ಕೋಲಾರ: ನೂರಾರು ಪಕ್ಷಿಗಳಿಗೆ ಆಸರೆಯಾಗಿದ್ದ ಬೃಹತ್ ಆಲದ ಮರವೊಂದು ನೆಲಕ್ಕುರುಳಿರುವ ಘಟನೆ ಕೋಲಾರ ನಗರದಲ್ಲಿ ನಡೆದಿದೆ.
ಓದಿ: ಈ ಸರ್ಕಾರಿ ಕಚೇರಿಯ ರಾಣಿ ಇನ್ನಿಲ್ಲ: ಜಲಮಂಡಳಿ ಕಚೇರಿಯಲ್ಲಿ ಈಕೆಯದೇ ನೆನಪು!
ಕೋಲಾರದ ಗಾಂಧೀ ನಗರದಲ್ಲಿದ್ದ ಸುಮಾರು 300 ವರ್ಷಗಳ ಇತಿಹಾಸವಿರುವ ಬೃಹತ್ ಗಾತ್ರದ ಆಲದ ಮರವೊಂದು ನೆಲಕ್ಕುರುಳಿದೆ. ಕೋಲಾರದ ಗಾಂಧಿನಗರದ ಹೆಬ್ಬಾಗಿಲಿನಲ್ಲಿದ್ದ ಬೃಹತ್ ಆಲದ ಮರ, ನೂರಾರು ಜನರ ವಿಶ್ರಾಂತಿ ಧಾಮ ಹಾಗೂ ಆರೋಗ್ಯಕ್ಕೆ ಆಸರೆಯಾಗಿತ್ತು.
ಬೃಹತ್ ಆಲದ ಮರ ಉರುಳಿ ಬಿದ್ದ ಪರಿಣಾಮ ಎರಡು ದೇವಾಲಯಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಹಿಂಡು - ಹಿಂಡಾಗಿ ಜನರು ಮರ ವೀಕ್ಷಣೆ ಮಾಡುತ್ತಿದ್ದು, ಸುಮಾರು 300 ವರ್ಷಗಳ ಇತಿಹಾಸವುಳ್ಳ ಮರ ನೆಲಕ್ಕುರುಳಿದ್ದು, ಸ್ಥಳೀಯರಲ್ಲಿ ಕೆಡಕಾಗುವ ಭಯ ಮೂಡಿದೆ. ಇನ್ನು ಮರವಿದ್ದ ಜಾಗದಲ್ಲಿ ಮತ್ತೆ ಅರಳಿಕಟ್ಟೆ ನಿರ್ಮಾಣ ಮಾಡಲು ಸ್ಥಳೀಯರು ಮುಂದಾಗಿದ್ದಾರೆ.