ಕೊಡಗು: ಕೊಡಗಿನ ಕುಲದೇವತೆ ಕಾವೇರಿ ಮಾತೆಗೆ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಭೂಕುಸಿತದಲ್ಲಿ ಸಾವನ್ನಪ್ಪುತ್ತಿದ್ದಂತೆ ಪೂಜಾರಿಕೆಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿದೆ. ಈ ನಡುವೆಯೇ ಬ್ರಾಹ್ಮಣ ಅರ್ಚರು ತಲಕಾವೇರಿಯಲ್ಲಿ ಪೂಜಾ ಕೈಂಕರ್ಯ ಆರಂಭಿಸಿದ್ದಾರೆ.
ಬಳಿಕ ಕಾವೇರಿ ಮಾತೆ ಪೂಜಾರಿಕೆಯ ಹಕ್ಕಿಗಾಗಿ ವಿವಾದ ಸೃಷ್ಟಿಯಾಗಿತ್ತು. ಮೂಲ ನಿವಾಸಿಗಳು ನಾವೇ 250 ವರ್ಷಗಳ ಹಿಂದೆ ನಮ್ಮ ಕುಲದೇವತೆಗೆ ಪೂಜೆ ಸಲ್ಲಿಸುತ್ತಿದ್ದೆವು. ಈಗ ಮತ್ತೆ ನಮಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅಮ್ಮಕೊಡವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಆದರೆ, ವಿವಾದ ಬಗೆಹರಿಯುವುದಕ್ಕೂ ಮುನ್ನವೇ ನಾರಾಯಣ ಆಚಾರ್ ಅವರ ಸಂಬಂಧಿಗಳಾಗಿರುವ ಶಂಕರ ಆಚಾರ್ ಅವರ ಕುಟುಂಬ ಕಾವೇರಿ ಮಾತೆಗೆ ಪೂಜೆ ಆರಂಭಿಸಿದೆ.
250 ವರ್ಷಗಳ ಹಿಂದೆ ಅಮ್ಮ ಕೊಡವರೇ ಕಾವೇರಿ ಮಾತೆಗೆ ಪೂಜೆ ಸಲ್ಲಿಸುತ್ತಿದ್ದೆವು. ಇದುವರೆಗೆ ನಾವು ಸುಮ್ಮನಾಗಿದ್ದೆವು. ಈಗ ದುರಂತದ ಬಳಿಕ ನಮಗೆ ನಮ್ಮ ಜವಾಬ್ದಾರಿ ಮತ್ತು ಹಕ್ಕಿನ ಅರಿವಾಗಿದೆ. ಹೀಗಾಗಿ, ನಾವೇ ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತ್ತೇವೆ. ನಮಗೆ ಪೂಜಾರಿಕೆಯ ಹಕ್ಕನ್ನು ನೀಡುವ ಜೊತೆಗೆ ದೇವಾಲಯ ವ್ಯವಸ್ಥಾಪನಾ ಸಮಿತಿಯಲ್ಲಿಯೂ ಸ್ಥಾನ ಮಾನ ಕೊಡಬೇಕು ಎನ್ನುತ್ತಿದ್ದಾರೆ ಅಮ್ಮಕೊಡವ ಸಮುದಾಯದವರು.
ಆದರೆ, ವ್ಯವಸ್ಥಾಪನಾ ಸಮಿತಿಯ ಮುಖಂಡರು ಇದು ಮುಜರಾಯಿ ಇಲಾಖೆ ದೇವಾಲಯ. ಸರ್ಕಾರದ ಮುಜರಾಯಿ ನಿಯಮಗಳ ಆಧಾರದಲ್ಲಿ ಯಾರಿಗೆ ಪೂಜಾರಿಕೆ ಕೊಡಬೇಕೆಂದು ನಿರ್ಧಾರವಾಗುತ್ತದೆಯೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎನ್ನುತ್ತಿದ್ದಾರೆ. ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರು ಭೂಕುಸಿತದಲ್ಲಿ ಸಾವನ್ನಪ್ಪುತ್ತಿದ್ದಂತೆ ಅವರ ಪೂಜಾರಿಕೆಯ ಹಕ್ಕಿಗಾಗಿ ಆರಂಭವಾಗಿರುವ ವಿವಾದ ಭುಗಿಲೇಳುತ್ತಿರುವಾಗಲೇ ಅರ್ಚಕರ ಕುಟುಂಬಸ್ಥರಿಂದಲೇ ಪೂಜಾರಿಕೆ ಆರಂಭವಾಗಿರೋದು ಅಮ್ಮ ಕೊಡವರ ಕಣ್ಣು ಕೆಂಪಗಾಗುವಂತೆ ಮಾಡಿರೋದಂತು ಸತ್ಯ.