ಕೊಡಗು: ವರುಣನ ಅಬ್ಬರಕ್ಕೆ ಸಡಿಲಗೊಂಡಿದ್ದ ಗುಡ್ಡದ ಮಣ್ಣು ಕುಸಿದಿರುವ ಘಟನೆ ನಗರದ ಹಳೆ ಬಸ್ ನಿಲ್ದಾಣದ ಸಮೀಪ ನಡೆದಿದೆ. ಮಣ್ಣು ಇದ್ದಕ್ಕಿದ್ದಂತೆ ಕುಸಿದು ಸ್ಥಳೀಯರನ್ನು ಆಂತಕಕ್ಕೀಡು ಮಾಡಿದೆ.
ಕಳೆದ ಬಾರಿ ಗುಡ್ಡ ಕುಸಿದು ಬಸ್ ನಿಲ್ದಾಣ ಸ್ಥಳಾಂತರವಾಗಿತ್ತು. ನಂತರ ಪುನಃ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ನಡುವೆಯೂ 2 ನೇ ಬಾರಿಗೆ ಗುಡ್ಡದ ಮಣ್ಣು ಕುಸಿದಿದೆ.
ಜುಲೈ 19 ರಿಂದ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 'ರೆಡ್ ಅಲರ್ಟ್' ಘೋಷಿಸಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರದಿಂದ ಇರುವಂತೆ ಮನವಿ ಮಾಡಿತ್ತು.