ETV Bharat / state

'ಈ ಬಾರಿ ಕೆ ಹೆಚ್​ ಮುನಿಯಪ್ಪಗೆ ಕೋಲಾರದಿಂದ ಗಂಟು‌ಮೂಟೆ ಕಟ್ಟಿಸಿ ಕಳುಹಿಸುತ್ತೇವೆ' - Exclusive interview

ಕೆ. ಹೆಚ್​ ಮುನಿಯಪ್ಪರದ್ದು ಕುಟುಂಬ ರಾಜಕಾರಣ. ಅವರನ್ನು ಕೋಲಾರದಿಂದ ಗಂಟು‌ಮೂಟೆ ಕಟ್ಟಿಸಿ ಕಳುಹಿಸುತ್ತೇವೆ. ಈಟಿವಿ ಭಾರತ್ ಕ್ಕೆ ಕೋಲಾರ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಎಕ್ಸ್​ಕ್ಲ್ಯೂಸಿವ್​ ಸಂದರ್ಶನ

ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ
author img

By

Published : Mar 25, 2019, 10:15 AM IST

ಬೆಂಗಳೂರು: ಕೋಲಾರ‌ ಹಾಲಿ ಸಂಸದ ಕೆ.ಹೆಚ್. ಮುನಿಯಪ್ಪರ‌ನ್ನು ಕ್ಷೇತ್ರದಿಂದ ಗಂಟುಮೂಟೆ ಕಟ್ಟಿಸಿ ಕಳುಹಿಸುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಹೇಳಿದ್ದಾರೆ.

ಪ್ರಬಲ ಆಕಾಂಕ್ಷಿಗಳ ಪೈಪೋಟಿ ಮಧ್ಯೆ ಬಿಜೆಪಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಎಸ್.ಮುನಿಸ್ವಾಮಿ ಅವರು 'ಈಟಿವಿ ಭಾರತ್' ಸಂದರ್ಶನ ನೀಡಿದ್ದಾರೆ. ತಮ್ಮ ಸ್ಪರ್ಧೆಯ ಕುರಿತು ಮನದಾಳದ ಮಾತುಗಳನ್ನಾಡಿದ್ದಾರೆ.

ಕೋಲಾರ ಕ್ಷೇತ್ರದ ಅಭ್ಯರ್ಥಿಯಾಗಬೇಕು ಎಂಬ ಆಸೆ ನನಗೆ ಇತ್ತು. ನಾನು ಬಡವರ ಪರವಾಗಿ ಹೋರಾಟ ಮಾಡಿ ಬಂದಿದ್ದೇನೆ. ಚಹಾ ಮಾರುವವರು ಬಿಜೆಪಿಯಲ್ಲಿ ಪ್ರಧಾನಿಯಾಗಿದ್ದಾರೆ. ನಾನು ಬಡ ರೈತ ಕುಟುಂಬದಿಂದ ಬಂದವನು. ಅದೇ ರೀತಿ ಸಂಸದನಾಗಿ ಚುನಾಯಿತನಾಗುವ ವಿಶ್ವಾಸ ಇದೆ ಭರವಸೆಯ ಮಾತುಗಳನ್ನಾಡಿದರು.

ಇವತ್ತು ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಸಾಕಷ್ಟಿದ್ದಾರೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸ್ಫೂರ್ತಿ ನಮ್ಮಲ್ಲಿದೆ. ಬಿಜೆಪಿಯ ಪ್ರಬಲ ಆಕಾಂಕ್ಷಿಗಳಾಗಿದ್ದ ನಾರಯಣಸ್ವಾಮಿ ಅವರೇ ಮುನಿಸ್ವಾಮಿ ನನ್ನ ಸಹೋದರ ಇದ್ದಂತೆ ಎಂದಿದ್ದಾರೆ. ಅದೇ ರೀತಿ ಡಿ.ಎಸ್. ವೀರಯ್ಯ, ಚಿ.ನಾ. ರಾಮು ಎಲ್ಲರೂ ನನಗೆ ಬೆಂಬಲ ನೀಡುತ್ತಾರೆ. ನಾವೆಲ್ಲ ಅಣ್ಣ ತಮ್ಮಂದಿರಾಗಿ ಕೆಲಸ‌ ಮಾಡಲಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮೋದಿ ಪ್ರಧಾನಿಯಾಗುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ‌ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ

ಮುನಿಯಪ್ಪ ಅವರು ಏಳು ಬಾರಿ ಸಂಸದರಾಗಿ ಆಯ್ಕೆಯಾದರೂ ಕ್ಷೇತ್ರದಲ್ಲಿ ಪ್ರಗತಿ ಶೂನ್ಯವಾಗಿದೆ. ಕೋಲಾರದಲ್ಲಿ ಸತತವಾಗಿ ಬರಗಾಲ‌ ಆವರಿಸಿದೆ. ‌ಬರಗಾಲ‌ ಹೋಗಬೇಕಾದರೆ, ಬಿಜೆಪಿ ಅಭ್ಯರ್ಥಿ ಸಂಸದರಾಗಿ‌ ಗೆಲ್ಲಬೇಕು. ಮೋದಿ ಪ್ರಧಾನಿಯಾಗಬೇಕು. ಕೋಲಾರದಲ್ಲಿ ಶಾಶ್ವತ ನೀರಾವರಿ ಯೋಜನೆಗಳು, ಚಿನ್ನದ ಗಣಿ ಪುನಾರಂಭ ಸೇರಿದಂತೆ ಹಲವು ಯೋಜನೆ ಅನುಷ್ಠಾನ ಆಗಬೇಕಾದರೆ ಸಂಸದರಾಗಿ ಆಯ್ಕೆ ಆಗಲೇಬೇಕು ಎಂದರು.

ಮುನಿಯಪ್ಪರದ್ದು ಕುಟುಂಬ ರಾಜಕಾರಣ. ತಮ್ಮ ಕುಟುಂಬ ಸದಸ್ಯರಿಗೆ ಎಲ್ಲ ಆದ್ಯತೆಗಳನ್ನು ನೀಡುತ್ತಾ ಬಂದಿದ್ದಾರೆ. ಅವರಿಗೆ ಬಡವರ ಮೇಲೆ ಯಾವ ಕಾಳಜಿಯೂ ಇಲ್ಲ. ಅವರ ಭ್ರಷ್ಟಾಚಾರ ಕ್ಷೇತ್ರದ ಜನರಿಗೆ ಗೊತ್ತು ಎಂದು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಮುನಿಯಪ್ಪ ವಿರುದ್ಧ ಹರಿಹಾಯ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.