ETV Bharat / state

ಚಿಲ್ಲರೆ ಮಾತು ಬಿಟ್ಟು ಅಭಿವೃದ್ದಿ ಕೆಲಸಗಳತ್ತ ಗಮನ ಹರಿಸಿ.. ಕೆ ಹೆಚ್ ಮುನಿಯಪ್ಪ ಟಾಂಗ್‌ - ಸಂಸದ ಮುನಿಸ್ವಾಮಿ

ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆ ಹೆಚ್ ಮುನಿಯಪ್ಪ ಅವರು, ನನ್ನ ಜೀವನದಲ್ಲಿ ನಾನು ಕೆಳ ಮಟ್ಟದ ರಾಜಕಾರಣ ಮಾಡಿಲ್ಲ. ಇನ್ನೊಬ್ಬರ ಕುರಿತು ಚಿಲ್ಲರೆ ಮಾತುಗಳನ್ನಾಡುವುದನ್ನು ಬಿಟ್ಟು ಅಭಿವೃದ್ದಿ ಕೆಲಸಗಳತ್ತ ಗಮನ ಹರಿಸಿ ಎಂದು ಹೇಳುವ ಮೂಲಕ ಸಂಸದ ಮುನಿಸ್ವಾಮಿ ಅವರಿಗೆ ಟಾಂಗ್​ ನೀಡಿದ್ದಾರೆ.

ಕೆ.ಎಚ್. ಮುನಿಯಪ್ಪ
author img

By

Published : Sep 16, 2019, 1:38 PM IST

ಕೋಲಾರ: ಹಾಲಿ ಸಂಸದರು ಇನ್ನೊಬ್ಬರ ಕುರಿತು ಚಿಲ್ಲರೆ ಮಾತುಗಳನ್ನಾಡುವುದನ್ನು ಬಿಟ್ಟು ಅಭಿವೃದ್ದಿ ಕೆಲಸಗಳತ್ತ ಗಮನ ಹರಿಸಬೇಕು ಎಂದು ಹೇಳುವ ಮೂಲಕ ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಹಾಲಿ ಸಂಸದರಿಗೆ ಟಾಂಗ್ ನೀಡಿದ್ದಾರೆ.

ಇಂದು ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯಿಂದ ಬಂದಿರುವ ಹಾಲಿ ಸಂಸದರು ಚಿಲ್ಲರೆ ಮಾತುಗಳನ್ನ ಆಡುವುದು ಬಿಟ್ಟು ಕೆಲಸ ಮಾಡಲಿ ಎಂದು ತಾಕೀತು ಮಾಡಿದ್ರು. ಕೆ ಹೆಚ್ ಮುನಿಯಪ್ಪ ಅವರ ಪತ್ನಿ ವಿರುದ್ಧ ವಿದ್ಯುತ್ ಬಿಲ್ ಕಟ್ಟದೆ ಇರುವ ಆರೋಪದ ಕುರಿತು ಸಂಸದ ಮುನಿಸ್ವಾಮಿ ಅವರು ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಪ್ರತಿಕ್ರಿಯಿಸಿದ ಮಾಜಿ ಸಂಸದ ಮುನಿಯಪ್ಪನವರು, ವಿದ್ಯುತ್ ಬಿಲ್ ಪಾವತಿಸದಷ್ಟು ಕೆಳಮಟ್ಟದ ರಾಜಕಾರಣ ನನ್ನ ಜೀವನದಲ್ಲಿ ಮಾಡಿಲ್ಲ. ಸುಮ್ಮನೆ ಈ ವಿಚಾರದಲ್ಲಿ ನನ್ನ ಕುಟುಂಬವನ್ನ ಎಳೆದು ತರುವುದು ಬೇಡ ಎಂದಿದ್ದಾರೆ.

ನಾನು ಕೆಳ ಮಟ್ಟದ ರಾಜಕಾರಣ ಮಾಡಿಲ್ಲ.. ಕೇಂದ್ರದ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ

ಅಲ್ಲದೆ ಈಗಾಗಲೇ ಮಾಲೀಕರು ವಿದ್ಯುತ್ ಬಿಲ್ ಪಾವತಿ ಮಾಡಿದ್ದಾರೆ. ಹೀಗಾಗಿ ಜನಾದೇಶದಲ್ಲಿ ಗೆದ್ದಿರುವ ಹಾಲಿ ಎಂಪಿ ಅವರು ಗೌರವಯುತವಾಗಿ ನಡೆದುಕೊಳ್ಳಲಿ ಎಂದು ಹೇಳಿದ್ರು. ಇನ್ನು ನೆರೆ ನಿರ್ವಹಣೆ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಪ್ರಧಾನಮಂತ್ರಿಗಳು ಕನಿಷ್ಠ ರಾಜ್ಯದ ಮುಖ್ಯಮಂತ್ರಿಗಳನ್ನ ಕರೆಸಿ ರಾಜ್ಯದಲ್ಲಿನ ನೆರೆ ಕುರಿತು ಮಾಹಿತಿ ಪಡೆದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.

ಕೇಂದ್ರದಿಂದ ಈವರೆಗೂ ಬಿಡಿಗಾಸು ಬಿಡುಗಡೆಯಾಗಿಲ್ಲ. ಹೀಗಾಗಿ ರಾಜ್ಯದ ಸಂಸದರ ನಿಯೋಗ ಕೂಡಲೇ ಪಕ್ಷಾತೀತವಾಗಿ ಪಿಎಂ ಅವರನ್ನ ಭೇಟಿ ಮಾಡಿ ಅನುದಾನ ಬಿಡುಗಡೆಗೊಳಿಸಬೇಕೆಂದರು. ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಾನ-ಮರ್ಯಾದೆ ಇಲ್ಲ. ನಾಚಿಕೆ ಆಗಬೇಕು ಅವರಿಗೆ ಎಂದು ಮತ್ತೊಮ್ಮೆ ಸ್ವಪಕ್ಷೀಯ ಶಾಸಕರ ಮೇಲೆ ಕೆ ಹೆಚ್ ಮುನಿಯಪ್ಪ ಅವರು ಗರಂ ಆದರು. ಪಕ್ಷ ವಿರೋಧಿ ಚಟುವಟಿಕೆಗಳನ್ನ ಮಾಡಿ ಮತ್ತೊಮ್ಮೆ ಪಕ್ಷದಲ್ಲಿ ನಿಲ್ಲುತ್ತೇನೆ ಎನ್ನುತ್ತಿದ್ದಾರೆ. ಅಂತಹವರಿಗೆ ನಾಚಿಕೆ ಇಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿ ಮತ್ತೆ ಪಕ್ಷದ ಕಚೇರಿಗೆ ಬರುತ್ತಾರೆ. ಇಂತಹವರಿಗೆ ಏನು ಹೇಳಬೇಕೋ ಗೊತ್ತಿಲ್ಲ ಎಂದರು.

Intro:ಕೋಲಾರ
ದಿನಾಂಕ - 16-09-19
ಸ್ಲಗ್ - ಮಾಜಿ ಎಂಪಿ ಕೆ.ಎಚ್.ಮುನಿಯಪ್ಪ
ಫಾರ್ಮೆಟ್ - ಎವಿಬಿಬಿ

ಆಂಕರ್ : ಹಾಲಿ ಸಂಸದರು ಇನ್ನೊಬ್ಬರ ಕುರಿತು ಚಿಲ್ಲರೆ ಮಾತುಗಳು ಮಾತನಾಡುವುದು ಬಿಟ್ಟು ಅಭಿವೃದ್ದಿ ಕೆಲಸಗಳತ್ತ ಗಮನ ಹರಿಸಬೇಕು ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹಾಲಿ ಸಂಸದರಿಗೆ ಟಾಂಗ್ ನೀಡಿದ್ರು. ಇಂದು ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಯಿಂದ ಬಂದಿರುವ ಹಾಲಿ ಸಂಸದರು ಚಿಲ್ಲರೆ ಮಾತುಗಳನ್ನ ಬಿಟ್ಟು ಕೆಲಸ ಮಾಡಲಿ ಎಂದು ತಾಕೀತು ಮಾಡಿದ್ರು. ಕೆ.ಎಚ್.ಮುನಿಯಪ್ಪ ಅವರ ಪತ್ನಿ ವಿರುದ್ದ ವಿದ್ಯುತ್ ಬಿಲ್ ಕಟ್ಟದೆ ಇರುವ ಆರೋಪದ ಕುರಿತು ಸಂಸದ ಮುನಿಸ್ವಾಮಿ ಅವರು ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ್ರು, ಈ ಕುರಿತು ಮಾತನಾಡಿದ ಕೆ.ಎಚ್.ಮುನಿಯಪ್ಪ, ವಿದ್ಯುತ್ ಬಿಲ್ ಪಾವತಿಸದಷ್ಟು ಕೆಳಮಟ್ಟದ ರಾಜಕಾರಣ ನನ್ನ ಜೀವನದಲ್ಲಿ ಮಾಡಿಲ್ಲ, ಸುಮ್ಮನೆ ಈ ವಿಚಾರದಲ್ಲಿ ನನ್ನ ಕುಟುಂಬವನ್ನ ಎಳೆದು ತರುವುದು ಬೇಡ ಎಂದರು. ಅಲ್ಲದೆ ಈಗಾಗಲೇ ಮಾಲಿಕರು ವಿದ್ಯುತ್ ಬಿಲ್ ಪಾವತಿ ಮಾಡಿದ್ದಾರೆ, ಹೀಗಾಗಿ ಜನಾದೇಶದಲ್ಲಿ ಗೆದ್ದಿರುವ ಹಾಲಿ ಎಂಪಿ ಅವರು ಗೌರವಯುತವಾಗಿ ನಡೆದುಕೊಳ್ಳಲಿ ಎಂದು ಹೇಳಿದ್ರು. ಇನ್ನು ನೆರೆ ನಿರ್ವಹಣೆ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ, ಪ್ರಧಾನ ಮಂತ್ರಿಗಳು ಕನಿಷ್ಟ ರಾಜ್ಯದ ಮುಖ್ಯಮಂತ್ರಿಗಳನ್ನ ಕರೆಸಿ ರಾಜ್ಯದಲ್ಲಿನ ನೆರೆ ಕುರಿತುಮಾಹಿತಿ ಪಡೆದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು. ಇನ್ನು ಕೇಂದ್ರದಿಂದ ಇದುವರೆಗೂ ಬಿಡಿಗಾಸು ಬಿಡುಗಡೆಯಾಗಿಲ್ಲ, ಹೀಗಾಗಿ ರಾಜ್ಯದ ಸಂಸದರ ನಿಯೋಗ ಕೂಡಲೇ ಪಕ್ಷಾತೀತವಾಗಿ ಪಿಎಂ ಅವರನ್ನ ಭೇಟಿ ಮಾಡಿ ಅನುದಾನ ಬಿಡುಗಡೆಗೊಳಿಸಬೇಕೆಂದರು. ಇನ್ನು ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿಚಟುವಟಿಕೆ ಮಾಡಿದವರಿಗೆ ಮಾನ ಮರ್ಯಾದೆ ಇಲ್ಲ,ನಾಚಿಕೆ ಆಗಬೇಕು ಅವರಿಗೆ ಎಂದು ಮತ್ತೊಮ್ಮೆ ಸ್ವಪಕ್ಷೀಯ ಶಾಸಕರ ಮೇಲೆ ಕೆ.ಎಚ್.ಮುನಿಯಪ್ಪ ಅವರು ಗರಂ ಆದರು. ಪಕ್ಷ ವಿರೋಧಿ ಚಟುವಟಿಕೆಗಳನ್ನ ಮಾಡಿ ಮತ್ತೊಮ್ಮೆ ಪಕ್ಷದಲ್ಲಿ ನಿಲ್ಲುತ್ತೇನೆ ಎನ್ನುತ್ತಿದ್ದಾರೆ ಅಂತಹವರಿಗೆ ನಾಚಿಕೆ ಇಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿ ಮತ್ತೆ ಪಕ್ಷದ ಕಛೇರಿಗೆ ಬರುತ್ತಾರೆ ಇಂತಹವರಿಗೆ ಏನು ಹೇಳಬೇಕೊ ಗೊತ್ತಿಲ್ಲ ಎಂದರು.

ಬೈಟ್ 1: ಕೆ.ಎಚ್.ಮುನಿಯಪ್ಪ (ಮಾಜಿ ಸಂಸದರು)

ಬೈಟ್ 2: ಕೆ.ಎಚ್.ಮುನಿಯಪ್ಪ (ಮಾಜಿ ಸಂಸದರು)
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.