ಕೋಲಾರ : ನೇಣು ಬಿಗಿದುಕೊಂಡು ವರದಿಗಾರರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆಯಲ್ಲಿ ಈ ಘಟನೆ ಜರುಗಿದೆ. ಶ್ರೀಧರ್ (45) ಆತ್ಮಹತ್ಯೆಗೆ ಶರಣಾದ ವರದಿಗಾರನಾಗಿದ್ದಾರೆ.
ಖಾಸಗಿ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಶ್ರೀಧರ್, ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಡೆತ್ನೋಟ್ನಲ್ಲಿ ತನ್ನ ಜೀವನದಲ್ಲಿ ಎಂದಿಗೂ ಕಪ್ಪು ಚುಕ್ಕೆ ಇರಲಿಲ್ಲ. ನನ್ನ ಜೀವನದಲ್ಲಿ ತಪ್ಪು ಮಾಡಿಲ್ಲವಾದರೂ ನಿನ್ನೆ ಕಪ್ಪು ಚುಕ್ಕೆ ಬಂದಿದೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುಗಳು ಸೇರಿ ವಿದೇಶಕ್ಕೆ ಹೋಗುವವರೆಲ್ಲರಿಗೂ 22ರಿಂದ ಲಸಿಕೆ- ಡಿಸಿಎಂ
ನಿನ್ನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆಜಿಎಫ್ ನಗರದ ಬೆಮೆಲ್ ಪೊಲೀಸರು ವರದಿಗಾರನನ್ನು ವಿಚಾರಣೆ ನಡೆಸಿದ್ದರು. ಇಂದು ತಮ್ಮ ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಕೆಜಿಎಫ್ನ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.