ETV Bharat / state

15 ಕೆಜಿ ಟೊಮೆಟೊ ಬಾಕ್ಸ್​​ಗೆ ₹ 2200 .. ಕೋಲಾರ ಎಪಿಎಂಸಿಯಲ್ಲಿ ಕಿಚನ್​ ಕ್ವೀನ್​ ದಾಖಲೆ ಬೆಲೆಗೆ ಮಾರಾಟ - ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವೈಚಕೂರು ಗ್ರಾಮದ ರೈತ ವೆಂಕಟರಮಣಪ್ಪ ಅವರು ಕೋಲಾರ ಎಪಿಎಂಸಿಗೆ 36 ಟೊಮೆಟೊ ಬಾಕ್ಸ್ ತಂದಿದ್ದರು. ಪ್ರತಿ 15 ಕೆಜಿ ಟೊಮೆಟೊ ಬಾಕ್ಸ್​ಗೆ 2200 ರೂ. ಗಳಂತೆ ಹರಾಜು ಆಗಿದೆ.

kolar apmc
ಕೋಲಾರ ಎಪಿಎಂಸಿ
author img

By

Published : Jul 11, 2023, 5:49 PM IST

Updated : Jul 11, 2023, 7:57 PM IST

ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ದಾಖಲೆ ಬೆಲೆಗೆ ಮಾರಾಟ

ಕೋಲಾರ: ದೇಶಾದ್ಯಂತ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಬೆಳೆದಿರುವ ಬೆಳೆಗಾರರಿಗೆ ಈಗ ಲಕ್ ಖುಲಾಯಿಸಿದೆ.. ಕಿಚನ್ ಕ್ವೀನ್​ ಖ್ಯಾತಿ ಇರುವ ಟೊಮೆಟೊಗೆ ಈಗ ಎಲ್ಲಿಲ್ಲಿದ ಬೇಡಿಕೆ ಬಂದಿದ್ದು, ಕೆಂಪು ಚಿನ್ನ ಎಂದು ಮಾರುಕಟ್ಟೆಯಲ್ಲಿ ಕರೆಯಿಸಿಕೊಳ್ಳುತ್ತಿದೆ.

ಇಂದು ಕೋಲಾರದ ಎಪಿಎಂಸಿಯಲ್ಲಿ 15 ಕೆಜಿ ಇರುವ ಟೊಮೆಟೊ ಬಾಕ್ಸ್ 2200 ರೂ.ಗಳಿಗೆ ಹರಾಜಾಗುವ ಮೂಲಕ ದಾಖಲೆ ಬರೆಯಿತು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದ ವೆಂಕಟರಮಣ ಎಂಬುವರು ತಂದಿದ್ದ 15 ಕೆಜಿ ಟೊಮೆಟೊ ಬಾಕ್ಸ್​​ಗೆ 2200 ರೂ.ಗಳಿಗೆ ಹರಾಜಾಗಿದ್ದು ಇಂದಿನ ಮಾರುಕಟ್ಟೆ ವಿಶೇಷವಾಗಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಟೊಮೆಟೊ ಅಕ್ಷರಶಃ ಕೆಂಪು ಚಿನ್ನವಾಗಿ ಗಮನ ಸೆಳೆಯುತ್ತಿದೆ. ಕಳೆದ ಐದು ವರ್ಷಗಳಲ್ಲೇ ಇಂದು ಟೊಮೆಟೊ ದಾಖಲೆ ಬೆಲೆಗೆ ಬಿಕರಿಯಾಗಿದೆ. ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದೊಂದು ತಿಂಗಳಿನಿಂದ ಟೊಮೆಟೊಗೆ ಸಿಕ್ಕಾಪಟ್ಟಿ ಡಿಮ್ಯಾಂಡ್ ಬಂದಿದೆ.

ಅದರಲ್ಲೂ ಗಣನೀಯ ನಿರೀಕ್ಷೆಗೂ ಮೀರಿ ಬೆಲೆ ಏರಿಕೆ ಕಾಣುತ್ತಿರುವ ಟೊಮೆಟೊ ದರ ಇವತ್ತು 15 ಕೆಜಿ ಟೊಮೆಟೊ ಬಾಕ್ಸ್ 2200 ರೂ. ಗೆ ಹರಾಜಾಗಿದೆ. ಒಂದು ಕೆಜಿಗೆ ಸರಾಸರಿ 150 ರೂಪಾಯಿ ಬೆಲೆ ಕಂಡಿದೆ. ಅಂದರೆ ಸರಾಸರಿ ಒಂದು ಟೊಮೆಟೊ ಬೆಲೆ 15 ರೂಪಾಯಿ.

ರೈತನ ಕೈಗೆ ಭರ್ಜರಿ ಆದಾಯ: ಕೋಲಾರದ ಕೆಆರ್​ಎಸ್ ಟೊಮೆಟೊ ಮಂಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದ ರೈತ ವೆಂಕಟರಮಣ ಅವರು ತಂದಿದ್ದ ಟೊಮೆಟೊ ಇವತ್ತು ದಾಖಲೆ ಬೆಲೆಗೆ ಮಾರಾಟವಾಗಿದ್ದು, ಭರ್ಜರಿ ಆದಾಯ ಗಳಿಸಿದ್ದಾರೆ. ವೆಂಕಟರಮಣ ಅವರು ತಮ್ಮ ಒಂದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದು, ಬೆಳೆಗೆ ವಿಪರೀತ ರೋಗಬಾಧೆ ಕಾಡುತ್ತಿದೆ. ಅದರ ನಡುವೆಯೂ ಅವರ ತೋಟದಿಂದ 36 ಬಾಕ್ಸ್ ಮಾರುಕಟ್ಟೆಗೆ ತಂದಿದ್ದರು. ಅವರು ತಂದಿದ್ದ 36 ಬಾಕ್ಸ್​ಗಳು ತಲಾ ₹2200 ರೂಪಾಯಿಗೆ ಹರಾಜಾಗುವ ಮೂಲಕ ದಾಖಲೆ ಬರೆಯಿತು.

ಕೋಲಾರ ಟೊಮೆಟೊಗೆ ಹೆಚ್ಚು ತಾಳಿಕೆ ಗುಣ: ರಾಜ್ಯದಲ್ಲೇ ಅತಿ ಹೆಚ್ಚು ಟೊಮೆಟೊ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಟೊಮೆಟೊ ಬೆಳೆಯಲು ಅನುಕೂಲಕರ ವಾತಾವರಣವಿದ್ದು, ಇಲ್ಲಿ ಬೆಳೆದ ಟೊಮೆಟೊ ಹೆಚ್ಚು ತಾಳಿಕೆ ಬರುತ್ತದೆ. ಹೀಗಾಗಿ ಕೋಲಾರ ಜಿಲ್ಲೆ ಬೆಳೆಯುವ ಟೊಮೆಟೊಗೆ ದೇಶ ಹಾಗೂ ವಿದೇಶಗಳಲ್ಲಿ ಭಾರಿ ಡ್ಯಿಮಾಂಡ್ ಇದೆ. ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ ಕೋಲಾರದ ಎಪಿಎಂಸಿ ಇಲ್ಲಿರುವುದರಿಂದ ವಿವಿಧ ನಗರದ ವ್ಯಾಪಾರಿಗಳು ಹೆಚ್ಚಾಗಿ ಖರೀದಿಗೆ ಇಲ್ಲಿಗೆ ಬರುವರು. ಇದರಿಂದ ರೈತರು ಬೆಳೆದ ಟೊಮೆಟೊಗೆ ಉತ್ತಮ ಬೆಲೆ ಸಿಗುತ್ತದೆ.

ಟೊಮೆಟೊ ಅವಕ ಕಡಿಮೆ ದರ ಗಗನಮುಖಿ.. ಕಳೆದ ಒಂದು ತಿಂಗಳಿಂದ ನಿರಂತರ ಪ್ರತಿದಿನ 100 ರಿಂದ 200 ರೂಪಾಯಿ ಬೆಲೆ ಏರಿಕೆ ಕಾಣುತ್ತಲೇ ಇದೆ. ಜೂನ್ 2ನೇ ವಾರದಿಂದ ಆರಂಭವಾದ ಟೊಮೆಟೊ ಬೆಲೆ ಏರಿಕೆ ನಾಗಾಲೋಟ ಇಂದಿಗೂ ಸಹ ಮುಂದುವರಿದಿದೆ. ರಾಜ್ಯದಲ್ಲೂ ಹವಾಮಾನ ವೈಪರೀತ್ಯ ಮತ್ತು ಹಲವು ರೋಗಬಾಧೆಯಿಂದ ಗುಣಮಟ್ಟದ ಟೊಮೆಟೊ ಬೆಳೆ ಬರದ ಕಾರಣ ಪ್ರಸ್ತುತ ಡಿಮ್ಯಾಂಡ್ ಹೆಚ್ಚಾಗಿದೆ. ಇನ್ನು ಒಂದು ತಿಂಗಳು ಕಾಲ ಕೆಂಪು ಚಿನ್ನ ಟೊಮೆಟೊಗೆ ಬೇಡಿಕೆ ಇರಲಿದೆ ಎನ್ನುವ ಮಾಹಿತಿಯೂ ಮಾರುಕಟ್ಟೆ ವಲಯದಲ್ಲಿ ಚರ್ಚೆಯಾಗುತ್ತಿದೆ.

ಉತ್ತರ ಭಾರತದ ದೆಹಲಿ, ನಾಸಿಕ್, ಗುಜರಾಜ್, ಪಶ್ಚಿಮ ಬಂಗಾಳ, ರಾಜಾಸ್ಥಾನ ಸೇರಿ ಬಾಂಗ್ಲಾ ದೇಶದಿಂದ ಹೆಚ್ಚಿನ ಬೇಡಿಕೆ ಇದೆ. ಆ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಅಲ್ಲಿ ರೈತರು ಬೆಳೆ ಬೆಳೆಯಲಾಗದ ಸ್ಥಿತಿ ಇದೆ. ಇತ್ತ ಕೋಲಾರ ಭಾಗದಲ್ಲಿ ಟೊಮೆಟೊಗೆ ವೈರಸ್ ಬಾಧೆಯೂ ಕಾಡುತ್ತಿದೆ. ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ಟೊಮೆಟೊ ಉತ್ಪಾದನೆ ಇಲ್ಲ. ಪೂರೈಕೆಯೂ ಆಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಕಂಡಿದೆ.

ಕುಸಿದ ಟೊಮೆಟೊ ರಫ್ತು.. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಪ್ರತಿನಿತ್ಯ 700 ರಿಂದ 800 ಲಾರಿ ಲೋಡ್ ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ಟೊಮೆಟೊ ರಫ್ತು ಆಗುತ್ತಿತ್ತು. ಅಷ್ಟರ ಮಟ್ಟಿಗೆ ಜಿಲ್ಲೆಯ ರೈತರು ಟೊಮೆಟೊ ಬೆಳೆಯುತ್ತಿದ್ದರು. ಆದರೆ ಈ ವರ್ಷ ಜಿಲ್ಲೆಯ ರೈತರು ಬೆಳೆದಿರುವ ಬೆಳೆಗೆ ಬಾಧೆ ಕಾಣಿಸಿಕೊಂಡಿದ್ದು, ಟೊಮೆಟೊ ಉತ್ಪಾದನೆ ಕುಂಠಿತಗೊಂಡಿದೆ. ಆದರೆ ಟೊಮೆಟೊ ದರ ಕೇಳಿ, ರೋಗಬಾಧೆಗೆ ಬೆಳೆ ಕೈಕೊಟ್ಟಿದ್ದರಿಂದ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿನಿತ್ಯ ಕೇವಲ ನೂರರಿಂದ ಇನ್ನೂರು ಲಾರಿ ಟೊಮೆಟೊ ಲೋಡ್ ಮಾತ್ರ ರಫ್ತು ಆಗುತ್ತಿದೆ. ಟೊಮೆಟೊ ಬೆಲೆ ಏರಿಕೆ ಲಾಭ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಈ ಬಾರಿ ಸಿಗುತ್ತಿಲ್ಲವೆಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ ಈ ಬೆಲೆ ಇನ್ನೂ ಒಂದು ತಿಂಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ. ಟೊಮೆಟೊ ದಿನದಿಂದ ದಿನಕ್ಕೆ ತನ್ನ ಬೆಲೆ ಹೆಚ್ಚಿಸಿಕೊಳ್ಳುತ್ತಿದ್ದು, ಈಗ ಟೊಮೆಟೊ ಅಕ್ಷರಶಃ ಬಂಗಾರ ಬೆಳೆಯಾಗಿ ಪರಿಣಿಮಿಸುತ್ತಿದೆ. ಬೆಲೆ ಏರಿಕೆ ಪರಿಣಾಮ ಇನ್ನು ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಟೊಮೆಟೊ ಬೆಳೆದ ರೈತರು ತಮ್ಮ ತೋಟಗಳಿಗೆ ಸೆಕ್ಯೂರಿಟಿ ಗಾರ್ಡ್ಗಳನ್ನಿಟ್ಟು ಕಾಯುವ ಸ್ಥಿತಿ ಬಂದರೂ ಆಶ್ಚರ್ಯ ಪಡಬೇಕಿಲ್ಲ.

ಇದನ್ನೂಓದಿ: ಟೊಮೆಟೊ ದರ ಗಗನಮುಖಿ: ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿನ ಆಹಾರದಲ್ಲಿ ಟೊಮೆಟೊ ಕಣ್ಮರೆ..!

Last Updated : Jul 11, 2023, 7:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.