ETV Bharat / state

ಹಾಲು ಹಾಕುತ್ತಿದ್ದವನಿಂದ ಒಂದೇ ಕುಟುಂಬದ ನಾಲ್ವರಿಗೆ ಸೋಂಕು,  ಬೆಚ್ಚಿದ ನಿವಾಸಿಗಳು - ಕೋಲಾರ ಸುದ್ದಿ

ಕೋಲಾರದಲ್ಲಿ ಒಂದೇ ಕುಟುಂಬದ ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಮನೆಗೆ ಹಾಲು ಪೂರೈಸುತ್ತಿದ್ದ ವ್ಯಕ್ತಿಯಿಂದ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಸೋಂಕು ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

corona in kolar
ಕೋಲಾರದಲ್ಲಿ ಕೊರೊನಾ
author img

By

Published : Jul 1, 2020, 6:20 PM IST

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಸಂಪಂಗೆರೆ ಗ್ರಾಮದ ಬಳಿ ಇಲ್ಲಿರುವ ಅರ್ಥ ಪ್ರಾಪರ್ಟೀಸ್​ನ ಬಡಾವಣೆಯಲ್ಲಿ ವಾಸವಿರುವ ಒಂದೇ ಕುಟುಂಬದ ನಾಲ್ವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

58 ವರ್ಷದ ವ್ಯಕ್ತಿ ಅನಾರೋಗ್ಯದ ಹಿನ್ನೆಲೆಯಲ್ಲಿ ನಿನ್ನೆ ಕೆ.ಆರ್​.ಪುರಂನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದಾಗ ಅಲ್ಲಿ ಉಸಿರಾಟದ ತೊಂದರೆ ಇದ್ದ ಕಾರಣ ಅವರ ಗಂಟಲು ದ್ರವದ ಮಾದರಿಯನ್ನು ಪಡೆದು ಕೋವಿಡ್​ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಈ ವೇಳೆ ಆತನಲ್ಲಿ ಸೋಂಕು ಇರುವುದು ದೃಢವಾಗಿತ್ತು. ಪರಿಣಾಮ ಅವರನ್ನು ಕೋಲಾರದ ಕೋವಿಡ್​ ಆಸ್ಪತ್ರೆಗೆ ದಾಖಲು ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋಲಾರದಲ್ಲಿ ಕೊರೊನಾ

ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಮೂವರು ಮಕ್ಕಳಿಗೂ ಪಾಸಿಟಿವ್​​ ಬಂದಿದ್ದು, ಸದ್ಯ ಒಂದೇ ಕುಟುಂಬದ ಮೂವರನ್ನು ಕೋಲಾರದ ಕೋವಿಡ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅವರು ವಾಸವಿದ್ದ ಅರ್ಥ ಪ್ರಾಪರ್ಟೀಸ್​ ಬಡಾವಣೆಯನ್ನು ಸೀಲ್​ ಡೌನ್​ ಮಾಡಲಾಗಿದೆ.

ಈ ವೇಳೆ ಮತ್ತೊಂದು ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಕೊರೊನಾ ಪಾಸಿಟಿವ್​​ ಇರುವ ವ್ಯಕ್ತಿ ಆ ಬಡಾವಣೆಯಲ್ಲಿನ ಮನೆಗಳಿಗೆ ನಿತ್ಯ ಹಾಲು ನೀಡುತ್ತಿದ್ದ. ಸದ್ಯ ಬಡಾವಣೆಯಲ್ಲಿಆತಂಕದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆ ಸಾಮೂಹಿಕ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.