ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಮಕ್ಕಳ ಮೇಲೆ ಸವಾರಿ ಮಾಡುವ ಮೂಲಕ ಬಿಟ್ಟು ಬಿಡದೇ ಕಾಡಲಾರಂಭಿಸಿದೆ. ಮೊನ್ನೆ ಒಂದೇ ಗ್ರಾಮದ 11 ಮಕ್ಕಳಲ್ಲಿ ಕಾಣಿಸಿಕೊಂಡಿದ್ದು, ಇಂದು ಬಾಲ ಮಂದಿರದ 13 ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡು ಆತಂಕವನ್ನುಂಟು ಮಾಡಿದೆ.
ಓದಿ: KSRTC ವಿವಾದ : ರಾಜಿಯೂ ಇಲ್ಲ.. ಹೋರಾಟವೂ ಇಲ್ಲ.. ಕರ್ನಾಟಕಕ್ಕೆ ಕೇರಳ ಸಾರಿಗೆ ಸಂಸ್ಥೆ ಉತ್ತರ
ಕೋಲಾರ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, 3ನೇ ಅಲೆ ಆರಂಭವಾಗಿರುವ ಸೂಚನೆ ನೀಡಿದೆ. ಕೆಜಿಎಫ್ ಮಸ್ಕಾಂ ಬಳಿ ಇರುವ ಬಾಲಮಂದಿರದ 13 ಹೆಣ್ಣು ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದ್ದು, ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.
17 ಹೆಣ್ಣು ಮಕ್ಕಳಿರುವ ಬಾಲಮಂದಿರದಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ, ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, 13 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಎಲ್ಲಾ ಮಕ್ಕಳನ್ನ ಬಿಜಿಎಂಎಲ್ ಆಸ್ಪತ್ರೆಗೆ ರವಾನಿಸಿರುವ ಅಧಿಕಾರಿಗಳು, ಆರೋಗ್ಯವಾಗಿರುವ ಮಕ್ಕಳಿಗೆ ಮುನ್ನಚ್ಚರಿಕಾ ಕ್ರಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.
ಇನ್ನೂ ಮಸ್ಕಾಂ ಬಾಲಮಂದಿರದಲ್ಲಿ ಒಟ್ಟು 25 ಮಕ್ಕಳಿದ್ದು, ಅದರಲ್ಲಿ 18 ಜನ ಗಂಡು ಮಕ್ಕಳಿಗೆ ಇನ್ನೂ ಪರೀಕ್ಷೆ ಮಾಡಿಲ್ಲ ಅನ್ನೋ ಮಾಹಿತಿಯನ್ನ ಮಕ್ಕಳ ರಕ್ಷಣಾಧಿಕಾರಿ ರಮೇಶ್ ನೀಡಿದ್ದಾರೆ.