ETV Bharat / state

ನಾನು ನೀಡಿದ ತೀರ್ಪನ್ನು ಸುಪ್ರೀಂ ಎತ್ತಿ ಹಿಡಿದಿರುವುದು ಖುಷಿ ತಂದಿದೆ: ಮಾಜಿ ಸ್ಪೀಕರ್ ರಮೇಶ್​ಕುಮಾರ್​ - ಅನರ್ಹ ಶಾಸಕರ ಕ್ಷೇತ್ರದಲ್ಲಿ ಉಪಚುನಾವಣೆ

ಅನರ್ಹ ಶಾಸಕರ ಬಗ್ಗೆ ನಾನು ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್​ ಒಪ್ಪಿಕೊಂಡಿದೆ. ನನ್ನ ತೀರ್ಪನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿರುವುದು ಖುಷಿ ತಂದಿದೆ ಎಂದು ಮಾಜಿ ಸ್ಪೀಕರ್​ ಕೆ. ಆರ್​. ರಮೇಶ್ ಕುಮಾರ್​ ಸುಪ್ರೀಂಕೋರ್ಟ್​ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಮಾಜಿ ಸ್ಪೀಕರ್ ರಮೇಶ್​ಕುಮಾರ್​ ಸುದ್ದಿಗೋಷ್ಠಿ
author img

By

Published : Nov 13, 2019, 12:52 PM IST

ಕೋಲಾರ: ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಅವರು ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸಿದ್ದಾರೆ.

ಮಾಜಿ ಸ್ಪೀಕರ್ ರಮೇಶ್​ಕುಮಾರ್​ ಸುದ್ದಿಗೋಷ್ಠಿ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್​ನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನನ್ನ ನಿಲುವನ್ನ ಒಪ್ಪಿಕೊಂಡಿದೆ. 42 ವರ್ಷ ನನ್ನ ಕಾಪಾಡಿದ ನನ್ನ ಕ್ಷೇತ್ರದ ಜನರ ಪಾದಗಳಿಗೆ ಇದನ್ನು ಅರ್ಪಿಸುತ್ತೇನೆ. ನನ್ನ ಪೋಷಣೆ ಮಾಡಿದ ನನ್ನ ಜನರಿಗೆ ಈ ತೀರ್ಪನ್ನು ಒಪ್ಪಿಸಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದರು.

ಶಾಸಕರಿಗೆ ಅನರ್ಹತೆ ಒಂದು ಶಿಕ್ಷೆ. ಆದ್ರೆ ಮತ್ತೆ ಚುನಾವಣೆಗೆ ನಿಲ್ಲುವುದು ಸುಪ್ರೀಂ ನೀಡಿದ ಒಪ್ಪಿಗೆಯಾಗಿದ್ದು, ಈ ಬಗ್ಗೆ ಜನತಾ ನ್ಯಾಯಾಲಯ ತೀರ್ಮಾನ ಮಾಡಬೇಕಿದೆ. ಇನ್ನು ಸುಪ್ರೀಂ ತೀರ್ಮಾನಕ್ಕೆ ಗೌರವದಿಂದ ನಡೆದುಕೊಂಡಿದ್ದೇನೆ. ಅನರ್ಹತೆ ಬಗ್ಗೆ ಸುಪ್ರೀಂ ತೀರ್ಪಿನಿಂದಾಗಿ ನನ್ನ ಕ್ಷೇತ್ರದ ಜನತೆ ಎಲ್ಲಿ ತಲೆತಗ್ಗಿಸಬೇಕಾಗುವುದು ಎಂಬ ಅನುಮಾವಿತ್ತು. ಆದರೆ ಈ ತೀರ್ಪಿನಿಂದ ನನ್ನ ಕುಟುಂಬಸ್ಥರಿಗೆ,‌ ಕ್ಷೇತ್ರದ ಜನರಿಗೆ ಗೌರವ ತಂದಿದೆ ಎಂದರು.

ಅಂದು ಹೈಕಮಾಂಡ್ ನಿರ್ಧಾರದಿಂದ ನಾನು ಸ್ಪೀಕರ್ ಆದೆ, ಜೊತೆಗೆ ನಾನು ಸಿದ್ದರಾಮಯ್ಯ ಮಾತನಾಡಿಕೊಂಡು ಪಕ್ಷದ ಉದ್ದೇಶದಿಂದ ನಾನು ಸ್ಪೀಕರ್ ಆದೆ. ಆ ಸ್ಥಾನದಲ್ಲಿರುವಾಗ ನಾನು ಗೌರವಯುತವಾಗಿ ನಡೆದುಕೊಂಡಿದ್ದೇನೆ ಎಂದು ರಮೇಶ್​ಕುಮಾರ್​ ಹೇಳಿದರು.

Intro:ಅಂಕರ್: ಸುಪ್ರೀ ಕೋರ್ಟ್ ನನ್ನ ನಿಲುವನ್ನ ಒಪ್ಪಿಕೊಂಡಿದ್ದು, ಸುಪ್ರೀಂಕೋರ್ಟ್ ತೀರ್ಪನ್ನ, ೪೨ ವರ್ಷಗಳ ಕಾಲ ನನ್ನನ್ನ ಕಾಪಾಡಿದ ಕ್ಷೇತ್ರದ ಜನರ ಪಾದಗಳಿಗೆ ಅರ್ಪಿಸುತ್ತೇನೆ ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ರು‌.

Body:ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸ್ವಗ್ರಾಮವಾದ ಅಡ್ಡಗಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು‌, ಸುಪ್ರೀಂಕೊರ್ಟ್ ತೀರ್ಪನ್ನ ನನ್ನ ಪೋಷಣೆ ಮಾಡಿದ ನನ್ನ ಜನರಿಗೆ ಒಪ್ಪಿಸಿದ್ದೇನೆ ಎಂದು ಹೇಳಿದ್ರು. ಅಲ್ಲದೆ ರಾಜೀನಾಮೆ ಒಂದು ಯೋಗ್ಯವಾದ ವಿಚಾರ ಹಾಗೂ ಅನರ್ಹತೆ ಒಂದು ಶಿಕ್ಷೆ. ಆದ್ರೆ ಮತ್ತೆ ಚುನಾವಣೆಗೆ ನಿಲ್ಲುವುದು ಸುಪ್ರೀಂಕೋರ್ಟ್ ಒಪ್ಪಿಗೆಯಾಗಿದೆ‌, ಹೀಗಾಗಿ ಇದೀಗ ಜನತಾ ನ್ಯಾಯಾಲಯ ತೀರ್ಮಾನ ಮಾಡಬೇಕಿದೆ ಎಂದರು. ಇನ್ನು ಸುಪ್ರೀಂ ನನಗೆ ತೀರ್ಮಾನಕ್ಕೆ ಕೊಟ್ಟಾಗ ಗೌರವದಿಂದ ನಡೆದು ಕೊಂಡಿದ್ದೇನೆ. ಅದೇ ರೀತಿ ನನ್ನ ತೀರ್ಪು ಸುಪ್ರೀಂ ಎತ್ತಿ ಹಿಡಿದಿರುವುದು ಖುಷಿ ತಂದಿದೆ ಎಂದರು. ಇನ್ನು ಸುಪ್ರೀಂ ತೀರ್ಪಿನಿಂದ ನನ್ನ ಕ್ಷೇತ್ರದ ಜನತೆ ಎಲ್ಲಿ ತಲೆತಗ್ಗಿಸಬೇಕೊ ಎಂದು ತಿಳಿದಿದ್ದೆ, ಆದ್ರೆ ಈ ತೀರ್ಪಿನಿಂದ ನನ್ನ ಕುಟುಂಬಸ್ಥರಿಗೆ,‌ ಕ್ಷೇತ್ರದ ಜನರಿಗೆ ಗೌರವ ತಂದಿದೆ ಖುಷಿ ತಂದಿದೆ ಎಂದರು. Conclusion:ಇನ್ನು ಅಂದು ಹೈ ಕಮಾಂಡ್ ನಿರ್ಧಾರದಿಂದ ನಾನು ಸ್ಪೀಕರ್ ಆದೆ, ಜೊತೆಗೆ ನಾನು ಸಿದ್ದರಾಮಯ್ಯ ಮಾತನಾಡಿಕೊಂಡು ಪಕ್ಷದ ಉದ್ದೇಶದಿಂದ ನಾನು ಸ್ಪೀಕರ್ ಆದೆ, ಆ ಸ್ಥಾನದಲ್ಲಿರುವಾಗ
ನಾನು ಗೌರವಯುತವಾಗಿ ನಡೆದು ಕೊಂಡಿದ್ದೇನೆ ಎಂದು ಹೇಳಿದ್ರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.