ETV Bharat / state

ತೀರ್ಥೋದ್ಭವ ವೀಕ್ಷಣೆಗೆ ಭಕ್ತರಿಗೆ ಮುಕ್ತ ಅವಕಾಶ: ಶ್ರೀನಿವಾಸ ಪೂಜಾರಿ

ಅ.17 ರಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಪವಿತ್ರ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಇಂತಹ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

srinivas-poojary-talk-about-thirthodvava-in-kodagu
ತೀರ್ಥೋದ್ಭವ
author img

By

Published : Oct 6, 2021, 10:56 PM IST

ಕೊಡಗು: ಇದೇ ಅಕ್ಟೋಬರ್ 17ರಂದು ಜರುಗುವ ಕೊಡಗಿನ ಪವಿತ್ರ ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಎರಡು ದಿನದ ತೀರ್ಥೋದ್ಭವಕ್ಕೆ ತಲಕಾವೇರಿಗೆ ಬರುವ ಭಕ್ತರು ಕಾಲು ನಡಿಗೆಯಲ್ಲಿಯೇ ಬರಬೇಕು. ವಾಹನಗಳನ್ನು ಭಾಗಮಂಡಲದಲ್ಲಿ ನಿಲ್ಲಿಸಬೇಕು. ಕೋವಿಡ್ ವರದಿ ಮತ್ತು ವ್ಯಾಕ್ಸಿನೇಷನ್‌ ಕಡ್ಡಾಯ ಮಾಡಲಾಗಿತ್ತು.

ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಆದರೆ, ಈ ನಿಯಮದ ವಿರುದ್ದ ಕೊಡಗಿನ ಮೂಲ ನಿವಾಸಿಗಳು ತಿರುಗಿ ಬಿದ್ದ ನಂತರ ಮುಖ್ಯಮಂತ್ರಿ ಬೊಮ್ಮಾಯಿ ಅವರ ಗಮನಕ್ಕೆ ಬಂದಿತ್ತು. ಹೀಗಾಗಿ, ಜಿಲ್ಲಾಡಳಿತ ಕೊಡಗಿನ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಅವಕಾಶ ಮಾಡಿಕೊಟ್ಟಿದೆ. ಭಕ್ತರು ದಯವಿಟ್ಟು ಕೋವಿಡ್ ನಿಯಮ ಪಾಲನೆ‌ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಕೊಡಗಿನ ಭಕ್ತರ ಭಾವನೆಗೆ ಸರ್ಕಾರ ಗೌರವ ನೀಡಿದೆ. ಪವಿತ್ರ ತೀರ್ಥ ಕೊಂಡೊಯ್ಯಲು ಅವಕಾಶ ಕಲ್ಪಿಸಿದೆ. ಕೊಡಗಿನ ಜನ ಸ್ವಯಂ ನಿಯಮ ಪಾಲಿಸಿ ತೀರ್ಥೋದ್ಭವ ವೀಕ್ಷಿಸುತ್ತಾರೆ ಎಂಬ ನಂಬಿಕೆ ಇದೆ. ಆದ್ರೆ ತಲಕಾವೇರಿಯ ಕೊಳದಲ್ಲಿ ಪುಣ್ಯ ಸ್ನಾನ ಮಾಡಲು ಅವಕಾಶ ಇಲ್ಲ. ಕೊಡಗಿನ ಜನರಿಗೆ ಮತ್ತು ಹೊರಗಿನ ಭಕ್ತರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಅವರು ಹೇಳಿದರು.

ಅ.17 ರಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಪವಿತ್ರ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಇಂತಹ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ ಎಂದರು.

ಶಾಸಕ ಕೆ. ಜಿ ಬೋಪಯ್ಯ ಹೇಳಿಕೆ

ತಲಕಾವೇರಿ ವ್ಯವಸ್ಥಾಪನಾ ಸಮಿತಿಯಿಲ್ಲದೇ ಮೊದಲ ಬಾರಿಗೆ ತೀರ್ಥೋದ್ಭವ ಆಯೋಜಿಸಬೇಕಾಗಿದೆ. ತಲಕಾವೇರಿಯ ಕೊಳದಲ್ಲಿ ತೀರ್ಥಸ್ನಾನಕ್ಕೆ ಅವಕಾಶ ಇಲ್ಲ. ನಾಳೆ ಅ.7 ರಂದು ಭಾಗಮಂಡಲದಲ್ಲಿ ಸಭೆ ನಡೆಸಿ ತೀರ್ಥೋದ್ಭವ ವ್ಯವಸ್ಥಿತವಾಗಿ ನಡೆಯುವ ಬಗ್ಗೆ ಚರ್ಚಿಸಲಾಗುತ್ತದೆ. ಸಭೆಯಲ್ಲಿ ಸಾಕಷ್ಟು ಚರ್ಚೆಯ ಬಳಿಕ ಕೈಗೊಳ್ಳಬೇಕಾದ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗುತ್ತದೆ. ನಾನು ಯಾವುದೇ ಗೊಂದಲದ ಹೇಳಿಕೆ ನೀಡಿಲ್ಲ ಎಂದು ಶಾಸಕ ಕೆ. ಜಿ ಬೋಪಯ್ಯ ತಿಳಿಸಿದ್ದಾರೆ.

ಈ ಮೊದಲು ಉಸ್ತುವಾರಿ ಸಚಿವರ ಸಭೆಯಲ್ಲಿ ಭಕ್ತರಿಗೆ ಅವಕಾಶ ಮಾಡಿಕೊಡಿ ಎಂದು ನೀವು ಹೇಳಿದ್ದೀರಲ್ಲ? ಎಂಬ ಪತ್ರಕತ೯ರ ಪ್ರಶ್ನೆಗೆ 'ನೋ ಕಾಮೆಂಟ್ಸ್' ಎಂದರು. ಉಸ್ತುವಾರಿ ಸಚಿವರ ತೀರ್ಮಾನಗಳ ಬಗ್ಗೆ ಉತ್ತರಿಸಲಾರೆ ಎಂದು ಹೇಳಿದರು.

ಓದಿ: ನವರಾತ್ರಿಯಲ್ಲಿ ಶಕ್ತಿ ದೇವತೆ ಪೂಜೆಯ ವಿಶೇಷತೆ ಏನು..?: ಇಲ್ಲಿದೆ ವಿಶೇಷ ಸಂದರ್ಶನ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.