ಕೋಲಾರ: ಭಾರತ ಚಿತ್ರರಂಗದಲ್ಲೇ ಸಖತ್ ಸದ್ದು ಮಾಡುತ್ತಿರುವ ಕನ್ನಡದ ಕೆಜಿಎಫ್-2 ಚಿತ್ರದ ಎಫೆಕ್ಟ್ ನಿಂದಾಗಿ ಕೆಜಿಎಫ್ ಸೈನೈಡ್ ಗುಡ್ಡಗಳಿಗೆ ಜನರು ಲಗ್ಗೆ ಇಡುತ್ತಿದ್ದಾರೆ. ಕೋಲಾರದ ಕೆಜಿಎಫ್ ನಗರದ ಕೆನಡೀಸ್ ಸೈನೈಡ್ ಗುಡ್ಡದಲ್ಲಿ ಸಿನಿಮಾ ಚಿತ್ರೀಕರಣ ನಡೆದಿತ್ತು. ಹಾಗಾಗಿ ನೂರಾರು ಪ್ರವಾಸಿಗರು ಹಾಗೂ ವಿವಿಧ ರಾಜ್ಯದ ಜನರು ಕೆಜಿಎಫ್ ಗೆ ತೆರಳುತ್ತಿದ್ದಾರೆ.
ಕೆಜಿಎಫ್ ಗುಡ್ಡಗಳು ಹಲವು ವೈಶಿಷ್ಟಗಳಿಂದ ಕೂಡಿದ್ದು, ಕಳೆದ 20 ವರ್ಷಗಳಿಂದ ದಕ್ಷಿಣ ಭಾರತದ ಬಹುತೇಕ ಯಶಸ್ವಿ ಸಿನಿಮಾಗಳ ಚಿತ್ರೀಕರಣ ನಡೆದಿದೆ. ಕನ್ನಡದ ಓಂ, ಗಂಡುಗಲಿ, ಕರಿಯ ಹೀಗೆ ತೆಲುಗು, ತಮಿಳು, ಹಿಂದಿ ಸೇರಿದಂತೆ ನಾನಾ ಭಾಷೆಯ ಸಿನಿಮಾಗಳ ಚಿತ್ರೀಕರಣ ಈ ಗುಡ್ಡಗಳ ಮೇಲೆ ನಡೆದಿದೆ.
ಕಳೆದ ವಾರ ತೆರೆ ಕಂಡ ಕೆಜಿಎಫ್ ಚಿತ್ರ ಯಶಸ್ವಿಯಾಗುತ್ತಿದ್ದಂತೆ ಕೆಜಿಎಫ್ ಅನ್ನೋ ಹೆಸರು ಹಾಗೂ ಸ್ಥಳದ ಮಹಿಮೆ ತಿಳಿಯಲು ಅಭಿಮಾನಿಗಳು ಹಾಗೂ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ರಾಕಿ ಭಾಯ್ ಮತ್ತು ಅಧೀರನ ಕಾಳಗದ ಸ್ಥಳ ನೋಡಬೇಕು ಅನ್ನೋ ಕುತೂಹಲ ಜನರದ್ದಾಗಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಿ: ರಾಮಲಿಂಗರೆಡ್ಡಿ