ಮಡಿಕೇರಿ: ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಇದೀಗ ಕೊಡಗಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲೂ ಭಯ ಹುಟ್ಟಿಸಿದೆ.
ತಮಿಳುನಾಡು, ಅಸ್ಸೋಂ ಸೇರಿದಂತೆ ವಿವಿಧ ರಾಜ್ಯಗಳಿಂದ ಕೂಲಿ ಕೆಲಸ ಅರಸಿ ಬಂದಿದ್ದ ಕಾರ್ಮಿಕರು, ಜಿಲ್ಲೆಯಿಂದ ತವರು ರಾಜ್ಯಗಳಿಗೆ ವಾಪಸ್ ಹೊರಟಿದ್ದಾರೆ. ಜಿಲ್ಲೆಯಲ್ಲಿರುವ ಹೊರ ರಾಜ್ಯದ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹೋಗುವುದಕ್ಕಾಗಿ ಮಡಿಕೇರಿ ಬಸ್ ನಿಲ್ದಾಣದಲ್ಲಿ ಜಮಾಯಿಸಿರುವ ದೃಶ್ಯ ಕಂಡುಬಂದಿದೆ.
ರಾಜ್ಯ ಸರ್ಕಾರ ಈಗಾಗಲೇ ಸಭೆ, ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ಆದೇಶ ಹೊರಡಿಸಿದ ಹಿನ್ನೆಲೆ ಆತಂಕಗೊಂಡಿರುವ ಕಾರ್ಮಿಕರು, ಸ್ವಗ್ರಾಮಗಳತ್ತ ಮುಖ ಮಾಡಿದ್ದಾರೆ.