ಕೋಲಾರ: ಕರ್ನಾಟಕದಲ್ಲಿ ಮೆಡಿಕಲ್ ಕಾಲೇಜ್ಗಳು ಇದೀಗ ಕೋವಿಡ್ ಹಾಟ್ಸ್ಪಾಟ್ಗಳಾಗುತ್ತಿದ್ದು, ಧಾರವಾಡದ ಎಸ್ಡಿಎಂ ಹಾಗೂ ಮಂಗಳೂರಿನ ಬಳಿಕ ಇದೀಗ ಕೋಲಾರದಲ್ಲಿರುವ ವೈದ್ಯಕೀಯ ಕಾಲೇಜ್ನಲ್ಲೂ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಕಾಲೇಜ್ ಹಾಗೂ ಹಾಸ್ಟೇಲ್ ಅನ್ನ ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಕೋಲಾರದ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜ್ನಲ್ಲಿ ಕಳೆದ ನಾಲ್ಕು ದಿನಗಳಲ್ಲಿ 30 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಅವರ ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಿಕೊಡಲಾಗಿದೆ.
ದೇವರಾಜ ಅರಸು ವೈದ್ಯಕೀಯ ಕಾಲೇಜಿನ 1,160 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನ ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, ಈ ವೇಳೆ, 30 ವಿದ್ಯಾರ್ಥಿಗಳಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಇವರನ್ನ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ: U19 Asia Cup: ಪಾಕ್ ವಿರುದ್ಧ ಲಾಸ್ಟ್ ಓವರ್ ಥ್ರಿಲ್ಲರ್ನಲ್ಲಿ 'ಗೆಲುವು' ಕೈಚೆಲ್ಲಿದ ಭಾರತ
ರಾಜ್ಯದಲ್ಲಿ ಇದೀಗ ಶೇ 0.35ರಷ್ಟು ದಷ್ಟು ಕೊರೊನಾ ಪಾಸಿಟಿವಿಟಿ ಇದ್ದು, 7,251 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಇಲ್ಲಿಯವರೆಗೆ 31 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ 15 ಜನರು ಗುಣಮುಖರಾಗಿದ್ದಾರೆ.