ಕೋಲಾರ: ಜಿಲ್ಲೆಯ ಖಾಸಗಿ ಕಂಪನಿಯೊಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸರಿಗೂ ಕೇರ್ ಮಾಡದೆ ಸೀಲ್ ಡೌನ್ ಉಲ್ಲಂಘನೆ ಮಾಡಿರುವಂತಹ ಘಟನೆ ಜರುಗಿದೆ.
ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಇಂಡೋ ಆಟೋಟೆಕ್ ಪ್ರೈವೆಟ್ ಲಿಮಿಟೆಡ್ ಕಂಪನಿಯಿಂದ ಸೀಲ್ ಡೌನ್ ಉಲ್ಲಂಘನೆ ಮಾಡಲಾಗಿದೆ. ನಿನ್ನೆ ತಪಾಸಣೆ ನಡೆಸದೆ ಹೊರ ರಾಜ್ಯಗಳಿಂದ ಕಾರ್ಮಿಕರನ್ನ ಕರೆಸಿಕೊಂಡು ಕೆಲಸ ಮಾಡಿಸುತ್ತಿದ್ದರು. ಇದರಿಂದ ಅತಂಕಕ್ಕೆ ಒಳಗಾದ ಸ್ಥಳೀಯ ನೂರಾರು ಕಾರ್ಮಿಕರು ಇದನ್ನ ವಿರೋಧಿಸಿ ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಸರ್ವೇಕ್ಷಣಾಧಿಕಾರಿಗಳು ಹಾಗೂ ಪೊಲೀಸರು ಎರಡು ದಿನಗಳ ಕಾಲ ಸೀಲ್ಡೌನ್ ಮಾಡಬೇಕೆಂದು ಸೂಚನೆ ನೀಡಿದ್ದರು. ಇದಾದ ನಂತರ ಕಾರ್ಮಿಕರು ಪ್ರತಿಭಟನೆಯನ್ನ ಕೈ ಬಿಟ್ಟಿದ್ದರು. ಅದರೆ ಇಂದು ಯಥಾಸ್ಥಿತಿಯಲ್ಲಿ ಕಂಪನಿ ತೆರೆದಿದ್ದು, ಕಂಪನಿಯಲ್ಲಿ ನೂರಾರು ಕಾರ್ಮಿಕರು ಆತಂಕದಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಕಂಪನಿಯವರೇ ಕೆಲಸಕ್ಕೆ ಹಾಜರಾಗಿ ಎಂದು ಕಾರ್ಮಿಕರು ಇರುವಂತಹ ಜಾಗಕ್ಕೆ ತೆರಳಿ ಕರೆದುಕೊಂಡು ಬಂದಿದ್ದು, ಆರೋಗ್ಯ ಇಲಾಖೆಯವರ ಆದೇಶಕ್ಕೂ ಡೋಂಟ್ ಕೇರ್ ಎನ್ನದೆ ಸೀಲ್ಡೌನ್ ಉಲ್ಲಂಘನೆ ಮಾಡಿದ್ದಾರೆ.