ETV Bharat / state

ಗೆಳೆಯರು ಕರೆ ಮಾಡಿದರೆಂದು ಹೋದ ಯುವಕ ಶವವಾಗಿ ಪತ್ತೆ - ಯುವಕನ ಮೃತದೇಹ ಪತ್ತೆ

ಕೋಲಾರದ ಕುರಗಲ್ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯ ಯುವಕನೋರ್ವ ಶವವಾಗಿ ಪತ್ತೆಯಾಗಿದ್ದಾನೆ. ಯುವಕನ ಸಾವಿಗೆ ಕಾರಣ ತಿಳಿದು ಬಂದಿಲ್ಲ.

Dead body found in Kuragl Village
ಶವವಾಗಿ ಪತ್ತೆಯಾದ ಮನೋಜ್
author img

By

Published : May 24, 2021, 10:41 AM IST

ಕೋಲಾರ: ತಾಲೂಕಿನ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುರಗಲ್ ಗ್ರಾಮದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ.

ಕುರುಗಲ್ ಗ್ರಾಮದ‌ ಮನೋಜ್ (20) ಮೃತ ಯುವಕ. ಗಾರೆ ಕೆಲಸ ಮಾಡುತ್ತಿದ್ದ ಈತ, ನಿನ್ನೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ. ಹೀಗೆ ಬಂದವ, ಹಣದ ವಿಚಾರವಾಗಿ ಸ್ನೇಹಿತರು ಕರೆ ಮಾಡುತ್ತಿದ್ದಾರೆ ಎಂದು ಹೇಳಿ ಮನೆಯಿಂದ ಹೊರ ಹೋಗಿದ್ದ. ರಾತ್ರಿಯಾದರೂ ಮನೋಜ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಕರೆ ಮಾಡಿದ್ದರು. ಈ ವೇಳೆ ಮನೋಜ್ ಮೊಬೈಲ್ ಸ್ವಿಚ್ ಅಫ್ ಆಗಿತ್ತು. ಇಂದು ಬೆಳಗ್ಗೆ ಕೈಗಾರಿಕಾ ಪ್ರದೇಶದ ಬಳಿ ಶವವಾಗಿ ಪತ್ತೆಯಾಗಿದ್ದಾನೆ.

Dead body found in Kuragl Village
ಶವವಾಗಿ ಪತ್ತೆಯಾದ ಮನೋಜ್

ಯುವಕನ ಹಣೆ ಮತ್ತು ಕಾಲುಗಳ ಮೇಲೆ ಗಾಯಗಳು ಕಂಡು ಬಂದಿವೆ. ಸ್ಥಳೀಯರ ಮಾಹಿತಿ ಪ್ರಕಾರ, ಗ್ರಾಮ ಮತ್ತು ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಯತೇಚ್ಚವಾಗಿ ಮದ್ಯ, ಗಾಂಜಾ ಮಾರಾಟ ಮತ್ತು ಸೇವನೆ ವ್ಯಾಪಕವಾಗಿ ನಡೆಯುತ್ತಿದೆ. ಇದರೊಂದಿಗೆ ಶವ ಪತ್ತೆಯಾದ ಪ್ರದೇಶದಲ್ಲಿ ವ್ಯಾಪಕವಾದ ಜೂಜು ಅಡ್ಡೆಗಳು ನಡೆಯುತ್ತಿವೆ.

ಇದನ್ನೂ ಓದಿ: ಬೈಕ್​ ಹಿಡಿಯುವ ಭಯದಲ್ಲಿ ಚೆಕ್‌ಪೋಸ್ಟ್​ ಕೆಳಗೆ ನುಗ್ಗಲು ಯತ್ನ: ಸ್ನೇಹಿತನ ಸಾವಿಗೆ ಕಾರಣವಾದ ಸವಾರ

ಶನಿವಾರ ರಾತ್ರಿ ಮನೋಜ್ ಮತ್ತು ನಾಲ್ಕೈದು ಸ್ನೇಹಿತರು ಮದ್ಯ ಸೇವನೆ ಮಾಡಿದ್ದರು. ರಾತ್ರಿ ಮದ್ಯ ಸಾಲದೇ ಹೋದಾಗ ತರುವುದಾಗಿ ಹೋದ ಮನೋಜ್ ಬಿದ್ದು ಮೃತಪಟ್ಟಿರಬಹುದು. ಇದನ್ನು ಕಂಡ ಜೊತೆಯಲ್ಲಿದ್ದ ಸ್ನೇಹಿತರು ತಮ್ಮ ದ್ವಿಚಕ್ರ ವಾಹನಗಳೊಂದಿಗೆ ಸ್ಥಳದಿಂದ ಪರಾರಿಯಾಗಿರಬಹುದು. ಇಲ್ಲವೇ ಹಣ, ಕುಡಿತ, ಜೂಜು ವಿಚಾರದಲ್ಲಿ ಗೆಳೆಯರ ನಡುವೆ ಜಗಳ ನಡೆದು ಪರಿಸ್ಥಿತಿ ವಿಕೋಪಕ್ಕೆ ಮನೋಜ್ ಸಾವಿಗೆ ಕಾರಣವಾಗಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಆಂಜೀನಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೆ ಮನೋಜ್ ಸಾವಿನ ನಿಖರ ಕಾರಣ ತಿಳಿದು ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.