ETV Bharat / state

ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ.. ಕೋಲಾರದಲ್ಲಿ ರಾಜಕೀಯ ಗುದ್ದಾಟ ಶುರು

author img

By

Published : Sep 14, 2022, 7:41 PM IST

ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಹೆಚ್ಚಾಗಿದ್ದು, ಶತಾಯಗತಾಯ ಟಿಕೆಟ್ ಪಡೆದು ಗೆಲ್ಲಲೇಬೇಕು ಎಂದು ಪ್ರತಿದಿನ ಕ್ಷೇತ್ರದಲ್ಲಿ ಒಂದಿಲ್ಲೊಂದು ವಿಚಾರ ಇಟ್ಕೊಂಡು ತಿರುಗಾಡ್ತಿದ್ದಾರೆ.

ಕೋಲಾರದಲ್ಲಿ ರಾಜಕೀಯ ಗುದ್ದಾಟ ಶುರು
ಕೋಲಾರದಲ್ಲಿ ರಾಜಕೀಯ ಗುದ್ದಾಟ ಶುರು

ಕೋಲಾರ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಟಿಕೆಟ್ ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಮತದಾರರನ್ನು ಸೆಳೆಯಲು, ಹೈಕಮಾಂಡ್‌ಗೆ ಹತ್ತಿರವಾಗಲು ಹೊಸ ಮುಖಗಳು ತಮ್ಮದೇ ಆದ ರಣತಂತ್ರ ರೂಪಿಸುತ್ತಿದ್ದಾರೆ.

ಟಿಕೆಟ್ ಆಕಾಂಕ್ಷಿಗಳಿಂದ ಕಸರತ್ತು ಶುರು

ಕೋಲಾರ ಜಿಲ್ಲೆಯಲ್ಲಿ ಒಬ್ಬರೇ ಒಬ್ಬ ಬಿಜೆಪಿ ಪಕ್ಷದ ಶಾಸಕ ಇಲ್ಲದ ಕಾರಣ ಈ ಬಾರಿ ಇಲ್ಲಿ ಕನಿಷ್ಠ ಮೂರ್ನಾಲ್ಕು ಅಭ್ಯರ್ಥಿಗಳಾದರೂ ಗೆಲ್ಲಲೇಬೇಕು ಅಂತ ರಾಜ್ಯದ ನಾಯಕರು ತೀರ್ಮಾನ ಮಾಡಿದ್ದಾರೆ. ಇನ್ನು ಇದಕ್ಕೆ ಪೂರಕವಾಗಿ ಈ ಬಾರಿ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಸಹ ಹೆಚ್ಚಾಗಿದ್ದು, ಶತಾಯಗತಾಯ ಟಿಕೆಟ್ ಪಡೆದು ಗೆಲ್ಲಲೇಬೇಕು ಎಂದು ಪ್ರತಿದಿನ ಕ್ಷೇತ್ರದಲ್ಲಿ ಒಂದಿಲ್ಲೊಂದು ವಿಚಾರ ಇಟ್ಕೊಂಡು ತಿರುಗಾಡ್ತಿದ್ದಾರೆ.

ಇನ್ನು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮಾಲೂರು ಕ್ಷೇತ್ರವನ್ನು ತೊರೆದು ಹೋದ ಬಳಿಕ ಬಿಜೆಪಿ ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿಯೂ ಹೆಚ್ಚಾಗಿದೆ. ಮಾಜಿ ಶಾಸಕ ಮಂಜುನಾಥಗೌಡ, ಹೂಡಿ ವಿಜಯಕುಮಾರ್ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಮಾಜಿ ಶಾಸಕ ಮಂಜುನಾಥ್ ಗೌಡ ಬಿಜೆಪಿ ಸೇರಿದ ಬಳಿಕ ಒಮ್ಮೆ ಸಮಾವೇಶ ಮಾಡಿದ್ದು ಬಿಟ್ಟರೇ ಎಲ್ಲೂ ಹೆಚ್ಚಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ತಿಲ್ಲ ಅನ್ನೋ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರ್ತಿದೆ.

ಮೂಲ ಬಿಜೆಪಿಯ ಕೆಲ ಮುಖಂಡರು ಸಹ ಮಂಜುನಾಥ್ ಗೌಡ ಬಿಜೆಪಿ ಸೇರ್ಪಡೆಗೆ ಅಡ್ಡಗಾಲು ಹಾಕಿದ್ರು ಸಹ ಅದು ವಿಫಲವಾಗಿದೆ. ಚುನಾವಣೆ ಸಮೀಪವಿದೆ. ಹೂಡಿ ವಿಜಯಕುಮಾರ್ ಕ್ಷೇತ್ರದಲ್ಲಿ ಬಿರುಸಿನಲ್ಲಿ ಕೆಲಸ ಮಾಡ್ತಿದ್ದಾರೆ. ಆದರೂ ನಮ್ಮ ನಾಯಕರು ಬರ್ತಿಲ್ವಲ್ಲ ಎಂದು ಜೆಡಿಎಸ್ ತೊರೆದು ಮಂಜುನಾಥ್ ಗೌಡ ಜೊತೆ ಬಿಜೆಪಿ ಸೇರ್ಪಡೆ ಆಗಿರುವ ಬೆಂಬಲಿಗರು ಆತಂಕ ಹೊರ ಹಾಕಿದ್ದಾರೆ.

ಇನ್ನು ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿರುವ ಹೂಡಿ ವಿಜಯಕುಮಾರ್ ಬೆಂಬಲವಾಗಿ ಎಂಟಿಬಿ ನಾಗರಾಜ್ ಇದ್ದು, ಮೂಲ ಬಿಜೆಪಿಗರು ಸಹ ಜೊತೆಗಿದ್ದಾರೆ. ಇದರ ನಡುವೆ ಹಾಲಿ ಕಾಂಗ್ರೆಸ್ ಶಾಸಕರಾದ ಕೆ. ವೈ ನಂಜೇಗೌಡರ ವಿರುದ್ಧ ಪ್ರತಿದಿನ ಒಂದಿಲ್ಲೊಂದು ವಿಚಾರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ವಾಗ್ದಾಳಿ ಮಾಡ್ತಿದ್ದು ಸದ್ದಿಲ್ಲದೆ ಕೆಲಸ ಮಾಡ್ತಿದ್ದಾರೆ.

ಕೊರೊನಾ ಸಮಯದಲ್ಲಿ ಫುಡ್ ಕಿಟ್, ರಕ್ತದಾನ ಶಿಬಿರ, ಹಾಳಾಗಿರೋ ರಸ್ತೆಗಳಿಗೆ ಜಲ್ಲಿ ಹೊಡೆಸಿ ಗುಂಡಿ ಮುಚ್ಚೋದು, ಸರ್ಕಾರಿ ಕಟ್ಟಡಗಳಿಗೆ ಮೂಲ ಸೌಕರ್ಯ ನೀಡೋದರ ಜೊತೆಗೆ ಸುಮಾರು ವರ್ಷಗಳಿಂದ ಮಾಲೂರು ಪಟ್ಟಣದಲ್ಲಿ ಪಾಳು ಬಿದ್ದಿದ್ದ ಅಂಬೇಡ್ಕರ್ ಭವನಕ್ಕೆ ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಕಾಯಕಲ್ಪ ನೀಡಿದ್ದಾರೆ.

ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ: ಅಂಬೇಡ್ಕರ್ ಭವನ ನವೀಕರಣಕ್ಕೆ ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಜೊತೆಗೆ ಕಟ್ಟಡ ಉನ್ನತೀಕರಣಕ್ಕೆ ಲಕ್ಷಾಂತರ ರೂಪಾಯಿ ತಮ್ಮ ಸ್ವಂತ ಹಣ ವ್ಯಯ ಮಾಡ್ತಿದ್ದು, ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ಹೂಡಿ ವಿಜಯ್ ಕುಮಾರ್ ಮಾಡ್ತಿದ್ದಾರೆ. ಈ‌ ಹಿಂದೆ ಟಿಕೆಟ್ ಕೊಡ್ತೀವಿ, ಆದರೂ ಬೇಡ ಎಂದು ದೂರ ಹೋಗ್ತಿದ್ದ ಕೋಲಾರ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಇದೀಗ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ.

ಓದಿ: ಸಚಿವ ಶ್ರೀರಾಮುಲು ರಾಜೀನಾಮೆಗೆ ಆಗ್ರಹ: ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಎಎಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.