ಕೊಡಗು: ನಟಿ ರಶ್ಮಿಕಾ ಮಂದಣ್ಣ ಅವರ ತಂದೆ ಮದನ್ ಮಂದಣ್ಣ ಒಬ್ಬ ದೇವರಂಥ ವ್ಯಕ್ತಿಯಾಗಿದ್ದು ಅವರು ಯಾವುದೇ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಸ್ನೇಹಿತ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಲ್ಲಿ ಅಷ್ಟು ದೊಡ್ಡ ಪ್ರಮಾಣದ ಆಸ್ತಿ ಇರಲಿಲ್ಲ. ಇತ್ತೀಚೆಗೆ ವ್ಯವಾರದಲ್ಲೂ ನಷ್ಟವನ್ನು ಅನುಭವಿಸಿದರು. ಅವರು ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದು 15 ವರ್ಷಗಳ ಹಿಂದೆ.
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ನಾಯಕರ ಜತೆಗೂ ಸಂಬಂಧ ಇರಲಿಲ್ಲ. ಹಾಗಿದ್ದರೆ ಅವರ ಮಗಳ ನಿಶ್ಚಿತಾರ್ಥಕ್ಕೆ ಬರಬೇಕಿತ್ತು ಅಲ್ಲವೇ..? ಮಗಳು ರಶ್ಮಿಕಾ ದುಡಿದ ಹಣದಲ್ಲಿ ಅವರು ಬಿಟ್ಟಂಗಾಲ ಬಳಿ ಜಾಗ ಖರೀದಿಸಿದ್ದರು. ಕಾನೂನು ಬಾಹಿರವಾಗಿ ಆಸ್ತಿ ಅವರ ಬಳಿ ಇಲ್ಲ. ಅವರ ಬಳಿ ಕಪ್ಪು ಹಣ ಏನೂ ಇಲ್ಲ ಎಂದು ತಿಳಿಸಿದ್ದಾರೆ.
ಇಂದು ಐಟಿ ಅಧಿಕಾರಿಗಳು ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಮಂದಣ್ಣ ಮನೆ ಮೇಲೆ ದಾಳಿ ಮಾಡಿರುವ ಅದಾಯ ತೆರಿಗೆ ಅಧಿಕಾರಿಗಳು ಮನೆ ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.