ETV Bharat / state

ಎಪಿಎಂಸಿ ಕಾಯ್ದೆ ತಿದ್ದುಪಡಿ: ಆದಾಯವಿಲ್ಲದೇ ಅವನತಿಯತ್ತ ಕೃಷಿ ಉತ್ಪನ್ನ ಮಾರುಕಟ್ಟೆ

author img

By

Published : Oct 29, 2020, 4:53 PM IST

ಹೊಸ ಕಾಯ್ದೆಯಿಂದಾಗಿ ಎಪಿಎಂಸಿಗಳಲ್ಲಿ ಸಿಬ್ಬಂದಿ ಕಡಿತ, ನಿರ್ವಹಣೆ ಕಡಿತ ಮಾಡುವ ಪರಿಸ್ಥಿತಿ ಎದುರಾಗಿದೆ. ಇದು ಹೊಸ ಕಾಯ್ದೆ ಜಾರಿಗೆ ತಂದ ಮೂರೇ ತಿಂಗಳಲ್ಲಿ ಮಾರುಕಟ್ಟೆಗಳ ನಿರ್ವಹಣೆ ಮಾಡಲು ಹಣವಿಲ್ಲದೆ ಎಪಿಎಂಸಿಗಳು ಸಂಕಷ್ಟಕ್ಕೆ ಸಿಲುಕಿವೆ.

agricultural-product-market-decline-amendment-of-the-apmc-act-news
ಕೃಷಿ ಉತ್ಪನ್ನ ಮಾರುಕಟ್ಟೆ ಅವನತಿಗೆ ಕಾರಣವಾಗಲಿದೆಯಾ, ಎಪಿಎಂಸಿ ಕಾಯ್ದೆ ತಿದ್ದುಪಡಿ..?

ಕೋಲಾರ: ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಹೊಸ ಮಾರುಕಟ್ಟೆ ಕಾಯ್ದೆಗಳು, ಕೆಲವೇ ತಿಂಗಳುಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮುನ್ಸೂಚನೆ ಕೊಟ್ಟಿದೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ

ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿತು. ಇದಕ್ಕೆ ದೇಶಾದ್ಯಂತ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿತ್ತು. ಹೊಸ ಕಾಯ್ದೆಯಿಂದಾಗಿ ಎಪಿಎಂಸಿಗಳ ಆದಾಯ ಶೇ. 75 ರಷ್ಟು ಕುಸಿತ ಕಾಣುತ್ತಿದೆ. ಪರಿಣಾಮ ಎಪಿಎಂಸಿಗಳು ತಮ್ಮ ವ್ಯವಸ್ಥೆಯನ್ನು ನಿರ್ವಹಿಸೋದು ಕಷ್ಟವಾಗಿದೆ.

ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಹೊರತುಪಡಿಸಿ, ಮಾಲೂರು, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ಮಾರುಕಟ್ಟೆಗಳ ಆದಾಯ ತೀವ್ರ ಕುಸಿತ ಕಂಡಿದೆ. ಪರಿಣಾಮ ಎಪಿಎಂಸಿಗಳಲ್ಲಿ ಸಿಬ್ಬಂದಿ ಕಡಿತ, ನಿರ್ವಹಣೆ ಕಡಿತ ಮಾಡುವ ಪರಿಸ್ಥಿತಿ ಎದುರಾಗಿದೆ. ಇದು ಹೊಸ ಕಾಯ್ದೆ ಜಾರಿಗೆ ತಂದ ಮೂರೇ ತಿಂಗಳಲ್ಲಿ ಮಾರುಕಟ್ಟೆಗಳ ನಿರ್ವಹಣೆ ಮಾಡಲು ಹಣವಿಲ್ಲದೆ ಎಪಿಎಂಸಿಗಳು ಸಂಕಷ್ಟಕ್ಕೆ ಸಿಲುಕಿವೆ.

ಹೊಸ ಕಾಯ್ದೆ ಜಾರಿಗೆ ತಂದ ನಂತರ ಹಾಗೂ ಮೊದಲು ಎಪಿಎಂಸಿ ಆದಾಯದ ವಿವರ..
ಜನವರಿ ಫೆಬ್ರವರಿ ಆಗಸ್ಟ್​ ಸೆಪ್ಟಂಬರ್​
ಬಂಗಾರಪೇಟೆ- 16,12,863 ರೂ. 16,61,447 ರೂ. 5, 37,946 ರೂ. 3,25,107 ರೂ.
ಮಾಲೂರು- 26,555ರೂ. 60,3249 ರೂ. 15,306 ರೂ. 2,694 ರೂ.
ಮುಳಬಾಗಿಲು- 2,57,396 4,59,708 64,540 99,312

ಒಟ್ಟಾರೆ ಹೊಸ ಕಾಯ್ದೆಯಿಂದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ, ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಅವನತಿ ಹಾದಿ ಹಿಡಿಯಲಿದೆ ಎಂಬುದು ಹಲವರ ವಾದ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.