ಕೊಡಗು: ಮೈತ್ರಿ ಸರ್ಕಾರದ ಶಾಸಕರ ಸಂಖ್ಯೆ ಕುಸಿಯುವ ಆತಂಕಕ್ಕೆ ಒಳಗಾಗಿರುವ ಕಾರಣ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ರಾಜಕಾರಣ ಮತ್ತೆ ಮುನ್ನೆಲೆಗೆ ಬಂದಿತ್ತು. ಆದರೆ, ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಕೊಡಗಿನ ಪ್ಯಾಂಡಿಗ್ಟಂನ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲು ತೀರ್ಮಾನಿಸಿದ್ದ ಜೆಡಿಎಸ್ ಶಾಸಕರ ವಾಸ್ತವ್ಯವನ್ನು ಕಡೇ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.
ಕುಶಾಲನಗರದ 7ನೇ ಹೊಸಕೋಟೆಯ ರೆಸಾರ್ಟ್ನಲ್ಲಿ ಜೆಡಿಎಸ್ ಶಾಸಕರಿಗೆ 35 ಐಶಾರಾಮಿ ರೂಮ್‌ಗಳನ್ನು ಬುಕ್ ಕೂಡ ಮಾಡಲಾಗಿತ್ತು. ಆದರೆ, ಜೆಡಿಎಸ್ ಶಾಸಕರ ಕೊಡಗು ರೆಸಾರ್ಟ್ ವಾಸ್ತವ್ಯವನ್ನು ಕಡೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಕೊಡಗಿನ ರೆಸಾರ್ಟ್ ವಾಸ್ತವ್ಯ ರದ್ದುಪಡಿಸಿ ದೇವನಹಳ್ಳಿಯ ರೆಸಾರ್ಟ್ಗೆ ತೆರಳಿದ್ದಾರೆ. ರೆಸಾರ್ಟ್ ಬಳಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ವಾಪಸ್ ಮರಳಿದ್ದಾರೆ.