ETV Bharat / state

ಹೈಕಮಾಂಡ್ ಆದೇಶವನ್ನ ಎಲ್ಲರೂ ಪಾಲನೆ ಮಾಡುತ್ತಿದ್ದಾರೆ: ಎಸ್​​. ಟಿ. ಸೋಮಶೇಖರ್

ರಾಜ್ಯಸಭಾ ಚುನಾವಣಾ ಸ್ಪರ್ಧಿಗಳನ್ನು ದೆಹಲಿ ಹಾಗೂ ಕೋರ್ ಕಮಿಟಿಯವರು ಸೇರಿ ತೀರ್ಮಾನ ಮಾಡಿದ್ದು, ಹೈಕಮಾಂಡ್ ಆದೇಶವನ್ನ ಎಲ್ಲರೂ ಪಾಲನೆ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್​​. ಟಿ. ಸೋಮಶೇಖರ್ ಹೇಳಿದರು‌.

ಸಹಕಾರ ಸಚಿವ ಎಸ್​​. ಟಿ. ಸೋಮಶೇಖರ್
ಸಹಕಾರ ಸಚಿವ ಎಸ್​​. ಟಿ. ಸೋಮಶೇಖರ್
author img

By

Published : Jun 9, 2020, 8:18 PM IST

ಕೋಲಾರ: ರಾಜ್ಯಸಭಾ ಚುನಾವಣೆ ಸ್ಪರ್ಧಿಗಳನ್ನ ದೆಹಲಿ ನಾಯಕರು ಆಯ್ಕೆ ಮಾಡಿದ್ದು, ಹೈಕಮಾಂಡ್ ಆದೇಶವನ್ನ ಎಲ್ಲರೂ ಪಾಲನೆ ಮಾಡುತ್ತಿದ್ದಾರೆ ಎಂದು ಕೋಲಾರದಲ್ಲಿ ಸಹಕಾರ ಸಚಿವ ಎಸ್​​. ಟಿ. ಸೋಮಶೇಖರ್ ಹೇಳಿದರು‌.

ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣಾ ಸ್ಪರ್ಧಿಗಳನ್ನ ದೆಹಲಿ ಹಾಗೂ ಕೋರ್ ಕಮಿಟಿಯವರು ಸೇರಿ ತೀರ್ಮಾನ ಮಾಡಿದ್ದು, ಹೈಕಮಾಂಡ್ ಆದೇಶವನ್ನ ಎಲ್ಲರೂ ಪಾಲನೆ ಮಾಡುತ್ತಿದ್ದಾರೆ ಎಂದರು.

ಬಿಜೆಪಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಹೈಕಮಾಂಡ್ ಆದೇಶವನ್ನ ಸ್ವಾಗತಿಸಿದ್ದು, ಹೈಕಮಾಂಡ್ ಈಸ್ ಹೈಕಮಾಂಡ್ ಎಂದು ಹೇಳಿದರು. ಇನ್ನು ವಿಧಾನಪರಿಷತ್ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್, ಶಂಕರ್, ವಿಶ್ವನಾಥ್ ಸೇರಿದಂತೆ ರೋಷನ್ ಬೇಗ್ ಅವರಿಗೆ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ‌ ನಾವು ಮನವಿ ಮಾಡಿದ್ದು, ಅವರದ್ದೇ ಆದ ಕಮಿಟಿ ಹಾಗೂ ಹೈಕಮಾಂಡ್​​ನಲ್ಲಿ ಚರ್ಚೆ ಮಾಡಿ ಸ್ಥಾನಮಾನ ನೀಡುತ್ತಾರೆ ಎಂದರು.

ಯಡಿಯೂರಪ್ಪ ಅವರು ಮಾತುಕೊಟ್ಟಂತೆ ಈ ಹಿಂದೆಯೂ ನಡೆದುಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿಯೇ ನಾವು ಶಾಸಕರಾಗಿದ್ದು, ಪರಿಷತ್​​ನಲ್ಲಿ ನಾಲ್ಕು ಜನಕ್ಕೆ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.