ETV Bharat / state

ಇಂಧನ ಖಾತೆ ನಿಭಾಯಿಸಿದ ಅನುಭವ ಇದೆ, ಅದೇ ಕೊಟ್ರೆ ಒಳ್ಳೆಯದು: ಸಚಿವ ಹೆಚ್​. ನಾಗೇಶ್​

ಇಂಧನ ಖಾತೆ ನಿಭಾಯಿಸಿದ ಅನುಭವವಿದೆ. ಹಾಗಾಗಿ ಬಿಜೆಪಿಗೆ ಮನವಿ ಮಾಡಿದ್ದೇನೆ ಎಂದು ಹೆಚ್.ನಾಗೇಶ್ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ಅನರ್ಹ ಶಾಸಕರಿಗೂ ಸಚಿವ ಸ್ಥಾನ ನೀಡಬೇಕಿರುವುದರಿಂದ ಕೆಲವು ಸಚಿವ ಸ್ಥಾನಗಳನ್ನು ಹಂಚಿಕ ಮಾಡಿಲ್ಲ ಎಂದರು.

ಸಚಿವ ಹೆಚ್.ನಾಗೇಶ್
author img

By

Published : Aug 24, 2019, 7:02 PM IST

ಕೋಲಾರ: ಇಂಧನ ಖಾತೆ ನಿಭಾಯಿಸಿದ ಅನುಭವವಿದೆ. ಹಾಗಾಗಿ ನನಗೆ ಅದೇ ಖಾತೆ ನೀಡುವ ನಿರೀಕ್ಷೆ ಇದೆ ಎಂದು ನೂತನ ಸಚಿವ ಹೆಚ್.ನಾಗೇಶ್ ತಮ್ಮ ಒಲವನ್ನು ವ್ಯಕ್ತಪಡಿಸಿದರು.

ಇಲ್ಲಿನ ಹೊರ ವಲಯದ ಬಿಜೆಪಿ ಕಚೇರಿಯಲ್ಲಿ ನಡೆದ ಅರುಣ್​ ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮಾತನಾಡಿದರು.

ಸಚಿವ ಹೆಚ್.ನಾಗೇಶ್

14 ತಿಂಗಳು ಮೇಲ್ನೋಟಕ್ಕೆ ಸಮ್ಮಿಶ್ರ ಸರ್ಕಾರ ಚೆನ್ನಾಗಿ ಕಾಣುತ್ತಿತ್ತು. ಈಗ ಒಳ ಜಗಳ ಬಗಹಿರಂಗವಾಗಿದೆ. ನನಗೂ ಖಾತೆ ಕೊಡಲು ದಿನದೂಡುತ್ತಿದ್ದರು. ಈಗ ಬಿಜೆಪಿ ಜೊತೆ ನಾವಿದ್ದೇವೆ. ನಂತರ ಅನರ್ಹ ಶಾಸಕರು ಬರುತ್ತಾರೆ. ಅದಕ್ಕಾಗಿಯೇ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡಿಲ್ಲ ಎಂದು ಹೇಳಿದರು.

ನಾವೆಲ್ಲ ಒಗ್ಗಟ್ಟಾಗಿಯೇ ಲೋಕಸಭೆಯಲ್ಲಿ ಕೆ.ಹೆಚ್.ಮುನಿಯಪ್ಪ ಅವರನ್ನು ಸೋಲಿಸಿದ್ದು ಎಂದರು.

Intro:ಕೋಲಾರ
ದಿನಾಂಕ - ೨೪-೦೮-೧೯
ಸ್ಲಗ್ - ಇಂಧನ ಖಾತೆ
ಫಾರ್ಮಾಟ್ - ಎವಿಬಿಬಿ

ಆಂಕರ್ : ಅನರ್ಹ ಶಾಸಕರೆಲ್ಲರಿಗೂ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಖಚಿತ, ಅದಕ್ಕಾಗಿಯೇ ಅರ್ಧದಷ್ಟು ಸಚಿವ ಸ್ಥಾನಗಳನ್ನು ಉಳಿಸಿಕೊಳ್ಳಲಾಗಿದೆ, ನನಗೆ ಇಂಧನ ಖಾತೆಯ ಮೇಲೆ ಆಸೆ ಇದೆ ಜೊತಗೆ ಆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವವಿದೆ ಹಾಗಾಗಿ ನನಗೆ ಇಂಧನ ಖಾತೆ ಸಿಕ್ಕರೆ ಸಂತೋಷ ಎಂದು ಕೋಲಾರದ ಬಿಜೆಪಿ ಕಚೇರಿಯಲ್ಲಿ ಸಚಿವ ನಾಗೇಶ್ ಮತ್ತೊಮ್ಮೆ ಇಂಧನ ಖಾತೆ ಮೇಲೆ ತಮ್ಮ ಒಲವನ್ನ ವ್ಯಕ್ತಪಡಿಸಿದ್ದಾರೆ. ಕೋಲಾರ ನಗರದ ಹೊರ ವಲಯದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಹಾಗೂ ಶ್ರದ್ದಾಂಜಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೇನೆ ನನಗೆ ಆ ಖಾತೆ ನೀಡುವ ನಿರೀಕ್ಷೆ ಇದೆ, ಶೀಘ್ರದಲ್ಲೇ ನಾನು, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಬಿಜೆಪಿ ಸೇರ್ಪಡೆ ಸನ್ನಿಹಿತ ಎಂದ್ರು. ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿರುವ ಎಲ್ಲರೂ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮೂಲಕ ಜಿಲ್ಲೆಯ ಮತ್ತೆ ಆಪರೇಷನ್ ಕಮಲ ನಡೆಯುತ್ತೆ ಎಂಬ ಸುಳಿವನ್ನ ನೀಡಿದ್ರು. ಇನ್ನೂ ಸಿದ್ದು ಹಾಗೂ ದೇವೇಗೌಡರ ವಾಕ್ಸಮರ ಕುರಿತು ಪ್ರತಿಕೃಯಿಸಿದ ನಾಗೇಶ್, ೧೪ ತಿಂಗಳು ಮೇಲ್ನೋಟಕ್ಕೆ ಚೆನ್ನಾಗಿದ್ರು ಆದ್ರೆ ಮೈತ್ರಿ ಸರ್ಕಾರವಿದ್ದಾಗ ನನಗೂ ನೋವಿತ್ತು. ಆರಂಭದಲ್ಲಿ ಕೊಡಬೇಕಿದ್ದ ಖಾತೆಯನ್ನು ವರ್ಷದ ನಂತರ ಕೊಟ್ಟು, ಖಾತೆ ಕೊಡಲು ಹತ್ತು ದಿನ ಸತಾಯಿಸಿದ್ರು. ಒಬ್ಬರು ಇಬ್ಬರು ಭಿನ್ನಮತೀಯರಿಂದ ಏನೂ ಮಾಡಲಾಗೋದಿಲ್ಲ, ಬಿಜೆಪಿ ಜೊತೆ ನಾವೀದ್ದೇವೆ ಎಂದ ನಾಗೇಶ್ ಹೇಳಿದ್ರು. ಇದೆ ವೇಳೆ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸಲ್ಲಿಸಲಾಯಿತು. ದೇಶದ ಒಳ್ಳೆಯ ನಾಯಕರು ಪ್ರಧಾನಿ ಮೋದಿಯವರಿಗೆ ಆಪ್ತರಾಗಿದ್ದ ಜೇಟ್ಲಿ ನಿಧನ ಬೇಸರ ತಂದಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾಗೇಶ್ ಪ್ರಾರ್ಥಿಸಿದ್ರು.

ಬೈಟ್ ೧: ಎಚ್. ನಾಗೇಶ್ (ಸಚಿವ)
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.