ETV Bharat / state

ಮಾಜಿ ಸಚಿವ ವರ್ತೂರು ಪ್ರಕಾಶ್​ಗೆ ಬೆಂಗಾವಲು ವಾಹನ ಹಾಗೂ ಗನ್ ಮ್ಯಾನ್ ನಿಯೋಜನೆ

Prakash
ಗನ್​ಮ್ಯಾನ್
author img

By

Published : Dec 2, 2020, 7:40 PM IST

Updated : Dec 2, 2020, 10:59 PM IST

19:36 December 02

ವರ್ತೂರು ಪ್ರಕಾಶ್​ಗೆ ಗನ್​ಮ್ಯಾನ್ ನಿಯೋಜನೆ

ಮಾಜಿ ಸಚಿವ ವರ್ತೂರು ಪ್ರಕಾಶ್​ಗೆ ಬೆಂಗಾವಲು ವಾಹನ ಹಾಗೂ ಗನ್ ಮ್ಯಾನ್ ನಿಯೋಜನೆ

ಕೋಲಾರ : ಮಾಜಿ ಸಚಿವ ವರ್ತೂರು ಪ್ರಕಾಶ್​ಗೆ ಬೆಂಗಾವಲು ವಾಹನ ಹಾಗೂ ಗನ್​ಮ್ಯಾನ್ ನಿಯೋಜಿಸಲಾಗಿದೆ. ಅಲ್ಲದೇ ಪೊಲೀಸರು ಅಪಹರಣ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ವರ್ತೂರು ಪ್ರಕಾಶ್ ಕಿಡ್ನ್ಯಾಪ್​ ಆದ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಕಾಶ್​ಗೆ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ.

ನವೆಂಬರ್ 25ರಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ತಮ್ಮ ಬೆಗ್ಲಿಹೊಸಹಳ್ಳಿ ಫಾರ್ಮ್ ಹೌಸ್​ನಿಂದ ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಎಂಟು ಜನರ ತಂಡ ಕಾರು ಅಡ್ಡಗಟ್ಟಿ ಕಿಡ್ನ್ಯಾಪ್ ಮಾಡಿತ್ತು. ಈ ವೇಳೆ, ಮುಖಕ್ಕೆ ಮಂಕಿ ಕ್ಯಾಪ್ ಧರಿಸಿದ್ದ ಅಪಹರಣಕಾರರು ಚಿಂತಾಮಣಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ₹30 ಕೋಟಿಗೆ ಬೇಡಿಕೆ ಇಟ್ಟಿದ್ದರು. 

ವರ್ತೂರು ಪ್ರಕಾಶ್‌ ತಮ್ಮಲ್ಲಿ ಹಣವಿಲ್ಲ ಎಂದಾಗ ಎರಡು ದಿನಗಳ ಕಾಲ ಚಿತ್ರ ಹಿಂಸೆ ನೀಡಿ, ಹಲ್ಲೆ ನಡೆಸಿದ್ದಾರೆ. ಡ್ರೈವರ್ ಸುನಿಲ್ ಮೇಲೂ ಹಲ್ಲೆ ನಡೆಸಿದ್ದರಿಂದ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆದ್ರೆ, ಇದಾದ ಬಳಿಕ ಸುನಿಲ್ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. 

ನಂತರ ಹಣ ಕೊಡದಿದ್ದರೆ ಪ್ರಕಾಶ್​ರನ್ನು ಬಿಡಲ್ಲ ಎಂದು ಅವರ ಆಪ್ತ ನಯಾಜ್ ಎಂಬುವನಿಗೆ ಅಪಹರಣಕಾರರು ಕಾಲ್ ಮಾಡಿದ್ದಾರೆ. ಬಳಿಕ ಅವರ ಕುಟುಂಬಸ್ಥರು ನಯಾಜ್​ಗೆ ನರಸಾಪುರ ಕಾಫಿಡೇ ಬಳಿ 40 ಲಕ್ಷ ರೂಪಾಯಿ ಕೊಟ್ಟು ಕಳಿಸಿದ್ದಾರೆ.

ಆ ವೇಳೆಗೆ ವರ್ತೂರು ಪ್ರಕಾಶ್, ನನ್ನ ಬಳಿ ಹಣವಿಲ್ಲ. ಎಲೆಕ್ಷನ್​ನಲ್ಲಿ ಎಲ್ಲ ಹಣ ಕಳೆದುಕೊಂಡಿರುವುದಾಗಿ ಹೇಳಿದ್ದರಿಂದ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಹೀಗಂತ ವರ್ತೂರು ಪ್ರಕಾಶ್ ಬೆಳ್ಳಂದೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಘಟನೆಯನ್ನು ವಿವರಿಸಿದ್ದಾರೆ.

Last Updated : Dec 2, 2020, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.