ಕೋಲಾರ: ನಗರದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಮುಂದೆ ಜಮಾಯಿಸಿರುವ ಸಿಐಟಿಯು, ಸಿಪಿಐಎಂ ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಲ್ಲದೆ ಬಸ್ಗಳನ್ನ ರಸ್ತೆಗೆ ಇಳಿಸದಿರಲು ಅಧಿಕಾರಿಗಳಲ್ಲಿ ಪ್ರತಿಭಟನಾಕಾರರು ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಇದಕ್ಕೆ ನಿರಾಕರಿಸಿದ್ದಾರೆ.
ಇನ್ನು ಡಿಪೋ ಬಿಟ್ಟು ಕದಲದೆ ಪ್ರತಿಭಟನಾಕಾರರು ಡಿಪೋ ಮುಂದೆ ಹೆಚ್ಚಾಗುತ್ತಿದ್ದ ಹಿನ್ನೆಲೆ ಡಿಪೋ ಮುಂಭಾಗ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅಲ್ಲದೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತೊಂದರೆಯಾಗಬಾರದು ಎಂದು ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರಿಗೆ ನೋಟಿಸ್ ನೀಡುವುದರ ಜೊತೆಗೆ ಬಂಧಿಸುವ ಎಚ್ಚರಿಕೆ ನೀಡಿದ್ದಾರೆ.
ಇನ್ನು ಭದ್ರತೆಗಾಗಿ ಒಂದು ಕೆಎಸ್ಆರ್ಪಿ, ಒಂದು ಡಿಆರ್ ತುಕಡಿ ಸೇರಿದಂತೆ 70ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಹೀಗಾಗಿ ಬಸ್ ಸಂಚಾರ ಎಂದಿನಂತೆ ಇರಲಿದ್ದು, ಜಿಲ್ಲೆಯಾದ್ಯಂತ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿಲ್ಲ.