ETV Bharat / state

ಮುನಿಯಪ್ಪ ಎದುರೇ  ಗಳಗಳನೆ ಕಣ್ಣೀರು ಹಾಕಿದ ಕೈ ಮುಖಂಡ! - Muniyappa

ಕಾಂಗ್ರೆಸ್​ ಕಾರ್ಯಕರ್ತರ ನಡುವಿನ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈ ಮುಖಂಡರೊಬ್ಬರು ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಕೆ.ಹೆಚ್​.ಮುನಿಯಪ್ಪ ಅವರ ಮುಂದೆಯೇ ಕಣ್ಣೀರು ಹಾಕಿ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಸಭೆಯಲ್ಲಿ ಕಣ್ಣೀರು ಹಾಕಿದ ದಳಸನೂರು ಗೋಪಾಲಗೌಡ
author img

By

Published : Apr 4, 2019, 8:18 PM IST

ಕೋಲಾರ: ಶ್ರೀನಿವಾಸಪುರ ತಾಲೂಕಿನಲ್ಲಿ ನಿನ್ನೆ ನಡೆದ ಕಾಂಗ್ರೆಸ್​ ಕಾರ್ಯಕರ್ತರ ನಡುವಿನ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆಯೋಜಿಸಲಾಗಿದ್ದ ಕಾಂಗ್ರೆಸ್​ ಸಭೆಯಲ್ಲಿ ಮುಖಂಡ ದಳಸನೂರು ಗೋಪಾಲಗೌಡ ಕಣ್ಣೀರು ಹಾಕಿದರು.

ಕಾಂಗ್ರೆಸ್​ ಸಭೆಯಲ್ಲಿ ಕಣ್ಣೀರು ಹಾಕಿದ ದಳಸನೂರು ಗೋಪಾಲಗೌಡ
.

ಗೌನಿಪಲ್ಲಿಯಲ್ಲಿ ನಡೆದ ಕಾಂಗ್ರೆಸ್​ ಸಭೆಯಲ್ಲಿ ಮಾವು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಗೋಪಾಲಗೌಡರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಲಾಗಿತ್ತು. ಹೀಗಾಗಿ ಇಂದು ಶ್ರೀನಿವಾಸಪುರದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್​ ಸಭೆಯಲ್ಲಿ, ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಕೆ.ಹೆಚ್​. ಮುನಿಯಪ್ಪ ಸೇರಿದಂತೆ ಮುಖಂಡರ ಎದುರೇ ಗೋಪಾಲಗೌಡ ಕಣ್ಣೀರು ಹಾಕಿದರು. ಈ ವೇಳೆ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ಗೋಪಾಲಗೌಡರನ್ನ ಸಮಾಧಾನಪಡಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್​ ಪಕ್ಷದಲ್ಲಿ ಸುಮಾರು ವರ್ಷಗಳ ಕಾಲದಿಂದಲೂ ದುಡಿಯುತ್ತಿದ್ದೇನೆ. ಆದ್ರೆ ಈ ರೀತಿಯ ಘಟನೆ ನಡೆದಿರಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.