ETV Bharat / state

ಕೊರೊನಾ ಮಾರಿಗೆ ತತ್ತರಿಸಿದ ಕೊಡಗು: ಕಠಿಣ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ - strict rules implimented in kodagu

ದೇಶಾದ್ಯಂತ ಬಿರುಸಿನ ವೇಗದಲ್ಲಿ ಹರಡುತ್ತಿರುವ ಕೊರೊನಾ 2ನೇ ಅಲೆ ಸಿಕ್ಕ ಸಿಕ್ಕವರನ್ನು ಬಲಿ ಪಡೆಯುತ್ತಿದೆ. ಹೀಗಾಗಿ ವೈರಸ್​ನಿಂದ ನಲುಗಿರುವ ಕೊಡಗಿನ ಜನತೆಯ ಉಳಿವಿಗಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

strict-rules-implimented-by-district-administration-in-kodagu
ಕೊಡಗು
author img

By

Published : May 4, 2021, 4:26 PM IST

ಕೊಡಗು: ದಿನದಿಂದ ದಿನಕ್ಕೆ ವ್ಯಾಪಕವಾಗಿ ಹೆಚ್ಚುತ್ತಿರುವ ಕೊರೊನಾ 2ನೇ ಅಲೆಗೆ ಜಿಲ್ಲೆಯ ಜನ ಅಕ್ಷರಶಃ ತತ್ತರಗೊಂಡಿದ್ದಾರೆ. ಹೀಗಾಗಿ ವೈರಸ್​ ಹರಡುವಿಕೆ ತಡೆಯಲು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.

ಜಿಲ್ಲಾದ್ಯಂತ ಸರ್ಕಾರ ಜಾರಿಗೊಳಿಸಿರುವ ಕರ್ಫ್ಯೂವನ್ನು ಮತ್ತಷ್ಟು ಕಠಿಣ ಮಾಡಲಾಗಿದೆ. ಅಲ್ಲದೇ, ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್​ ಇರಲಿದ್ದು, ಈ ಹಿನ್ನೆಲೆ ಮಧ್ಯಾಹ್ನ 12 ಗಂಟೆಯಿಂದ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ರಸ್ತೆಗಿಳಿದ ಪೊಲೀಸರು

ಮಡಿಕೇರಿ ಟೋಲ್​ ಗೇಟ್​ ಬಳಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದ್ದು, ಅಗತ್ಯ ವಾಹನ ಹೊರತುಪಡಿಸಿ ಉಳಿದೆಲ್ಲಾ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಮಂಗಳವಾರ ಮತ್ತು ಶುಕ್ರವಾರ 6ರಿಂದ 12 ಗಂಟೆಯವರೆಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ಓದಿ: ಕಾಳಸಂತೆಯಲ್ಲಿ ರೆಮ್​ಡಿಸಿವಿರ್ ಮಾರಾಟಕ್ಕೆ ಸಿಎಂ ಗರಂ: ತನಿಖೆ ನಡೆಸಿ ಕ್ರಮದ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.