ETV Bharat / state

ಮದ್ಯದ ಅಮಲಿನಲ್ಲಿ ಗಣೇಶ ಮೂರ್ತಿಗಳ ವಿರೂಪಗೊಳಿಸಿದ ಯುವಕರು.. ಐವರ ಬಂಧನ - ಗಣೇಶ ಮೂರ್ತಿಗಳ ವಿರೂಪ

ಕೋಲಾರದಲ್ಲಿ ಗಣೇಶ ಮೂರ್ತಿಗಳ ವಿರೂಪಗೊಳಿಸಿರುವ ಆರೋಪದ ಮೇರೆಗೆ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಗಣೇಶ ಮೂರ್ತಿಗಳ ವಿರೂಪ
ಗಣೇಶ ಮೂರ್ತಿಗಳ ವಿರೂಪ
author img

By

Published : Sep 4, 2022, 5:55 PM IST

ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಮದ್ಯದ ಅಮಲಿನಲ್ಲಿ ಯುವಕರ ತಂಡ ಚೆಲ್ಲಾಟವಾಡಿ ಗಣೇಶ ಮೂರ್ತಿಗಳ ವಿರೂಪಗೊಳಿಸಿದ ಘಟನೆ ಜರುಗಿದೆ. ಈ ಸಂಬಂಧ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮದೊಂದಿಗೆ ಪಟ್ಟಣದ ಬೀದಿಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಪಟ್ಟಣದ ಮಲ್ಲೇಶ್​, ಕಾಂತರಾಜು, ಗಿರೀಶ್​, ಪುನೀತ್​, ಚಂದು ಎಂಬ ಯುವಕರು ಕುಡಿದ ಅಮಲಿನಲ್ಲಿ ಬೀದಿಯಲ್ಲಿದ್ದ ಗಣೇಶ ಮೂರ್ತಿಗಳ ಮೇಲೆ ವಿಕೃತಿ ಮೆರೆದಿದ್ದಾರೆ.

ಗಣೇಶ ಮೂರ್ತಿಗಳನ್ನು ವಿರೂಪಗೊಳಿಸಿದ ಯುವಕರನ್ನು ಬಂಧಿಸಿರುವುದು

ಗಣೇಶ ಮೂರ್ತಿಗಳನ್ನು ಕೆಳಗಿಳಿಸಿ, ಮಲಗಿಸಿ, ಮೂರ್ತಿಗಳನ್ನು ವಿರೂಪಗೊಳಿಸುವ ಮೂಲಕ ವಿಕೃತಿ‌ ಮೆರೆದಿದ್ದಾರೆ. ಮಾಲೂರು ಪಟ್ಟಣದ ನಾಲ್ಕೈದು ಗಣೇಶ ಮೂರ್ತಿಗಳನ್ನು ಇಟ್ಟಿರುವ ಕಡೆ ಈ ಯುವಕರು ಕೃತ್ಯವನ್ನು ಎಸಗಿದ್ದು, ವಿಕೃತಿ ಮೆರೆದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾಲೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಓದಿ: ಬೆಂಗಳೂರು ತೊರೆಯುವ ಹೇಳಿಕೆ: ಐಟಿಬಿಟಿ ಕಂಪನಿಗಳ ಜೊತೆ ಸಭೆಗೆ ಮುಂದಾದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.