ಕೋಲಾರ: ಜಿಲ್ಲೆಯ ಪ್ರಸಿದ್ಧ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿನ ವಾರಸುದಾರಿಕೆ ವಿವಾದ ಮುಂದುವರೆದಿದೆ. ಸದ್ಯ ಹೈಕೋರ್ಟ್ ಆದೇಶದ ಮೇರೆಗೆ ದೇವಾಲಯದ ಉಸ್ತುವಾರಿಯನ್ನು ಕಾರ್ಯದರ್ಶಿ ಕೆ ವಿ ಕುಮಾರಿಗೆ ವಹಿಸಲಾಗಿದೆ.
ಈ ಬೆನ್ನಲ್ಲೇ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ದೇವಾಲಯದ ಟಿಕೆಟ್ ಕೌಂಟರ್ನಲ್ಲಿದ್ದ ಸಿಬ್ಬಂದಿ ರಾಧಾಕೃಷ್ಣ ಎಂಬುವರು ಟಿಕೆಟ್ ಕೌಂಟರ್ನಲ್ಲಿ ಸಂಗ್ರಹವಾದ ಹಣವನ್ನು ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ತಿಳಿದು ವಿಚಾರಿಸಿದಾಗ ಸುಮಾರು 30 ಸಾವಿರ ರೂಪಾಯಿಯಷ್ಟು ಹಣ ಲಪಟಾಯಿಸಿರೋದು ಕಂಡು ಬಂದಿದೆ ಎನ್ನಲಾಗ್ತಿದ್ದು, ರಾಧಾಕೃಷ್ಣನನ್ನು ಕೆಲಸದಿಂದ ಹೊರಹಾಕಿ ಅವರ ವಿರುದ್ಧ ಬೇತಮಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೋಟಿ ಲಿಂಗೇಶ್ವರ್ ಕ್ಷೇತ್ರದಲ್ಲಿರುವ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಹೈಡ್ರಾಮಾ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ಈ ಎಲ್ಲಾ ವಿಡಿಯೋಗಳು ದೇವಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.