ಕೊಡಗು: ನೀರಿನಲ್ಲಿ ಮುಳುಗುತ್ತಿದ್ದ ಅಕ್ಕನ ಮಗನನ್ನು ರಕ್ಷಿಸಲು ಹೋಗಿ ಇಬ್ಬರೂ ಕೂಡ ಕಾವೇರಿ ನದಿಯಲ್ಲಿ ನೀರುಪಾಲಾದ ಘಟನೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.
ನಾಸಿರ್ (44), ಸೈಯದ್ ಮೋಹಿನ್(14) ಮೃತರು. ಕಾಲುಜಾರಿ ನೀರಿನಲ್ಲಿ ಮುಳುಗುತ್ತಿದ್ದ ಮೋಹಿನ್ನನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ಮೋಹಿನ್ನ ಮಾವ ನಾಸಿರ್ ಕೂಡ ಮೃತಪಟ್ಟಿದ್ದಾರೆ. ಸೈಯದ್ ಮೋಹಿನ್ ರಂಜಾನ್ ಹಬ್ಬಕ್ಕೆ ಬೆಂಗಳೂರಿನಿಂದ ಮಾವನ ಮನೆಗೆ ಬಂದಿದ್ದ ಎನ್ನಲಾಗಿದೆ.
ರಂಜಾನ್ ಹಬ್ಬದಂದು ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಇಂತಹ ಘಟನೆ ಮರುಕಳಿಸಿದ್ದು, ಸ್ಥಳೀಯರಲ್ಲಿ ಹಾಗೂ ಸಂಬಂಧಿಕರಲ್ಲಿ ತೀವ್ರ ನೋವುಂಟುಮಾಡಿದೆ.