ಕೋಲಾರ: ಮಹಾರಾಷ್ಟ್ರದಿಂದ ಬಂದ ದಂಪತಿ ಹಾಗೂ ಮಗು ಸೇರಿದಂತೆ ಜಿಲ್ಲೆಯಲ್ಲಿ ಇಂದು 5 ಕೊರೊನಾ ಪ್ರಕರಣ ಪತ್ತೆಯಾಗಿವೆ.
26 ವರ್ಷದ ಪತಿ, 24 ವರ್ಷದ ಪತ್ನಿ ಹಾಗೂ 2 ವರ್ಷದ ಮಗುವಿಗೆ ಕೊರೊನಾ ದೃಢವಾಗಿದೆ. ಕಳೆದ ಶನಿವಾರ ಸಂಜೆ ಈ ಕುಟುಂಬ ಮಹಾರಾಷ್ಟ್ರದಿಂದ ಬಂಗಾರಪೇಟೆಗೆ ಬಂದು ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಆಗಿತ್ತು. ಕೆಜಿಎಫ್ನ 22 ವರ್ಷದ ಡಿಎಆರ್ ಪೊಲೀಸ್ ಪೇದೆಗೂ ಕೊರೊನಾ ಸೋಂಕು ದೃಢಪಟ್ಟಿದೆ. ಇವರು ಕೆಜಿಎಫ್ನಿಂದ ಚಿತ್ರದುರ್ಗದ ಪೊಲೀಸ್ ತರಬೇತಿ ಕೇಂದ್ರಕ್ಕೆ ತರೆಳಿದ್ದ ವೇಳೆ ಕೊರೊನಾ ತಗುಲಿದೆ ಎನ್ನಲಾಗಿದೆ. ಚೆನ್ನೈಗೆ ಹೋಗಿ ಬಂದಿದ್ದ ಶ್ರೀನಿವಾಸಪುರದ 45 ವರ್ಷದ ವ್ಯಾಪಾರಿಗೂ ಕೊರೊನಾ ಸೋಂಕು ದೃಢವಾಗಿದೆ.
ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಮುಂದುವರೆಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 36ಕ್ಕೆ ಏರಿದೆ. ಈವರೆಗೆ 26 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.