ETV Bharat / state

ಕೋಲಾರದಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ

ಕೋಲಾರದಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಕಂಡು ಬಂದಿದೆ.

Young man dead body found in Kolar, Kolar canal incident, Kolar crime news, ಕೋಲಾರದಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ, ಕೋಲಾರದಲ್ಲಿ ಕಾಲವೆ ದುರಂತ, ಕೋಲಾರ ಅಪರಾಧ ಸುದ್ದಿ, ಯುವಕ 20 ಗಂಟೆಗಳ ನಂತರ ಶವವಾಗಿ ಪತ್ತೆ,
ಕೋಲಾರದಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ
author img

By

Published : Aug 4, 2022, 1:01 PM IST

ಕೋಲಾರ: ಕಾಲುವೆಯಲ್ಲಿ ಮೀನು ಹಿಡಿಯಲು ಹೋಗಿ ಕೊಚ್ಚಿಹೋಗಿದ್ದ ಯುವಕ 20 ಗಂಟೆಗಳ ನಂತರ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ. ಯುವಕನೊಬ್ಬ ಕೋಡಿ ಕಣ್ಣೂರು ಕೆರೆ ಕಾಲುವೆ ನೀರಿನಲ್ಲಿ ಮಳೆಯನ್ನೂ ಲೆಕ್ಕಿಸದೇ ಮೀನು ಹಿಡಿಯಲು ಹೋಗಿದ್ದನು.

ಈ ವೇಳೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಯುವಕ ಕೊಚ್ಚಿ ಹೋಗಿದ್ದ. ಅಗ್ನಿ ಶಾಮಕ ದಳದ ಸಿಬ್ಬಂದಿ ಸತತ 20 ಗಂಟೆಗಳ ಶೋಧ ಕಾರ್ಯಾಚರಣೆ ನಡೆಸಿದರು. ಬಳಿಕ ಮಣಿಘಟ್ಟ ರಸ್ತೆಯ ರಾಜಕಾಲುವೆಯಲ್ಲಿ ಯುವಕನ ಶವವಾಗಿ ಪತ್ತೆಯಾಗಿದೆ.

ಕೋಲಾರದಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ ಆಗಿದ್ದು, ಮೃತ ಯುವಕ ಮುಳಬಾಗಿಲು ಪಟ್ಟಣದ ನೌಷಾದ್ ಎಂದು ಗುರುತಿಸಲಾಗಿದೆ. ಮಗನ ಶವ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಿನ್ನೆಯಿಂದ ಮಳೆಯನ್ನು ಲೆಕ್ಕಿಸದೇ ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದರು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹರಿಯುವ ನೀರಿನಲ್ಲಿ ಮೀನು ಹಿಡಿಯಲು ನೀರಿಗೆ ಇಳಿಯದಂತೆ ಅಗ್ನಿಶಾಮಕ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಓದಿ: ಸುಳ್ಯ: ಮುಸ್ಲಿಂ ಯುವಕನನ್ನು ನದಿಗೆ ಹಾರಿ ರಕ್ಷಿಸಿದ ಹಿಂದೂ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.