ಮಡಿಕೇರಿ(ಕೊಡಗು): ಆದಿವಾಸಿ ಗಿರಿಜನರಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಆದಿವಾಸಿ ಜನರು ತಮ್ಮದೇ ಆದ ಆಚಾರ-ವಿಚಾರ, ಕಲೆ, ಸಂಸ್ಕಂತಿಯನ್ನು ಹೊಂದಿದ್ದಾರೆ. ಇಂತಹ ಪ್ರಾಚೀನ ಕಲೆ, ಸಂಸ್ಕೃತಿ ಪ್ರಪಂಚಕ್ಕೆ ಪಸರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಆದಿವಾಸಿ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಮೆಚ್ಚುವಂತದ್ದು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಜಿ ಬೋಪಯ್ಯ ಹೇಳಿದ್ದಾರೆ.
ಆದಿವಾಸಿ ಗಿರಿಜನರ ಕಲೆ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಾಳಗೋಡಿವಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಗಿರಿಜನ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕರಾದ ಕೆ.ಜಿ. ಬೋಪಯ್ಯ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಮಲೆ ಕುಡಿಯ, ಯರವ, ಪಣಿಯ ಹೀಗೆ ಹಲವಾರು ಜನಾಂಗದವರು ಒಂದೆಡೆ ಸೇರಿ ತಮ್ಮ ಸಂಸ್ಕೃತಿ ಬಿಂಬುಸುತ್ತ ನೃತ್ಯಗಳನ್ನು ಮಾಡಿ ಸಂಭ್ರಮಸಿದ್ದರು. ಕೊಡಗಿನಲ್ಲಿ ಹಬ್ಬದಂತೆ ನಡೆದ ಗಿರಿಜನ ಉತ್ಸವದಲ್ಲಿ ಆದಿವಾಸಿ ಗಿರಿಜನರ ಪ್ರಾಚೀನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದರು.
ಅರಣ್ಯೋತ್ಪನ್ನಗಳನ್ನೇ ಬಳಸಿ ಸುಂದರ ವಸ್ತ್ರವಿನ್ಯಾಸ ಮಾಡಿದ್ದರು. ವಿವಿಧ ಕಲಾತಂಡಗಳು ಗಿರಿಜನ ಕಲೆಯ ಅನಾವರಣಗೊಳಿಸುವ ಮನರಂಜನಾ ಕಾರ್ಯಕ್ರಮಗಳನ್ನು ನೀಡಿದರು. ಕೊಡಗು ಜಿಲ್ಲಾಧಿಕಾರಿ ಡಾ. ಸತೀಶ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಆದಿವಾಸಿಗಳ ಬಂಬೂ ಬಿರಿಯಾನಿ: ತಯಾರಿಯ ವಿಧಾನ ಇಲ್ಲಿದೆ ನೋಡಿ