ETV Bharat / state

ಕೊಡಗು ಸೈನಿಕ ಶಾಲೆಯಲ್ಲಿ ಉದ್ಯೋಗಾವಕಾಶ; ಹಲವು ಹುದ್ದೆಗಳಿಗೆ ನೇಮಕಾತಿ - ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ

ಕೊಡಗಿನಲ್ಲಿರುವ ಸೈನಿಕ ಶಾಲೆಯಲ್ಲಿ ಪಿಟಿಐ, ವಾರ್ಡನ್​ ಸೇರಿದಂತೆ ಒಟ್ಟು 8 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

Recruitment in Kodagu Sainik School for warden and various post

author img

By ETV Bharat Karnataka Team

Published : Oct 6, 2023, 3:45 PM IST

ಕೇಂದ್ರ ರಕ್ಷಣಾ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ:

  • ಆರ್ಟ್​ ಮಾಸ್ಟರ್-​ 1
  • ಬ್ಯಾಂಡ್​ ಮಾಸ್ಟರ್- 1
  • ವಾರ್ಡನ್- 5
  • ಪಿಇಎಂ/ಪಿಟಿಐ (ಮಹಿಳಾ ಅಭ್ಯರ್ಥಿಗಳು)- 1

ವಿದ್ಯಾರ್ಹತೆ: ಹುದ್ದೆಗೆ ಅನುಸಾರವಾಗಿ ಪದವಿ, ಡಿಪ್ಲೋಮಾ

ವಯೋಮಿತಿ: ಪಿಇಎಂ/ ಪಿಟಿಐ ಹುದ್ದೆಗಳಿಗೆ 18 ರಿಂದ 50 ವರ್ಷ ವಯೋಮಾನವರು ಅರ್ಜಿ ಸಲ್ಲಿಸಬಹುದು. ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 21 ರಿಂದ 35 ವರ್ಷ ವಯೋಮಿತಿ ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ನಿಗದಿತ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಕೆಳಗೆ ನೀಡಿದ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 400 ರೂ ಅರ್ಜಿ ಶುಲ್ಕವಿದೆ. ಅರ್ಜಿ ಶುಲ್ಕವನ್ನು ಡಿಮಾಂಡ್​ ಡ್ರಾಫ್ಟ್​ ಮೂಲಕ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ವಿಳಾಸ: ಪ್ರಾಂಶುಪಾಲರು, ಸೈನಿಕ್​ ಸ್ಕೂಲ್, ಅಂಚೆ ಕಚೇರಿ: ಕುಡಿಗೆ, ಕುಶಾಲನಗರ​​ ತಾಲೂಕು, ಕೊಡಗು. ಪಿನ್​ ಕೋನ್​- 571232. ಅರ್ಜಿ ಸಲ್ಲಿಸುವಾಗ ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬುದರ ಕುರಿತು ಸ್ಪಷ್ಟವಾಗಿ ನಮೂದಿಸಬೇಕು. ಅರ್ಜಿಗಳನ್ನು ಅಂಚೆ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದ್ದು, ಖುದ್ದು ಸಲ್ಲಿಕೆಗೆ ಅವಕಾಶವಿಲ್ಲ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ, ಕೌಶಲ್ಯ ಮತ್ತು ಪ್ರಯೋಗಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಕ್ಟೋಬರ್​ 3ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅಕ್ಟೋಬರ್​​ 20 ಕಡೇಯ ದಿನ. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ sainikschoolkodagu.edu.inಗೆ ಭೇಟಿ ನೀಡಿ.

ಇದನ್ನೂ ಓದಿ: BEMLನಲ್ಲಿ ಕೆಲಸ ಮಾಡುವ ಆಸಕ್ತಿ ಇದೆಯೇ? 119 ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.