ಕೋಲಾರ:ಕೊರೊನಾ ಸಂಕಷ್ಟದಲ್ಲಿ ಸುಮಾರು ಆರು ತಿಂಗಳಿನಿಂದ ಜೀವನೋಪಾಯಕ್ಕಾಗಿ ಪರಿತಪಿಸುತ್ತಿದ್ದ ನಿರ್ಲಕ್ಷಿತ ತೃತೀಯಲಿಂಗಿ ಸಮುದಾಯದವರಿಗೆ ಯು.ಎಸ್.ಟಿ ಗ್ಲೋಬಲ್ ಕಂಪನಿ ಸಹಾಯ ಹಸ್ತ ಚಾಚಿದೆ.
ಸಾಮಾಜಿಕ ಹೊಣೆಗಾರಿಕೆ ಸೇವಾ ಅಡಿಯಲ್ಲಿ ಬೆಂಗಳೂರಿನ ಯು.ಎಸ್.ಟಿ ಗ್ಲೋಬಲ್ ಕಂಪನಿ ವತಿಯಿಂದ ಕೋಲಾರದ ತೃತೀಯಲಿಂಗಿ ಸಮುದಾಯದ 400 ಮಂದಿಗೆ ಆಹಾರದ ಕಿಟ್ಗಳನ್ನು ವಿತರಿಸಿದ್ರು. ಜೀವನ ಮಾಡಲು ಹರಸಾಹಸ ಪಡುತ್ತಿದ್ದ ಈ ಸಮುದಾಯದ ಬವಣೆಯನ್ನು ಅರಿತ ಯು.ಎಸ್.ಟಿ. ಗ್ಲೋಬಲ್ ಐ.ಟಿ ಕಂಪನಿಯು ಇವರಿಗೆ ಒಂದು ತಿಂಗಳಿಗಾಗುವಷ್ಟು ದಿನಸಿಯನ್ನು ನೀಡಿದೆ.
ಈ ಸಂದರ್ಭದಲ್ಲಿ ಯು.ಎಸ್.ಟಿ.ಗ್ಲೋಬಲ್ ಕಂಪನಿಯ ಸಿ.ಎಸ್.ಆರ್. ವಿಭಾಗದ ಸ್ಮಿತ, ಲತಾ, ವಿಶ್ವಾಸ್, ಅರವಿಂದ್, ಶಿವಕುಮಾರ್ ಹಾಗೂ ಸಂಗಮ ಮತ್ತು ಸಮ್ಮಿಲನ ಸಂಸ್ಥೆಯ ಪ್ರತಿನಿಧಿ ಅಶ್ವಿನಿ ರಾಜನ್ ಹಾಜರಿದ್ದರು.