ಕೊಡಗು: ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಮಂಜಿನ ನಗರಿಯಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ಆದರೆ ಪ್ರವಾಸಿಗರು ಮಾತ್ರ ಮಾಸ್ಕ್ ಧರಿಸದೆ ಬರುತ್ತಿರುವುದು ಕೊರೊನಾ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.
ಹೋಂ ಸ್ಟೇ, ಹೊಟೇಲ್, ರೆಸಾರ್ಟ್‌ಗಳನ್ನು ನಂಬಿಕೊಂಡು ಬದುಕು ಕಟ್ಟಿಕೊಂಡ ಅದೆಷ್ಟೋ ಕುಟುಂಬಗಳು ಇಲ್ಲಿವೆ. ನೈಸರ್ಗಿಕವಾಗಿ ಹಸಿರು ರಾಶಿಯನ್ನು ಹೊದ್ದು ಮಲಗಿರುವ ಗಿರಿ ಶ್ರೇಣಿಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ವಿಶೇಷ ಅನುಭವ. ವಾರಾಂತ್ಯದಲ್ಲಿ ಹೊರಜಿಲ್ಲೆ ಮತ್ತು ಅಂತರ್‌ರಾಜ್ಯಗಳಿಂದ ಪ್ರವಾಸಿಗರು ಇಲ್ಲಿನ ಮೋಹಕ ತಾಣಗಳತ್ತ ಮುಖ ಮಾಡುತ್ತಿದ್ದಾರೆ.
ಲಾಕ್‌ಡೌನ್ ಸಡಿಲವಾದ ನಂತರ ಪ್ರವಾಸೋದ್ಯಮ ಚೇತರಿಕೆ ಹಾದಿಯಲ್ಲಿ ಸಾಗುತ್ತಿದೆ. ಜಿಲ್ಲೆಯ ರಾಜಾ ಸೀಟ್, ಅಬ್ಬಿಫಾಲ್ಸ್, ಕೋಟೆ, ಕಾವೇರಿ ನಿಸರ್ಗಧಾಮ, ಮಲ್ಲಹಳ್ಳಿ ಫಾಲ್ಸ್ ಹೀಗೆ ಹಲವು ತಾಣಗಳಿಗೆ ಬರುತ್ತಿರುವ ಪ್ರವಾಸಿಗರು ಮಾಸ್ಕ್ ಬಳಸದಿರುವುದು ಕೊರೊನಾ ಉಲ್ಭಣಿಸುವ ಆತಂಕವನ್ನು ಹೆಚ್ಚಾಗಿಸುತ್ತಿದೆ. ಸಾಮಾಜಿಕ ಅಂತರ ಮರೆಯುತ್ತಿರುವ ಪ್ರವಾಸಿಗರಿಗೆ ಪ್ರವಾಸೋದ್ಯಮ ಇಲಾಖೆಯೂ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ.