ETV Bharat / state

ಇಂದಿರಾ ಕ್ಯಾಂಟೀನ್​ ಹೆಸರು ಬದಲಾವಣೆ ವಿಚಾರ : ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ - ಇಂದಿರಾ ಕ್ಯಾಂಟೀನ್​​​ಗೆ ಹೆಸರು ಬದಲಾವಣೆ ವಿಚಾರ

ಕ್ಯಾಂಟೀನ್​ಗೆ ಹೆಸರಿಡುವ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಬೇಡ. ಹೆಸರು ಇಟ್ಟ ನಂತರ ಕಾಂಗ್ರೆಸ್ ಬಿಟ್ಟು ಎಷ್ಟೋ ಪರ್ಯಾಯ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಬಿಜೆಪಿ ಸರ್ಕಾರವೂ ಸಹ ಅಧಿಕಾರಕ್ಕೆ ಬಂದಿದೆ. ನಮಗೆ ಹೆಸರು ಇಷ್ಟ ಇಲ್ಲ ತೆಗೆದು ಹಾಕ್ತೀವಿ ಎಂದು ತೆಗೆದು ಹಾಕಬೇಕು. ಅದನ್ನು ಬಿಟ್ಟು ಕೆಟ್ಟ ಮಾತುಗಳನ್ನು ಆಡಬಾರದು..

Actor Mukhyamantri Chandru
ಮುಖ್ಯಮಂತ್ರಿ ಚಂದ್ರು
author img

By

Published : Aug 14, 2021, 5:07 PM IST

ಕೋಲಾರ : ಇಂದಿರಾ ಕ್ಯಾಂಟೀನ್​​​ಗೆ ಹೆಸರಿಡುವ ಕಾಲದಲ್ಲಿಯೇ ಆಕ್ಷೇಪ ಮಾಡಬೇಕಿತ್ತು. ಹೆಸರು ಇಟ್ಟಾಗಿದೆ. ಮತ್ತೆ ಯಾಕೆ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಹೇಳಿದರು.

ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆ ಕುರಿತಂತೆ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಕ್ಯಾಂಟೀನ್​ಗೆ ಹೆಸರಿಡುವ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಬೇಡ. ಹೆಸರು ಇಟ್ಟ ನಂತರ ಕಾಂಗ್ರೆಸ್ ಬಿಟ್ಟು ಎಷ್ಟೋ ಪರ್ಯಾಯ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಬಿಜೆಪಿ ಸರ್ಕಾರವೂ ಸಹ ಅಧಿಕಾರಕ್ಕೆ ಬಂದಿದೆ. ನಮಗೆ ಹೆಸರು ಇಷ್ಟ ಇಲ್ಲ ತೆಗೆದು ಹಾಕ್ತೀವಿ ಎಂದು ತೆಗೆದು ಹಾಕಬೇಕು. ಅದನ್ನು ಬಿಟ್ಟು ಕೆಟ್ಟ ಮಾತುಗಳನ್ನು ಆಡಬಾರದು ಎಂದರು.

ಓದಿ: ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಡೌಟ್: ಸಿದ್ದರಾಮಯ್ಯ

ಕ್ಯಾಂಟೀನ್​​ ಹೆಸರಿನ ತಗಾದೆ ವಾಜಪೇಯಿ ಹಾಗೂ ಉಪಾಧ್ಯಾಯ ಹೆಸರುಗಳ ತನಕ ಹೋಗುತ್ತಿದೆ. ರಾಜಕೀಯವಾಗಿ ಈ ವಿಚಾರವನ್ನು ದಾಳ ಮಾಡಿಕೊಂಡು ಸಾರ್ವಜನಿಕ ವಲಯದಲ್ಲಿ ಅಸಹ್ಯ ಪಟ್ಟುಕೊಳ್ಳುವ ರೀತಿ ವರ್ತಿಸಬೇಡಿ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.