ETV Bharat / state

ಗಾಯಾಳುಗಳನ್ನು ಸಾಗಿಸುವ ವೇಳೆ ಕೈಕೊಟ್ಟ ಆ್ಯಂಬುಲೆನ್ಸ್

ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆ್ಯಂಬುಲೆನ್ಸ್​ ಕೆಟ್ಟು ನಿಂತ ಪರಿಣಾಮ ಗಾಯಾಳುಗಳು ಪರದಾಡುವ ಪರಿಸ್ಥಿತಿ ಎದುರಾಯಿತು.

KN_KLR_ambulance _PROBLEM_AV_KA10049
ಕೆಟ್ಟುನಿಂತ ಆ್ಯಂಬುಲೆನ್ಸ್ಅನ್ನು​ ತಳ್ಳುತ್ತಿರುವ ಗ್ರಾಮಸ್ಥರು
author img

By

Published : Aug 25, 2022, 4:38 PM IST

ಕೋಲಾರ: ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗ ಸಾಗಿಸುವ ವೇಳೆ ಆ್ಯಂಬುಲೆನ್ಸ್​​ ಕೆಟ್ಟು ನಿಂತ ಪರಿಣಾಮ ಗ್ರಾಮಸ್ಥರು ಆ್ಯಂಬುಲೆನ್ಸ್​ನ್ನು ನೂಕಿ ಚಾಲನೆಗೆ ಪ್ರಯತ್ನಿಸಿರುವ ಘಟನೆ ಹೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಸಂಭವಿಸಿದೆ.

ಗಟ್ಟಹಳ್ಳಿ ಬಳಿ ಟೆಂಪೋ‌ವೊಂದು ಪಲ್ಟಿಯಾಗಿ ಐದು ಜನರು ಗಾಯಗೊಂಡಿದ್ದರು. ಈ ವೇಳೆ ಆ್ಯಂಬುಲೆನ್ಸ್​ನಲ್ಲಿ ಗಾಯಾಳುಗಳನ್ನು ಹೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಬಳಿಕ ಅಲ್ಲಿಂದ ಕೋಲಾರ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಲು ಮುಂದಾದಾಗ, ತಾಂತ್ರಿಕ ದೋಷದಿಂದ ಆ್ಯಂಬುಲೆನ್ಸ್​​ ಕೆಟ್ಟು ನಿಂತಿದೆ. ಸ್ಥಳದಲ್ಲೇ ಇದ್ದ ಗ್ರಾಮಸ್ಥರು ವಾಹನವನ್ನು ತಳ್ಳಿ ಚಾಲನೆಗೊಳಿಸಲು ಮುಂದಾದರಾದರೂ ವಾಹನ ಮಾತ್ರ ಅಲುಗಾಡಲಿಲ್ಲ. ಇದರಿಂದ ಗಾಯಾಳುಗಳು ಪರದಾಡುವಂತಾಯಿತು.

ಕೆಟ್ಟುನಿಂತ ಆ್ಯಂಬುಲೆನ್ಸ್ಅನ್ನು​ ತಳ್ಳುತ್ತಿರುವ ಗ್ರಾಮಸ್ಥರು

ಇದು ಹಳೆಯ ಆ್ಯಂಬುಲೆನ್ಸ್​ ಆದ ಕಾರಣ ವಾಹನ ಕೆಟ್ಟು ನಿಂತಿದೆ ಎಂದು ಆರೋಗ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪ್ರತಿ ಜಿಲ್ಲೆಯಲ್ಲೂ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ಕಾರದಿಂದ ಸಹಾಯ.. ಸಿಎಂ ಬೊಮ್ಮಾಯಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.