ETV Bharat / state

ಅವೈಜ್ಞಾನಿಕ ಯುಜಿಡಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರ, ಕಾವೇರಿ ಒಡಲು ಸೇರುತಿದೆ ವಿಷ - ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರ

ಹತ್ತಾರು ಮ್ಯಾನ್‍ಹೋಲ್‌ಗಳು ಕಳಪೆಯಾಗಿ ಅವುಗಳಿಂದ ನಿತ್ಯ 5 ಲಕ್ಷಕ್ಕೂ ಹೆಚ್ಚು ಲೀಟರ್‌ ಪ್ರಮಾಣದ ಶೌಚಾಲಯದ ನೀರು ಕಾವೇರಿ ನದಿ ಸೇರುತ್ತಿದೆ. ವೆಟ್‌ವೆಲ್‍ಗಳು ಕೂಡ ಬಹುತೇಕ ಹಾಳಾಗಿವೆ..

unscientific-ugd-works-kodagu-locals-outrage-against-contractor
ಅವೈಜ್ಞಾನಿಕ ಯುಜಿಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರ, ಕಾವೇರಿ ಒಡಲು ಸೇರುತ್ತಿದೆ ವಿಷಕಾರಕ
author img

By

Published : Oct 2, 2020, 8:33 PM IST

ಕೊಡಗು (ಕುಶಾಲನಗರ): ಜೀವ ಜಲ ಪೂರೈಸುವ ಕಾವೇರಿ ನದಿ ಕಲುಷಿತವಾಗಬಾರದೆಂದು ಕೊಡಗಿನ ಪ್ರಮುಖ ವಾಣಿಜ್ಯ ಪಟ್ಟಣ ಕುಶಾಲನಗರದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಳೆದ 30 ತಿಂಗಳಲ್ಲಿ ಶೇ.40ರಷ್ಟು ಕಾಮಗಾರಿ ಮಾಡಿ ₹35 ಕೋಟಿ ಹಣ ಪಡೆದು ಗುತ್ತಿಗೆದಾರ ಎರಡು ವರ್ಷದಿಂದ ನಾಪತ್ತೆಯಾಗಿದ್ದಾನೆ.

ಅವೈಜ್ಞಾನಿಕ ಯುಜಿಡಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರ.. ಕಾವೇರಿ ಒಡಲು ಸೇರುತ್ತಿದೆ ವಿಷ

ಮುಂದಿನ ನಾಲ್ಕು ದಶಕಗಳ ಅವಧಿಗೆ ಪಟ್ಟಣದ ಜನಸಂಖ್ಯೆ 45 ಸಾವಿರದಿಂದ 50 ಸಾವಿರದಷ್ಟು ಬೆಳೆಯಬಹುದೆಂದು ಈ ಯೋಜನೆ ರೂಪಿಸಲಾಗಿತ್ತು. ಆದರೆ, 2017ರಲ್ಲಿ ಯೋಜನೆ ವೆಚ್ಚವನ್ನು ₹53 ಕೋಟಿಗೆ ಹೆಚ್ಚಿಸಲಾಗಿದೆ. ಆದರೂ ಕಾಮಗಾರಿ ಮಾತ್ರ ಇಂದಿಗೂ ಪೂರ್ಣಗೊಂಡಿಲ್ಲ.

ಕುಶಾಲನಗರ, ಮುಳ್ಳುಸೋಗೆ ಮತ್ತು ಮಾದಪಟ್ಟಣಗಳನ್ನೊಳಗೊಂಡು ಒಟ್ಟು 71,865 ಕಿ.ಮೀ ಉದ್ದದ ಒಳಚರಂಡಿ ನಿರ್ಮಾಣವಾಗಬೇಕಿತ್ತು. 2449 ಮ್ಯಾನ್‍ಹೋಲ್ ಮತ್ತು 10 ಮೀಟರ್ ವ್ಯಾಸದ 3 ವೆಟ್‍ವೆಲ್ ಹಾಗೂ ಎರಡು ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಮಾಡಬೇಕಿತ್ತು. ಆದರೆ, ಈವರೆಗೆ 50,000 ಕಿ.ಮೀ ಉದ್ದದ ಒಳಚರಂಡಿ ಮಾತ್ರ ನಿರ್ಮಿಸಲಾಗಿದೆಯಷ್ಟೇ..

2449 ಮ್ಯಾನ್‍ಹೋಲ್‌ಗಳಲ್ಲಿ 1000 ಸಾವಿರದಷ್ಟು ಮ್ಯಾನ್‍ವೋಲ್‍ಗಳಷ್ಟೇ ಆಗಿವೆ. ಇದರಲ್ಲೂ ಬಹುತೇಕ ಮ್ಯಾನ್‍ಹೋಲ್‌ಗಳನ್ನು ನಿಯಮ ಮೀರಿ ಕಾವೇರಿ ನದಿದಂಡೆಯಲ್ಲೇ ನಿರ್ಮಿಸಿರುವುದರಿಂದ ಬಹುತೇಕ ಮ್ಯಾನ್‍ಹೋಲ್‌ಗಳು ಮೂರು ವರ್ಷಗಳಿಂದ ಬರುತ್ತಿರುವ ಕಾವೇರಿ ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಹತ್ತಾರು ಮ್ಯಾನ್‍ಹೋಲ್‌ಗಳು ಕಳಪೆಯಾಗಿ ಅವುಗಳಿಂದ ನಿತ್ಯ 5 ಲಕ್ಷಕ್ಕೂ ಹೆಚ್ಚು ಲೀಟರ್‌ ಪ್ರಮಾಣದ ಶೌಚಾಲಯದ ನೀರು ಕಾವೇರಿ ನದಿ ಸೇರುತ್ತಿದೆ. ವೆಟ್‌ವೆಲ್‍ಗಳು ಕೂಡ ಬಹುತೇಕ ಹಾಳಾಗಿವೆ.

ಕಾಮಗಾರಿ ಮಾಡುತ್ತಿದ್ದ ಆಂಧ್ರದ ಗುತ್ತಿಗೆದಾರರನಿಗೆ ₹35 ಕೋಟಿ ಹಣ ಸಂದಾಯವಾಗಿದೆ. ಎರಡು ವರ್ಷಗಳಿಂದ ಆತ ನಾಪತ್ತೆಯಾಗಿದ್ದಾನೆ. ನಾಡಿನ ಜೀವನದಿ ಕಾವೇರಿ ರಾಜ್ಯದ ಹಲವು ಜಿಲ್ಲೆಗಳ ಕೋಟ್ಯಂತರ ಜನರಿಗೆ ಜೀವಜಲ ಪೂರೈಸುತ್ತದೆ. ಜಲ ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕೆಂಬ ಉದ್ದೇಶದಿಂದ ಮಾಡಿದ್ದ ಒಳಚರಂಡಿ ಕಾಮಗಾರಿಯಿಂದಲೇ ಲಕ್ಷಾಂತರ ಲೀಟರ್ ಕಲುಷಿತ ನೀರು ನದಿಗೆ ಸೇರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.