ಕೋಲಾರ: ಜೋಕಾಲಿ ಆಡುವಾಗ ಸೀರೆ ಕುತ್ತಿಗೆಗೆ ಸುತ್ತಿಕೊಂಡಿದ್ದು ಓರ್ವ ಬಾಲಕಿ ಸಾವನ್ನಪ್ಪಿ, ಮತ್ತೋರ್ವಳು ಗಂಭೀರಗೊಂಡಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೆದ್ದೂರು ಗ್ರಾಮದಲ್ಲಿ ನಡೆದಿದೆ. ಮೇಘನಾ (12) ಮೃತ ಬಾಲಕಿಯಾಗಿದ್ದಾಳೆ.
ಘಟನೆಯಲ್ಲಿ ಮತ್ತೋರ್ವ ಬಾಲಕಿ ಶ್ರೀದೇವಿ ಎಂಬುವಳ ಸ್ಥಿತಿ ಗಂಭೀರವಾಗಿದ್ದು, ಕೋಲಾರದಿಂದ ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಇಬ್ಬರೂ ಬಾಲಕಿಯರು ಮನೆಯಲ್ಲಿ ಸೀರೆಯಿಂದ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದರು. ಈ ವೇಳೆ ಬಾಲಕಿಯರ ಕುತ್ತಿಗೆಗೆ ಸೀರೆ ಸುತ್ತಿಕೊಂಡಿದ್ದು, ಉಸಿರಾಡಲು ಆಗದೆ ಮೇಘನಾ ಸಾವನ್ನಪ್ಪಿದ್ದಾಳೆ. ಗ್ರಾಮದ ನಿವಾಸಿಯೊಬ್ಬರು ಬಾಲಕಿಯರು ಸೀರೆಗೆ ಸಿಲುಕಿ ಒದ್ದಾಡುತ್ತಿರುವುದನ್ನು ಗಮನಿಸಿದ್ದರಿಂದ ಶ್ರೀದೇವಿಯ ಪ್ರಾಣ ಉಳಿದಿದೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ವಿಮಾನದ ರೆಕ್ಕೆ ಮೇಲೆ ಕುಳಿತು ಪ್ರಯಾಣಿಸಿದ ಜನ!- ವಿಡಿಯೋ ನೋಡಿ