ಕೋಲಾರ : ಶಾಸಕ ಶ್ರೀನಿವಾಸಗೌಡ ಅವರು ಮೂರು ವರ್ಷದಲ್ಲಿ ₹10 ಲಕ್ಷ ಅನುದಾನ ತಂದು ಯಾವುದಾದರೂ ಗ್ರಾಮವನ್ನ ಅಭಿವೃದ್ಧಿಪಡಿಸಲಿ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಸವಾಲು ಹಾಕಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರದ 12 ಗ್ರಾಪಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ತಮ್ಮ ಬೆಂಬಲಿಗರ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಪ.ಜಾತಿ-ಪ.ಪಂಗಡ ವರ್ಗದವರಿಗೆ ಗಂಗಾಕಲ್ಯಾಣ ಯೋಜನೆಯಡಿ 200 ಬೋರ್‌ವೆಲ್ ಕೊರೆಸಿ ಕೊಟ್ಟಿದ್ದೇನೆ.
ಗೌಡರು ಗೆದ್ದು ಮೂರು ವರ್ಷವಾಯಿತು. ಆದರೆ, ಒಂದೂ ಬೋರು ಕೊರೆಸಿಲ್ಲ. ಆ ವರ್ಗದವರು ಬೆಳೆಯಬಾರದು, ಉದ್ದಾರವಾಗುತ್ತಾರೆ ಎಂದು ಆರ್ಥಿಕವಾಗಿ ತುಳಿಯುವ ಪಿತೂರಿ ಶಾಸಕರದ್ದು ಎಂದು ದೂರಿದರು.
ಓದಿ: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಹೆಚ್ಡಿಕೆ
ತಾನು ಬೋರ್‌ವೆಲ್ ಕೊರೆಸಿ ಕೊಟ್ಟಿದ್ದರಿಂದ ಬೆಳೆ ಬೆಳೆದು ಮನೆ ಕಟ್ಟಿ, ಕಾರು ಕೊಂಡರು. ಈಗ ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದಾರೆ. ಇವರು ರಾಜಕೀಯವಾಗಿ, ಆರ್ಥಿಕವಾಗಿ ಮೇಲೆ ಬರುತ್ತಾರೆ ಎಂದು ಮೂಲಸೌಕರ್ಯಗಳನ್ನ ನೀಡುತ್ತಿಲ್ಲ. ಶಾಸಕರು ತಕ್ಷಣವೇ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಕರೆಸಿ, ಎಸ್ಟಿ, ಎಸ್ಸಿಯವರ ಪಟ್ಟಿ ಮಾಡಿಸಲಿ ಎಂದು ಒತ್ತಾಯಿಸಿದರು.