ಕೊಡಗು : ಮಳೆಗಾಲಕ್ಕೂ ಮೊದಲೇ ಕೊಡಗಿನಲ್ಲಿ ಮಳೆ ಆರಂಭವಾಗಿದೆ. ದಿಢೀರನೇ ಜೋರಾಗಿ ಸುರಿದ ಮಳೆಯಿಂದ ಕೊಡಗಿನ ಜನ ಬೆಚ್ಚಿಬಿದ್ದಿದ್ದಾರೆ. ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಕಕ್ಕಬ್ಬೆ ,ಮೂರ್ನಾಡು,ಸುಂಟಿಕೊಪ್ಪ ಭಾಗದಲ್ಲೂ ಮಳೆ ಉತ್ತಮ ಮಳೆಯಾಗಿದೆ. ಶನಿವಾರ ಮಧ್ಯಾಹ್ನದ ನಂತರ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು, ಅರ್ಧ ಗಂಟೆಗೂ ಹೆಚ್ಚುಕಾಲ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಭಾರಿ ಮಳೆಯಿಂದಾಗಿ ಪ್ರವಾಸಿಗರು ಮತ್ತು ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಮಧ್ಯಾಹ್ನದ ನಂತರ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಮಳೆ ಬಿದ್ದಿರುವ ಪರಿಣಾಮ ಕಾಫಿ ತೋಟಗಳಿಗೆ ನೀರು ಹಾಯಿಸುತ್ತಿದ್ದ ಕಾಫಿ ಬೆಳಗಾರಿಗೆ ಅನುಕೂಲವಾಗಿದೆ. ಈ ಸಮಯದಲ್ಲಿ ಕಾಫಿ ಗಿಡಕ್ಕೆ ಸರಿಯಾಗಿ ನೀರು ಸಿಕ್ಕಿದರೆ ಉತ್ತಮವಾಗಿ ಹೂ ಬಿಡುತ್ತದೆ. ಮಳೆಯಿಂದಾಗಿ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಓದಿ : ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕನಾದ್ರೂ 20 ಕಾಲೇಜುಗಳ ಒಡೆಯ.. ಇಲ್ಲೋರ್ವ ಕುಬೇರ ಟೀಚರ್!