ಕೋಲಾರ: ರೈತರ ಮಕ್ಕಳಿಗೆ ಮದುವೆಯಾಗಲು ಕನ್ಯೆ ನೀಡುತ್ತಿಲ್ಲ ಎಂದು ಯುವ ರೈತನೋರ್ವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿರುವ ವಿವಿಚತ್ರ ಪ್ರಸಂಗವೊಂದು ನಡೆದಿದೆ.
ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಇಂದು ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ಕೋಲಾರ ತಾಲೂಕಿನ ವಿವಿಧೆಡೆ ಕುಮಾರಸ್ವಾಮಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ, ತಾಲೂಕಿನ ಮುದುವತ್ತಿ ಗ್ರಾಮದ ಧನಂಜಯ್ ಎಂಬ ಯುವ ರೈತ, ಕೋಲಾರ ಜಿಲ್ಲೆಯ ಒಕ್ಕಲು ಮಾಡುವಂತಹ ರೈತರ ಮಕ್ಕಳಿಗೆ ಕನ್ಯೆಯರು ಸಿಗುತ್ತಿಲ್ಲ. ವಯಸ್ಸು 45 ದಾಟುತ್ತಿದ್ದರೂ ಹೆಣ್ಣುಗಳು ಸಿಗದೇ ಸಮಸ್ಯೆಯಾಗಿದೆ. ಹೀಗಾಗಿ ಮುಂದೆ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕೋಲಾರ ಜಿಲ್ಲೆಯ ಹೆಣ್ಣುಗಳನ್ನ ಹೊರ ಜಿಲ್ಲೆಯವರಿಗೆ ನೀಡಬಾರದು, ಇದೇ ಜಿಲ್ಲೆಯವರಿಗೆ ಕೊಟ್ಟು ಮದುವೆ ಮಾಡಬೇಕು ಎಂದು ಆದೇಶ ಹೊರಡಿಸಬೇಕೆಂದು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರು ಆರ್ಥಿಕವಾಗಿ ಬಲಿಷ್ಠರಾಗಲು ಯೋಜನೆಯನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಸ್ಪರ್ಧೆಯ ಕ್ಷೇತ್ರ ನಮೂದಿಸದೇ ಕೊನೆ ದಿನ ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ