ETV Bharat / state

ಚೈತ್ರಾ ಕೊಟೂರು ಆತ್ಮಹತ್ಯೆ ಯತ್ನ ಪ್ರಕರಣ: ಮಗಳ ಪರಿಸ್ಥಿತಿ ಕುರಿತು ಪೋಷಕರು ಹೇಳಿದಿಷ್ಟು..!

ಚೈತ್ರಾ ಮದುವೆ ಕುರಿತು ತಗಾದೆ ತೆಗೆದಿರುವ ನಾಗಾರ್ಜುನ್ ಪೋಷಕರು ಚೈತ್ರಾ ಸಿನಿಮಾ ರಂಗದಲ್ಲಿರುವುದೇ ಅಸಮಾಧಾನಕ್ಕೆ ಕಾರಣವಂತೆ. ಸಿನಿಮಾ ರಂಗದಲ್ಲಿರುವುದರಿಂದ ನಡತೆ ಸರಿಯಿಲ್ಲ ಜೊತೆಗೆ ಜಾತಿ ಅಡ್ಡಿಯೂ ಇರಬಹುದು ಎನ್ನಲಾಗಿದೆ. ಹಾಗಾಗಿ ಕಳೆದ 10 ದಿನಗಳಿಂದ ಎರಡು ಕುಟುಂಬದವರ ಮಧ್ಯೆ ಮಾತುಕತೆ ನಡೆಯುತ್ತಿತ್ತು.

chaitra-kottur-parents-react-about-her-condition
ಚೈತ್ರಾ ಕೊಟ್ಟೂರು ಆತ್ಮಹತ್ಯೆ ಪ್ರಕರಣ
author img

By

Published : Apr 8, 2021, 5:54 PM IST

Updated : Apr 9, 2021, 12:32 AM IST

ಕೋಲಾರ: ಬಿಗ್​​​ಬಾಸ್ ಖ್ಯಾತಿಯ ಚೃತ್ರಾ ಕೊಟೂರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ 24 ಗಂಟೆ ಏನು ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಕೋಲಾರದ ಇಟಿಸಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೈತ್ರಾ ತಂದೆ ನಾರಾಯಣಪ್ಪ ಹಾಗೂ ಸಹೋದರ ಪ್ರದೀಪ್ ಆಸ್ಪತ್ರೆ ಬಳಿ ಮಾತನಾಡಿದ್ದಾರೆ. ಕೋಲಾರ ನಗರದ ಕುರುಬರ ಪೇಟೆ ಮನೆಯಲ್ಲಿ ಪೆನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪೆನಾಯಿಲ್ ಕುಡಿದು ವಾಂತಿ ಮಾಡುತ್ತಾ ಒದ್ದಾಡುತ್ತಿದ್ದ ಚೈತ್ರಾಳನ್ನು ಕಂಡ ಪೋಷಕರು ಕೂಡಲೇ ಆಕೆಯನ್ನ ಇಟಿಸಿಎಂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮದುವೆ ವಿಚಾರವಾಗಿ ವಿವಾದ ಉಂಟಾದ ಹಿನ್ನೆಲೆ ಬೇಸರದಲ್ಲಿದ್ದ ಚೈತ್ರಾ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎಂದು ಪೋಷಕರು ಹೇಳಿದ್ದಾರೆ.

ಮಗಳ ಪರಿಸ್ಥಿತಿ ಕುರಿತು ಪೋಷಕರು ಹೇಳಿದಿಷ್ಟು..!

ಚೈತ್ರಾ ಮದುವೆ ಕುರಿತು ತಗಾದೆ ತೆಗೆದಿರುವ ನಾಗಾರ್ಜುನ್ ಪೋಷಕರು ಚೈತ್ರಾ ಸಿನಿಮಾ ರಂಗದಲ್ಲಿರುವುದೇ ಅಸಮಾಧಾನಕ್ಕೆ ಕಾರಣವಂತೆ. ಸಿನಿಮಾ ರಂಗದಲ್ಲಿರುವುದರಿಂದ ನಡತೆ ಸರಿಯಿಲ್ಲ ಜೊತೆಗೆ ಜಾತಿ ಅಡ್ಡಿಯೂ ಇರಬಹುದು ಎನ್ನಲಾಗಿದೆ. ಹಾಗಾಗಿ ಕಳೆದ 10 ದಿನಗಳಿಂದ ಎರಡು ಕುಟುಂಬದವರ ಮಧ್ಯೆ ಮಾತುಕತೆ ನಡೆಯುತ್ತಿತ್ತು.

ಚೈತ್ರಾ ಬಲವಂತವಾಗಿ ಮದುವೆ ಮಾಡಿಕೊಂಡಿದ್ದಾಳೆ ಎಂದು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ನಾಗಾರ್ಜುನ್ ಸಂಬಂಧಿಕರು ದೂರು ನೀಡಿದ್ದರು. ಈಗಾಗಲೇ ಮದುವೆ ವಿವಾದ ಎಲ್ಲೆಡೆ ಹರಡಿದ್ದು ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಅಂತ ಸಹೋದರ ಪ್ರದೀಪ್ ಹೇಳಿದ್ದಾನೆ.

ಇದನ್ನೂ ಓದಿ: ಸಿಡಿ ಪ್ರಕರಣ: ಕೋರ್ಟ್​​ ಮುಂದೆ ಶರಣಾಗಲಿದ್ದಾರಾ ಶಂಕಿತ ಆರೋಪಿಗಳು?

Last Updated : Apr 9, 2021, 12:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.