ಕೊಡಗು: ನಿನ್ನೆ ದುಬೈನಿಂದ ಕೊಡಗಿಗೆ ಬಂದಿದ್ದ 35 ವರ್ಷದ ವ್ಯಕ್ತಿಯಲ್ಲಿ ಕೊರೊನಾ ದೃಢಪಟ್ಟಿತ್ತು. ಸೋಂಕಿತನಿದ್ದ ಬಸ್ಸಿನಲ್ಲಿ ಜಿಲ್ಲೆಯ 3 ಶಿಕ್ಷಕರು ಇದ್ದರು ಎಂದು ತಿಳಿದುಬಂದಿದೆ.
ದುಬಾರೆ ಶಾಲೆಯ ಶಿಕ್ಷಕಿ, ಪಾಲಿಬೆಟ್ಟದ ತಮಿಳು ಶಾಲೆಯ ಶಿಕ್ಷಕ ಮತ್ತು ಕೊಂಡಗೇರಿಯ ಶಿಕ್ಷಕರು ಕೊವಿಟ್-10 ಸೋಂಕಿತನಿದ್ದ ಬಸ್ಸಿನಲ್ಲೇ ಪ್ರಯಾಣಿಸಿದ್ದರು. ಮಾ.16 ರಿಂದ ನಿನ್ನೆಯವರೆಗೆ ಶಿಕ್ಷಕರು ಶಾಲೆಗೆ ಹೋಗಿದ್ದಾರೆ. ಆದರೆ 14 ರಿಂದಲೇ ಶಾಲೆಗಳಿಗೆ ರಜೆ ಇದ್ದಿದ್ದರಿಂದ ವಿದ್ಯಾರ್ಥಿಗಳು ಸೋಂಕಿನಿಂದ ಪಾರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಓದಿ:ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢ: ಜಿಲ್ಲಾಧಿಕಾರಿ ಸ್ಪಷ್ಟನೆ
ಈ ಮೂವರು ಶಾಲೆಯ ಇತರ ಶಿಕ್ಷಕರೊಂದಿಗೆ ಸಂಪರ್ಕ ಹೊಂದಿದ್ದಾರೆ. ಈಗಾಗಲೇ ಈ 3 ಶಾಲೆಗಳಿಗೂ ಹೋಂ ಕ್ವಾರಂಟೈನ್ ನಡೆಸಲಾಗಿದೆ.
ನಿನ್ನೆ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಗೆ ಸೋಂಕು ಇರುವುದು ಖಚಿತವಾಗಿದ್ದು, ಬಳಿಕ 3 ಶಾಲೆಗಳ ಶಿಕ್ಷಕರಿಗೂ ಅವರವರ ಮನೆಗಳಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ.