ಕೋಲಾರ: ರಮೇಶ್ ಕುಮಾರ್ ಭ್ರಷ್ಟ ಎಂದು ಹೇಳಿಕೆ ನೀಡಿದ್ದ ವಿಶ್ವನಾಥ್ ಹೇಳಿಕೆಗೆ ಕೋಲಾರದಲ್ಲಿ ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್ನಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಅಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರೇ ಇದಕ್ಕಿ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎಂದರು.
ಇಂಥ ಸಂದರ್ಭದಲ್ಲಿ ಅವರು(ಹೆಚ್.ವಿಶ್ವನಾಥ್) ತಲೆ ಕೆಟ್ಟಂಗೆ ಮಾತಾಡ್ತಾರೆ. ಒಂದು ಪಕ್ಷದ ಅಧ್ಯಕ್ಷರಾಗಿದ್ದವರಿಗೆ ಬುದ್ದಿ ಇಲ್ವಾ?. ಬುದ್ಧಿ ಹಾಳಾಗಿ ಹೊಟ್ಟೆಗೆ ಏನು ತಿಂತಿದ್ದೀವಿ ಅನ್ನೋದ್ರ ಬಗ್ಗೆ ಜ್ಞಾನ ಇಲ್ವಾ ಎಂದು ಕಿಡಿಕಾರಿದ್ರು. ಆತನಿಗೇನು ಹೇಳ್ತಾನೆ, ಅವನೊಬ್ಬ ಹುಚ್ಚ. ಸರ್ಕಾರ ಬೇಕಾದರೆ ತನಿಖೆ ನಡೆಸಲಿ, ಈತನೇ ತನಿಖಾಧಿಕಾರಿಯಾಗಲಿ ಎಂದು ವಾಗ್ದಾಳಿ ನಡೆಸಿದ್ರು.
ವಿಶ್ವನಾಥ್ ದೇಶಕ್ಕೆ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಏನ್ ಮಾಡಿದ್ದೇನೋ, ಅದನ್ನ ದೇಶಕ್ಕೆಲ್ಲ ಹೇಳಿಕೊಂಡು ಕುಳಿತುಕೊಳ್ಳಲಿ. ತನಿಖೆಯಲ್ಲಿ ಆರೋಪಿಯಾದರೆ ಯಾವ ಜೈಲಿಗೆ ಕಳುಹಿಸ್ತಾರೋ ಕಳುಹಿಸಲಿ ನಾನು ಹೋಗೋದಕ್ಕೆ ರೆಡಿ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ರೈತ ದಸರಾ; ಕುಣಿದು ಕುಪ್ಪಳಿಸಿದ ಮಹಾನಗರ ಪಾಲಿಕೆ ಸದಸ್ಯರು
ರಾಜ್ಯದಲ್ಲಿ ಐಟಿ ದಾಳಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಆ ದಾಳಿ ಬಗ್ಗೆ ನನಗೇನು ಗೊತ್ತಿಲ್ಲ. ನಮ್ಮ ಮನೆ ಮೇಲೇನಾದ್ರೂ ಐಟಿ ದಾಳಿ ನಡೆದಿದೆಯಾ ಎಂದು ಪ್ರಶ್ನಿಸಿದ್ರು. ಸಿದ್ದರಾಮಯ್ಯ ಒಬ್ಬ ಪ್ರೊಫೆಷನಲ್ ಲೀಡರ್ ಆಗಿರುವುದರಿಂದ ಅವರು ಪ್ರತಿಕ್ರಿಯೆ ನೀಡುತ್ತಾರೆ. ಅದು ಅವರ ಜವಾಬ್ದಾರಿ ಕೂಡ. ನಾನು ಸಾಮಾನ್ಯ ಮನುಷ್ಯ. ಹಾಗಾಗಿ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದೇನೆ ಎಂದು ಸಮಜಾಯಿಷಿ ಕೊಟ್ಟರು.