಿಗೆ ನೀಡಿದ್ದು, ಗೋಡೆಗಳು ನಿರ್ಮಾಣವಾಗಿದೆಯಾದ್ರು ಸಿಮೆಂಟ್ ಪ್ಲಾಸ್ಟಿಂಗ್ ಬಾಕಿ ಉಳಿದಿದೆ. ಮಾಡಿರುವ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರು ಪ್ರಯೋಜನವಾಗಿಲ್ಲ. ಅಂದಿನ ಕೋಲಾರ ಡಿಸಿ ತ್ರಿಲೋಕಚಂದ್ರ ಕೂಡ ಸ್ಥಳಕ್ಕೆ ಬೇಟಿ ನೀಡಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ರು.ಕಳೆದ 8 ವರ್ಷ ಗಳಿಂದ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆ ಇತರೆ ಕಟ್ಟಡದಲ್ಲೆ ಫ್ರೌಢ ಶಾಲಾ ಮಕ್ಕಳಿಗೆ ಪಾಠ ಪ್ರವಚನ ಮಾಡಲಾಗುತ್ತಿದೆ. ಒಂದೇ ಕೊಠಡಿಯಲ್ಲಿ ಅಲ್ಲೇ ಕಚೇರಿ ಕೆಲಸ,ಮತ್ತೊಂದು ಬಾಗದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠ, ಮತ್ತೊಂದು ಬಾಗದಲ್ಲಿ ಹೈಸ್ಕೂಲ್​ ಮಕ್ಕಳಿಗೆ ಪಾಠ, ಹೀಗೆ ಎಲ್ಲಾ ಅಡ್ಜೆಸ್ಟ್​ ಮಾಡಿಕೊಂಡು ಹೋಗುವ ಪರಿಸ್ಥಿತಿ ಇದ್ದು, ಮಕ್ಕಳಿಗೆ ಇಲ್ಲಿ ಕಲಿಕೆಯೇ ಕಿರಿಕಿರಿಯಾಗಿ ಹೋಗಿದೆ.
ಬೈಟ್ 2: ಐಶ್ವರ್ಯ (ವಿದ್ಯಾರ್ಥಿನಿ)Conclusion:ವಾ/ಓ:3 ಒಟ್ಟಾರೆ ಮಕ್ಕಳ ಉಪಯೋಗಕ್ಕೂ ಬಾರದೆ ಇತ್ತ ಕಟ್ಟಡವೂ ಪೂರ್ಣಗೊಳ್ಳದೆ ಸರ್ಕಾರದ ಸುಮಾರು ಒಂದುವರೆ ಕೋಟಿ ರೂಪಾಯಿ ಅನುಧಾನ ಪೋಲಾಗುತ್ತಿರುವುದು ಮಾತ್ರ ಸುಳ್ಳಲ್ಲ. ಇನ್ನಾದ್ರು ಸಂಬಂದಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಟ್ಟಡ ಪೂರ್ಣಗೊಳಿಸಿ, ಮಕ್ಕಳಿಗೆ ವಿದ್ಯಾ ಭಾಗ್ಯ ಕಲ್ಪಿಸಬೇಕಿದೆ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.